4 ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನೇ ಕೊಂದ ಅಣ್ಣ, ಕಾರಣವೇನು?
ಇದೇ ಜನವರಿ 21ರಂದು ಮದುವೆ ಫಿಕ್ಸ್ ಆಗಿತ್ತು. ಹೀಗಾಗಿ ಮದುವೆ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿದ್ದವು. ಲಗ್ನ ಪತ್ರಿಕೆ ಸಹ ಸಂಬಂಧಿಕರಿಗೆ ಹಂಚಿ ಮದುವೆಗೆ ಬರಬೇಕೆಂದು ಆಹ್ವಾನ ನೀಡಲಾಗಿತ್ತು. ಆದ್ರೆ, ಮದುವೆಗೆ ಇನ್ನೇನು ನಾಲ್ಕು ದಿನ ಇರುವಾಗಲೇ ಯುವಕ ಮಸಣ ಸೇರಿದ್ದಾನೆ. ಹೌದು.. ಅಣ್ಣನೇ (Brother) ತನ್ನ ಮಕ್ಕಳೊಂದಿಗೆ ಸೇರಿ ತಮ್ಮನನ್ನು 28 ಬಾರಿ ಇರಿದು ಕೊಂದಿರುವ ಘಟನೆ ಘಟನೆ ಮಂಡ್ಯದ (Mandya) ಮಾಯಪ್ಪನಹಳ್ಳಿಯಲ್ಲಿ ನಡೆದಿದೆ. ಯೋಗೇಶ್ (30) ಕೊಲೆಯಾದ ಯುವಕ. ಸಹೋದರ ಲಿಂಗರಾಜು ಹಾಗೂ ಈತನ ಮಕ್ಕಳಾದ ಭರತ್, ದರ್ಶನ್ ಈ ಕೊಲೆ ಮಾಡಿದ್ದು, ಇದೀಗ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಮಂಡ್ಯ, (ಜನವರಿ 16): ಇದೇ ಜನವರಿ 21ರಂದು ಮದುವೆ (marriage) ಫಿಕ್ಸ್ ಆಗಿತ್ತು. ಹೀಗಾಗಿ ಮದುವೆ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿದ್ದವು. ಲಗ್ನ ಪತ್ರಿಕೆ ಸಹ ಸಂಬಂಧಿಕರಿಗೆ ಹಂಚಿ ಮದುವೆಗೆ ಬರಬೇಕೆಂದು ಆಹ್ವಾನ ನೀಡಲಾಗಿತ್ತು. ಆದ್ರೆ, ಮದುವೆಗೆ ಇನ್ನೇನು ನಾಲ್ಕು ದಿನ ಇರುವಾಗಲೇ ಯುವಕ ಮಸಣ ಸೇರಿದ್ದಾನೆ. ಹೌದು.. ಅಣ್ಣನೇ (Brother) ತನ್ನ ಮಕ್ಕಳೊಂದಿಗೆ ಸೇರಿ ತಮ್ಮನನ್ನು 28 ಬಾರಿ ಇರಿದು ಕೊಂದಿರುವ ಘಟನೆ ಘಟನೆ ಮಂಡ್ಯದ (Mandya) ಮಾಯಪ್ಪನಹಳ್ಳಿಯಲ್ಲಿ ನಡೆದಿದೆ. ಯೋಗೇಶ್ (30) ಕೊಲೆಯಾದ ಯುವಕ. ಸಹೋದರ ಲಿಂಗರಾಜು ಹಾಗೂ ಈತನ ಮಕ್ಕಳಾದ ಭರತ್, ದರ್ಶನ್ ಈ ಕೊಲೆ ಮಾಡಿದ್ದು, ಇದೀಗ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಇದನ್ನೂ ಓದಿ: ಮದುವೆ ಸಂಭ್ರಮದಲ್ಲಿದ್ದ ತಮ್ಮನಿಗೆ ಚಟ್ಟ ಕಟ್ಟಿದ ಅಣ್ಣ: ಹಸೆಮಣೆ ಏರಬೇಕಿದ್ದವ ಸೇರಿದ್ದು ಸ್ಮಶಾನಕ್ಕೆ
ಹಲವು ವರ್ಷಗಳಿಂದ ಲಿಂಗರಾಜು ಹಾಗೂ ಕೊಲೆಯಾದ ಯೋಗೇಶ್ ನಡುವೆ ಆಸ್ತಿ ಕಲಹವಿತ್ತು. ಆಸ್ತಿ ವಿಷಯಕ್ಕೆ ಆಗಾಗ ಕುಟುಂಬದಲ್ಲಿ ಜಗಳ ನಡೆಯುತ್ತಿತ್ತು. ಅದೇ ಕಾರಣಕ್ಕೆ ಯೋಗೇಶ್ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಇದೇ ಜನವರಿ 21 ರಂದು ಯೋಗೇಶ್ ಮದುವೆ ನಿಗದಿಯಾಗಿತ್ತು. ಮದುವೆ ಆಹ್ವಾನ ಪತ್ರದಲ್ಲಿ ಅಣ್ಣನ ಹೆಸರನ್ನೂ ಹಾಕಿ ಊರಿಗೆಲ್ಲ ಹಂಚಿದ್ದ. ದುರಾದೃಷ್ಟವಶಾತ್ ಅದೇ ಅಣ್ಣನಿಂದ ಯೋಗೇಶ್ ಬರ್ಬರವಾಗಿ ಹತ್ಯೆಯಾಗಿದ್ದು, ನಗು ನಗುತ್ತ ಹೊಸ ಜೀವನ ಆರಂಭಿಸಬೇಕಿದ್ದ ಯೋಗೇಶ್ ಮಸಣ ಸೇರುವಂತಾಗಿದೆ. ಇದರಿಂದ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಮದುವೆಗೆ ಏನಾದರೂ ತೊಂದ್ರೆ ಆದ್ರೆ ಗಿಲ್ಲಿಯೇ ಕಾರಣ; ನೇರವಾಗಿ ಹೇಳಿದ ಕಾವ್ಯಾ
ಡಿಕೆಶಿ ದೆಹಲಿ ಪ್ರವಾಸ: ರಾಹುಲ್ ಗಾಂಧಿ ಭೇಟಿ ಬಗ್ಗೆ ಸ್ಫೋಟಕ ಹೇಳಿಕೆ
ಬಳ್ಳಾರಿ ಗಲಭೆ; ನಾಳೆ ನಡೆಯಲಿರುವ ಪ್ರತಿಭಟನೆ ಬಗ್ಗೆ SP ಹೇಳಿದ್ದಿಷ್ಟು
ಹಾಸನದಲ್ಲಿ ಕಾಡಾನೆಗಳ ತುಂಟಾಟ! ಪರಸ್ಪರ ಕೋರೆ ಮರ್ದಿಸಿದ ಗಜಪಡೆ
