ಉಚಿತ ಗೃಹಜ್ಯೋತಿ ವಿದ್ಯುತ್​ ಐಡಿಯಾ ಕೊಟ್ಟಿದ್ದು ಯಾರು ಗೊತ್ತಾ? ವಿದ್ಯುತ್​ ಸಚಿವ ಕೆಜೆ ಜಾರ್ಜ್ ಹೇಳಿದ ಸತ್ಯ ಏನು?

|

Updated on: Sep 16, 2023 | 1:47 PM

ರಾಜ್ಯದಲ್ಲಿ ಕಾಂಗ್ರೆಸ್​​ ಪಕ್ಷ ಅಧಿಕಾರಕ್ಕೆ ಬರಲೇಬೇಕು ಎಂದು ಸಾಲು ಸಾಲು ಗ್ಯಾರಂಟಿ ಯೋಜನೆಗಳ ಭರವಸೆಯನ್ನು ಭರಪೂರವಾಗಿ ಚುನಾವಣೆ ಮುಂಚೆ ಘೋಷಿಸಿತ್ತು. ಅದರಂತೆ ಭರ್ಜರಿಯಾಗಿ ಅಧಿಕಾರಕ್ಕೆ ಬಂದಿತ್ತು. ಆಗ ಸರ್ಕಾರದ ಚುಕ್ಕಾಣಿ ಭಾರೀ ಹಗ್ಗಜಗ್ಗಾಟದ ಬಳಿಕ ಕೊನೆಗೆ ಸಿದ್ದರಾಮಯ್ಯ ಅವರ ಪಾಲಾಗಿತ್ತು. ಆದರೆ ಅದಕ್ಕೆ ಅವರು ಬಹುಮುಖ್ಯ ಕೊಡುಗೆಯೊಂದನ್ನು ನೀಡಿದ್ದರು.

ರಾಜ್ಯದಲ್ಲಿ ಕಾಂಗ್ರೆಸ್​​ ಪಕ್ಷ ಅಧಿಕಾರಕ್ಕೆ ಬರಲೇಬೇಕು ಎಂದು ಸಾಲು ಸಾಲು ಗ್ಯಾರಂಟಿ ಯೋಜನೆಗಳ ಭರವಸೆಯನ್ನು ಭರಪೂರವಾಗಿ ಚುನಾವಣೆ ಮುಂಚೆ ಘೋಷಿಸಿತ್ತು. ಅದರಂತೆ ಭರ್ಜರಿಯಾಗಿ ಅಧಿಕಾರಕ್ಕೆ ಬಂದಿತ್ತು. ಆಗ ಸರ್ಕಾರದ ಚುಕ್ಕಾಣಿ ಭಾರೀ ಹಗ್ಗಜಗ್ಗಾಟದ ಬಳಿಕ ಕೊನೆಗೆ ಸಿದ್ದರಾಮಯ್ಯ ಅವರ ಪಾಲಾಗಿತ್ತು. ಆದರೆ ಅದಕ್ಕೆ ಅವರು ಬಹುಮುಖ್ಯ ಕೊಡುಗೆಯೊಂದನ್ನು ನೀಡಿದ್ದರು. ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಎಂಬ 200 ಯೂನಿಟ್ ಉಚಿತ ವಿದ್ಯುತ್​ ಐಡಿಯಾ ಕೊಟ್ಟಿದ್ದೇ ಸಿದ್ದರಾಮಯ್ಯ ಅವರಂತೆ.

ಸಿದ್ದರಾಮಯ್ಯ ಅವರು ಕೊಟ್ಟ ಸಲಹೆಯಂತೆ ಯಾವುದೇ ಕುಟುಂಬದ ವಾರ್ಷಿಕ ಬಳಕೆಯ ಆಧಾರದ ಮೇಲೆ ರಾಜ್ಯಾದ್ಯಂತ ಎಲ್ಲ ಮನೆಗಳಿಗೂ 200 ಯೂನಿಟ್ ಉಚಿತ ವಿದ್ಯುತ್​ ಕೊಡಲಾಗುತ್ತಿದೆ. ಈ ಸಂಗತಿಯನ್ನು ನಿನ್ನೆ ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಟಿವಿ9 ಶೃಂಗಸಭೆಯಲ್ಲಿ ವಿದ್ಯುತ್​ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ. ​ ಸಚಿವ ಕೆಜೆ ಜಾರ್ಜ್ ಹೇಳಿದ್ದೇನು ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:44 pm, Sat, 16 September 23

Follow us on