Hassan News: ಯುದ್ಧಭೂಮಿಯಿಂದ ತವರಿಗೆ ಮರಳಿದ ವೀರ ಯೋಧನಿಗೆ ಅದ್ಧೂರಿ ಸ್ವಾಗತ
2004 ರಿಂದ ದೇಶದ ವಿವಿಧ ಕಡೆ 20 ವರ್ಷ ಸೇವೆ ಮಾಡಿದ್ದ ದಿನೇಶ್, ಸೇವೆ ಪೂರೈಸಿ ಇಂದು ರೈಲಿನ ಮೂಲಕ ತವರಿಗೆ ಮರಳಿದ್ದಾರೆ. ದಿನೇಶ್ ಗೆ ರೈಲ್ಚೆ ನಿಲ್ದಾಣದಲ್ಲಿ ಹಾರ ಹಾಕಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸ್ವಾಗತ ಕೋರಲಾಯಿತು.
ಹಾಸನ: 20 ವರ್ಷ ದೇಶ ಸೇವೆ ಮಾಡಿ ತವರಿಗೆ ಬಂದ ಸೈನಿಕನಿಗೆ ಅದ್ದೂರಿಯಾಗಿ ಸ್ವಾಗತ ಮಾಡಲಾಗಿದೆ. ಹಾಸನ ತಾಲೂಕಿನ ಅಂಬುಗ ಗ್ರಾಮದ ಸೈನಿಕ ದಿನೇಶ್ ದೇಶದ ಗಡಿ ಕಾಯ್ದು ತವರಿಗೆ ಮರಳಿದ್ದು ಸಂಬಂಧಿಕರು ಹಾಗು ಸ್ನೇಹಿತರು ಭವ್ಯ ಸ್ವಾಗತ ಕೋರಿ ಬರ ಮಾಡಿಕೊಂಡಿದ್ದಾರೆ. 2004 ರಿಂದ ದೇಶದ ವಿವಿಧ ಕಡೆ 20 ವರ್ಷ ಸೇವೆ ಮಾಡಿದ್ದ ದಿನೇಶ್, ಸೇವೆ ಪೂರೈಸಿ ಇಂದು ರೈಲಿನ ಮೂಲಕ ತವರಿಗೆ ಮರಳಿದ್ದಾರೆ. ದಿನೇಶ್ ಗೆ ರೈಲ್ಚೆ ನಿಲ್ದಾಣದಲ್ಲಿ ಹಾರ ಹಾಕಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸ್ವಾಗತ ಕೋರಲಾಯಿತು. ದೇಶ ಪ್ರೇಮದ ಘೋಷಣೆ ಕೂಗಿ ಹಾಸನದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು.