ಬೆಳಗಾವಿಯಿಂದ ಮೈಸೂರಿಗೆ ಗೃಹಲಕ್ಷ್ಮೀ ಶಿಫ್ಟ್; ಕಾರಣ ಹೇಳಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಗೃಹಲಕ್ಷ್ಮೀ ಯೋಜನೆ ಜಾರಿ ಕಾರ್ಯಕ್ರಮವನ್ನು ಬೆಳಗಾವಿಯಲ್ಲಿ ಮಾಡಬೇಕೆಂದು ಎಲ್ಲಾ ರೀತಿಯಲ್ಲಿ 90 ಪ್ರತಿಶತ ಕಾರ್ಯಕ್ರಮದ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು. ಆದರೆ, ಈಗಾಗಲೇ ರಾಹುಲ್ ಗಾಂಧಿಯವರು ಚುನಾವಣಾ ಸಮಯದಲ್ಲಿ ಬೆಳಗಾವಿಗೆ ಬಂದಿದ್ದರಿಂದ ಜೊತೆಗೆ ಸಮಾರಂಭದ ಬಳಿಕ ದೆಹಲಿಗೆ ತೆರಳಬೇಕಾಗಿರುವುದರಿಂದ ಇಲ್ಲಿ ಮಾಡಲು ಪ್ಲ್ಯಾನ್ ಮಾಡಲಾಯಿತು ಎಂದರು.
ಚಾಮರಾಜನಗರ, ಆ.26: ಗೃಹಲಕ್ಷ್ಮೀ ಯೋಜನೆ ಜಾರಿ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿರುವ ಖಾಸಗಿ ಸಮುದಾಯ ಭವನದಲ್ಲಿ ಪೂರ್ವಭಾವಿ ಸಭೆ ನಡೆಸುತ್ತಿದ್ದಾರೆ. ಈ ವೇಳೆ ಬೆಳಗಾವಿಯಿಂದ ಮೈಸೂರಿಗೆ ಗೃಹಲಕ್ಷ್ಮೀ(Gruha lakshmi) ಯೋಜನೆ ಸ್ಥಳಾಂತರ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು ‘ ಬೆಳಗಾವಿಯಲ್ಲಿ ಮಾಡಬೇಕೆಂದು ಎಲ್ಲಾ ರೀತಿಯಲ್ಲಿ 90 ಪ್ರತಿಶತ ಕಾರ್ಯಕ್ರಮದ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು. ಆದರೆ, ಈಗಾಗಲೇ ರಾಹುಲ್ ಗಾಂಧಿಯವರು ಚುನಾವಣಾ ಸಮಯದಲ್ಲಿ ಬೆಳಗಾವಿಗೆ ಬಂದಿದ್ದರಿಂದ ಜೊತೆಗೆ ಸಮಾರಂಭದ ಬಳಿಕ ದೆಹಲಿಗೆ ತೆರಳಬೇಕಾಗಿರುವುದರಿಂದ ಇಲ್ಲಿ ಮಾಡಲು ಪ್ಲ್ಯಾನ್ ಮಾಡಲಾಯಿತು ಎಂದರು. ಇನ್ನು ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ, ಡಿಸಿಎಂ ಭಾಗಿಯಾಗಲಿದ್ದಾರೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Latest Videos