ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತರು ಜಿಟಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 26, 2022 | 1:53 PM

ಮೈಸೂರಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಜಿಟಿಡಿ ಮತ್ತು ಹೆಚ್ ಡಿಕೆ ಅಕ್ಕಪಕ್ಕದಲ್ಲಿ ಕೂತಿದ್ದರಲ್ಲದೆ ಉಭಯಕುಶಲೋಪರಿ ವಿಚಾರಿಸಿಕೊಂಡರು.

ಮೈಸೂರು:  ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಅವರದ್ದೇ ಪಕ್ಷದ ಶಾಸಕ ಹಾಗೂ ಮಾಜಿ ಸಚಿವ ಜಿಟಿ ದೇವೇಗೌಡರ ನಡುವೆ ಬಹಳ ದಿನಗಳಿಂದ ತೂ ತೂ ಮೈ ಮೈ ನಡೆಯುತ್ತಿದೆ. ಜಿಟಿಡಿ, ಜೆಡಿ(ಎಸ್) ತೊರೆದು ಕಾಂಗ್ರೆಸ್ ಸೇರುವ ಸುದ್ದಿ ಕೇಳಿಬರಲಾರಂಭಿಸಿದ ನಂತರ ಇಬ್ಬರು ನಾಯಕರ ನಡುವೆ ಮಾತುಕತೆ ನಿಂತಿದೆ ಎಂದು ಹೇಳಲಾಗುತ್ತಿದೆ. ಆದರೆ ಮೈಸೂರಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಜಿಟಿಡಿ ಮತ್ತು ಹೆಚ್ ಡಿಕೆ ಅಕ್ಕಪಕ್ಕದಲ್ಲಿ ಕೂತಿದ್ದರಲ್ಲದೆ ಉಭಯಕುಶಲೋಪರಿ ವಿಚಾರಿಸಿಕೊಂಡರು.