ವಿಭಿನ್ನ ಹೋರಾಟಕ್ಕೆ ಮುಂದಾದ ಅತಿಥಿ ಉಪನ್ಯಾಸಕರು; ಇಲ್ಲಿದೆ ವಿಡಿಯೋ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 13, 2023 | 3:13 PM

ದಾವಣಗೆರೆ(Davanagere) ವಿವಿಧ ತಾಲೂಕುಗಳ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ‌ ಈ ಹೋರಾಟಗಾರರು, ಇಂದು ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ತರಕಾರಿ ಹಾಗೂ ಟೀ ಸೇರಿದಂತೆ ವಿವಿಧ ವಸ್ತುಗಳ ಮಾರಾಟ ಮಾಡಿದ್ದಾರೆ.

ದಾವಣಗೆರೆ, ಡಿ.13: ವಿಭಿನ್ನ ಹೋರಾಟಕ್ಕೆ ಅತಿಥಿ ಉಪನ್ಯಾಸಕರು(Guest Lectures) ಮುಂದಾಗಿದ್ದು, ಪ್ರತಿ ಸಿಗ್ನಲ್​ಗಳಲ್ಲಿ ಸುತ್ತಾಡಿ ‌ಕಡಲೆ ಮಾರಾಟ ಮಾಡಿದ್ದಾರೆ. ಸಿಗ್ನಲ್​ನಲ್ಲಿ‌ ನಿಂತ ವಾಹನ ಸವಾರರಿಗೆ ತಮ್ಮ ಪರಿಸ್ಥಿತಿ ಹೇಳಿ ಕಡಲೆ ಗಿಡ ಹಾಗೂ ಟೀ ಖರೀದಿಸುವಂತೆ ವಿನಂತಿಸಿದ್ದಾರೆ. ದಾವಣಗೆರೆ(Davanagere) ವಿವಿಧ ತಾಲೂಕುಗಳ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ‌ ಈ ಹೋರಾಟಗಾರರು, ಇಂದು ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ತರಕಾರಿ ಹಾಗೂ ಟೀ ಸೇರಿದಂತೆ ವಿವಿಧ ವಸ್ತುಗಳ ಮಾರಾಟ ಮಾಡುತ್ತ, ಹತ್ತಾರು ವರ್ಷಗಳಿಂದ ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಮಾಡಿದ್ದೇವೆ, ತಮ್ಮ ಸೇವೆಯನ್ನ ಪರಿಗಣಿಸಿ ಖಾಯಂ ಗೊಳಿಸುವಂತೆ ಆಗ್ರಹಿಸಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ