Video: ಗುಜರಾತ್ನ ‘ಗಂಭೀರ’ ಸೇತುವೆ ಕುಸಿತ, ವಾಹನಗಳು ನದಿಗೆ ಬಿದ್ದು, 9 ಮಂದಿ ಸಾವು
ಗುಜರಾತ್ನ ವಡೋದರಾ ಜಿಲ್ಲೆಯಲ್ಲಿ ವಡೋದರಾ ಹಾಗೂ ಆನಂದ್ ಸಂಪರ್ಕಿಸುವ ‘ಗಂಭೀರ’ ಸೇತುವೆ ಕುಸಿದ ಪರಿಣಾಮ 9 ಮಂದಿ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಹಲವು ವಾಹನಗಳು ನದಿಗೆ ಬಿದ್ದಿದೆ.ವಿಡಿಯೋದಲ್ಲಿ ಮುರಿದ ಸೇತುವೆ ಹಾಗೂ ಸೇತುವೆಯ ತುದಿಯಲ್ಲಿ ಸಿಲುಕಿರುವ ಟ್ರಕ್ ಅನ್ನು ಕಾಣಬಹುದು. ಸೇತುವೆಯ ಮೇಲಿನ ಸಂಚಾರದ ಪ್ರಮಾಣವನ್ನು ಪರಿಗಣಿಸಿ, ಸಿಎಂ ಮೂರು ತಿಂಗಳ ಹಿಂದೆ 212 ಕೋಟಿ ರೂ.ಗಳ ಹೊಸ ಸೇತುವೆಗೆ ಅನುಮೋದನೆ ನೀಡಿದ್ದರು. ಹೊಸ ಸೇತುವೆಯ ವಿನ್ಯಾಸ ಮತ್ತು ಟೆಂಡರ್ ಕಾರ್ಯ ಈಗಾಗಲೇ ಪ್ರಾರಂಭವಾಗಿತ್ತು.
ವಡೋದರಾ, ಜುಲೈ 09: ಗುಜರಾತ್ನ ವಡೋದರಾ ಜಿಲ್ಲೆಯಲ್ಲಿ ವಡೋದರಾ ಹಾಗೂ ಆನಂದ್ ಸಂಪರ್ಕಿಸುವ ‘ಗಂಭೀರ’ ಸೇತುವೆ ಕುಸಿದ ಪರಿಣಾಮ 9 ಮಂದಿ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಹಲವು ವಾಹನಗಳು ನದಿಗೆ ಬಿದ್ದಿದೆ.ವಿಡಿಯೋದಲ್ಲಿ ಮುರಿದ ಸೇತುವೆ ಹಾಗೂ ಸೇತುವೆಯ ತುದಿಯಲ್ಲಿ ಸಿಲುಕಿರುವ ಟ್ರಕ್ ಅನ್ನು ಕಾಣಬಹುದು.
ಸೇತುವೆಯ ಮೇಲಿನ ಸಂಚಾರದ ಪ್ರಮಾಣವನ್ನು ಪರಿಗಣಿಸಿ, ಸಿಎಂ ಮೂರು ತಿಂಗಳ ಹಿಂದೆ 212 ಕೋಟಿ ರೂ.ಗಳ ಹೊಸ ಸೇತುವೆಗೆ ಅನುಮೋದನೆ ನೀಡಿದ್ದರು. ಹೊಸ ಸೇತುವೆಯ ವಿನ್ಯಾಸ ಮತ್ತು ಟೆಂಡರ್ ಕಾರ್ಯ ಈಗಾಗಲೇ ಪ್ರಾರಂಭವಾಗಿತ್ತು. ಘಟನೆಯ ನಂತರ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ತಕ್ಷಣವೇ ಮುಖ್ಯ ಎಂಜಿನಿಯರ್, ಸೇತುವೆ ವಿನ್ಯಾಸ ತಂಡ ಮತ್ತು ತಜ್ಞರನ್ನು ಸ್ಥಳಕ್ಕೆ ರವಾನಿಸಿ ವಿವರವಾದ ವರದಿಯನ್ನು ನೀಡುವಂತೆ ಆದೇಶಿಸಿದರು.
ಗಂಭೀರ ಸೇತುವೆಯ ನಿರ್ಮಾಣವು 1981 ರಲ್ಲಿ ಪ್ರಾರಂಭವಾಯಿತು ಮತ್ತು 1985 ರಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತವಾಯಿತು. 2017 ರಲ್ಲಿ, ಸೇತುವೆಯ ಸ್ಥಿತಿ ಹದಗೆಟ್ಟಿರುವುದರಿಂದ ಭಾರೀ ವಾಹನಗಳಿಗೆ ಪ್ರವೇಶವನ್ನು ನಿಷೇಧಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿತ್ತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ