ಲಕ್ಷ್ಮೀ ಹೆಬ್ಬಾಳ್ಕರ್ ಅನೌನ್ಸ್‌ಮೆಂಟ್! ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಿದ ತಕ್ಷಣ ರೆಕಾರ್ಡ್ ಮಾಡಿದ ಕರೆ ಬರುತ್ತದೆ
Lakshmi Hebbalkar: ಈ ಮಧ್ಯೆ ಗೃಹ ಲಕ್ಷ್ಮಿ ಯೋಜನೆ ಜಾರಿ ದಿನಾಂಕ ಅಧಿಕೃತ ವಿಳಂಬಕ್ಕೆ ವಿಶೇಷ ಕಾರಣವಿದೆ. ನೋಣವಿನ ಕೆರೆ ಅಜ್ಜಯನ ಪ್ರಸಾದಕ್ಕಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾದಿರುವಂತಿದೆ.
ರಾಜ್ಯದಲ್ಲಿ ಗೃಹ ಲಕ್ಷ್ಮಿ ಜಾರಿಗೆ ಮುಹೂರ್ತ ಫಿಕ್ಸ್ ಆದಂತಿದೆ. ಜುಲೈ 14 ರಿಂದ ಗೃಹ ಲಕ್ಷ್ಮಿ ಜಾರಿಗೆ ಸರ್ಕಾರದ ಪ್ಲಾನಿಂಗ್ ಇದೆ. ಜುಲೈ 14 ರಂದು ಬೆಂಗಳೂರಿನಲ್ಲಿ ವಿಶೇಷ ಕಾರ್ಯಕ್ರಮ ನಡೆಸಲು ಚಿಂತನೆ ನಡೆಸಲಾಗಿದ್ದು, ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಗೃಹಲಕ್ಷ್ಮಿ ಲಾಂಚ್ ಕಾರ್ಯಕ್ರಮ ಏರ್ಪಾಟು ನಡೆದಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಮ್ಮುಖದಲ್ಲಿ ಯೋಜನೆ ಜಾರಿಯಾಗುವ ಸಾದ್ಯತೆಯಿದೆ. 10 ರಿಂದ 15 ಮಂದಿ ಫಲಾನುಭವಿಗಳನ್ನ (Gruha Lakshmi Beneficiaries) ಗುರುತಿಸಿ ಸಾಂಕೇತಿಕವಾಗಿ ಹಣ ವರ್ಗಾವಣೆ ಮಾಡಲಾಗುವುದು. ಜುಲೈ 17 ರಿಂದ ಪೂರ್ಣ ಪ್ರಮಾಣದಲ್ಲಿ ಯೋಜನೆ ಜಾರಿಗೆ ಬರಲಿದೆ. ಅರ್ಜಿ ಸಲ್ಲಿಕೆಯಾಗುತ್ತಿದ್ದಂತೆ ಪರಿಶೀಲಿಸಿ ತತಕ್ಷಣಕ್ಕೆ ಜಾರಿ ಮಾಡಲಾಗುವುದು. ಅರ್ಜಿ ಸಲ್ಲಿಕೆಗೆ ಯಾವುದೇ ಕಾಲ ಮಿತಿಯಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಅರ್ಜಿ ಸಲ್ಲಿಕೆಗೆ ಅನುಸಾರವಾಗಿ ಫಲಾನುಭವಿಗಳಿಗೆ ನಿರಂತರ ಹಣ ವರ್ಗಾವಣೆಯಾಗಲಿದೆ. ಇದಕ್ಕಾಗಿ ವಿಶೇಷ ಅಪ್ ಹಾಗೂ ಇನ್ನಿತರ ಡಿಜಿಟಲ್ ಪೋರ್ಟಲ್ ಗಳು ಸಿದ್ದವಾಗಿವೆ.
ಈ ಮಧ್ಯೆ ಗೃಹ ಲಕ್ಷ್ಮಿ ಯೋಜನೆ ಜಾರಿ ದಿನಾಂಕ ಅಧಿಕೃತ ವಿಳಂಬಕ್ಕೆ ವಿಶೇಷ ಕಾರಣವಿದೆ. ನೋಣವಿನ ಕೆರೆ ಅಜ್ಜಯನ ಪ್ರಸಾದಕ್ಕಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ಕಾದಿರುವಂತಿದೆ. ಜುಲೈ 10ರ ವರೆಗೆ ಅಜ್ಜಯ್ಯನ ಪೀಠ ಆಧ್ಯಾತ್ಮಿಕ ಕಾರಣದಿಂದ ದರ್ಶನ ನೀಡ್ತಾ ಇಲ್ಲ. ಜುಲೈ 10ರ ಬಳಿಕ ಅಜ್ಜಯನ ಅನುಮತಿ ಪಡೆದು ಆ ಬಳಿಕ ಅಧಿಕೃತವಾಗಿ ದಿನಾಂಕ ಘೋಷಣೆ ಮಾಡುವ ಸಾಧ್ಯತೆಯಿದೆ.