ರೇಣುಕಾ ಸ್ವಾಮಿ ಹತ್ಯೆ ಕೇಸ್; ಯಾರೇ ತಪ್ಪು ಮಾಡಿದ್ದರೂ ಕಠಿಣ ಶಿಕ್ಷೆಯಾಗಬೇಕು-ಕಾರಜೋಳ

|

Updated on: Jun 12, 2024 | 8:51 PM

ನಟ ದರ್ಶನ್ ಮತ್ತು ಗ್ಯಾಂಗ್​ನಿಂದ ಅಭಿಮಾನಿ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ(Chitradurga)ದಲ್ಲಿ ಮಾತನಾಡಿದ ಬಿಜೆಪಿ ಸಂಸದ ಗೋವಿಂದ ಕಾರಜೋಳ(Govind Karjol), ‘ನಾಗರಿಕ ಸಮಾಜದಲ್ಲಿ ಇಂತಹ ಅಹಿತಕರ ಘಟನೆ ಆಗಬಾರದು. ರೇಣುಕಾ ಸ್ವಾಮಿಯಿಂದ ನೋವಾಗಿದ್ದರೆ ದೂರು ನೀಡಬಹುದಿತ್ತು. ಆದರೆ ಇಂತಹ ಕೃತ್ಯ ಎಸಗಬಾರದಿತ್ತು ಎಂದರು.

ಚಿತ್ರದುರ್ಗ, ಜೂ.12: ನಟ ದರ್ಶನ್ ಮತ್ತು ಗ್ಯಾಂಗ್​ನಿಂದ ಅಭಿಮಾನಿ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ(Chitradurga)ದಲ್ಲಿ ಮಾತನಾಡಿದ ಬಿಜೆಪಿ ಸಂಸದ ಗೋವಿಂದ ಕಾರಜೋಳ(Govind Karjol), ‘ನಾಗರಿಕ ಸಮಾಜದಲ್ಲಿ ಇಂತಹ ಅಹಿತಕರ ಘಟನೆ ಆಗಬಾರದು. ಸರ್ಕಾರ ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಯಾರೇ ತಪ್ಪು ಮಾಡಿದ್ದರೂ ಕಠಿಣ ಶಿಕ್ಷೆಯಾಗಬೇಕು ಎಂದರು.

‘ಅಪಹರಿಸಿ ಕರೆದೊಯ್ದು ಚಿತ್ರಹಿಂಸೆ ಕೊಟ್ಟು ಕೊಲೆ‌ ಮಾಡಲಾಗಿದೆ. ವಿಷಯ ತಿಳಿದು ಮನಸ್ಸಿಗೆ ಆಘಾತವಾಯಿತು. ಹುಬ್ಬಳ್ಳಿ, ಚಿತ್ರದುರ್ಗದಲ್ಲಿ ಪದೇಪದೆ ಇಂತಹ ಘಟನೆ ನಡೆಯುತ್ತಿದೆ. ಸರ್ಕಾರ ಇಂತಹ ಪ್ರಕರಣದ ಬಗ್ಗೆ ವಿಶೇಷ ತನಿಖೆ ಮಾಡಿಸಬೇಕು.
ಪ್ರಕರಣದಲ್ಲಿ ಯಾರೇ ಇರಲಿ ತನಿಖೆಯಿಂದ ಸತ್ಯ ಹೊರಬರಲಿ. ರೇಣುಕಾ ಸ್ವಾಮಿಯಿಂದ ನೋವಾಗಿದ್ದರೆ ದೂರು ನೀಡಬಹುದಿತ್ತು. ಸರ್ಕಾರ ಮೃತನ ಕುಟುಂಬಕ್ಕೆ ನ್ಯಾಯ ಒದಗಿಸಿ, ಮೃತನ ಪತ್ನಿಗೆ ಕೆಲಸ ಕೊಟ್ಟು ಕುಟುಂಬ ಕಾಪಾಡುವ ಕೆಲಸ ಮಾಡಲಿ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 12, 2024 08:50 PM