ಪ್ರಜ್ವಲ್ ರೇವಣ್ಣನಿಂದ ಪಕ್ಷಕ್ಕೆ ಕಳಂಕ, ಕೂಡಲೇ ಅಮಾನತು ಮಾಡುವಂತೆ ದೇವೇಗೌಡರಿಗೆ ಶರಣಗೌಡ ಕಂದ್ಕೂರ್ ಪತ್ರ
ಅವರ ವಿರುದ್ಧ ದಾಖಲಾಗಿರುವ ದೂರುಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತನಿಖೆಗಾಗಿ ಒಂದು ವಿಶೇಷ ತನಿಖಾ ತಂಡವನ್ನು ರಚಿಸಿದೆ. ಅದು ಗೊತ್ತಾಗುತ್ತಿದ್ದಂತೆ ಪ್ರಜ್ವಲ್ ರಾತ್ರೋರಾತ್ರಿ ಜರ್ಮನಿಗೆ ಹೋಗಿರುವರೆಂದು ತಿಳಿದುಬಂದಿದೆ. ತಮ್ಮ ಪತ್ರದಲ್ಲಿ ಕಂದ್ಕೂರ್, ಪ್ರಜ್ವಲ್ ನಿಂದ ಪಕ್ಷದ ವರ್ಚಸ್ಸಿಗೆ ಕಳಂಕವುಂಟಾಗಿದೆ ಎಂದಿದ್ದಾರೆ.
ಬೆಂಗಳೂರು: ಲೈಂಗಿಕ ಶೋಷಣೆಯ ಆರೋಪ ಹೊತ್ತು ವಿದೇಶಕ್ಕೆ ಹಾರಿ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ರಾಜ್ಯಾದಂತ ಆಕ್ರೋಶ ವ್ಯಕ್ತವಾಗುತ್ತಿದೆ ಮತ್ತು ಜೆಡಿಎಸ್ ಪಕ್ಷದ ನಾಯಕರೇ ಸಂಸದನ ವಿರುದ್ಧ ಸಿಡಿದೇಳುತ್ತಿದ್ದಾರೆ. ಜೆಡಿಎಸ್ ಪಕ್ಷದ ಗುರುಮಠಕಲ್ ಶಾಸಕ ಶರಣಗೌಡ ಕಂದ್ಕೂರ್ (Sharan gouda Kandkur) ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡ (HD Devegowda) ಅವರಿಗೆ ಪತ್ರವೊಂದನ್ನು ಬರೆದು ಕೂಡಲೇ ಪ್ರಜ್ವಲ್ ರೇವಣ್ಣನನ್ನು ಪಕ್ಷದಿಂದ ಅಮಾನತುಗೊಳಿಸುವಂತೆ ಆಗ್ರಹಿಸಿದ್ದಾರೆ. ಪ್ರಜ್ವಲ್ ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಮರುಆಯ್ಕೆ ಬಯಸಿದ್ದಾರೆ. ಅವರಿಗೆ ಟಿಕೆಟ್ ನೀಡಬಾರದು ಮತ್ತು ಪ್ರಜ್ವಲ್ ಸ್ಪರ್ಧಿಸಿದರೆ ತಾವು ಪ್ರಚಾರಕ್ಕೆ ಹೋಗಲ್ಲ ಎಂದು ಹಲವಾರು ಸ್ಥಳೀಯ ಬಿಜೆಪಿ ಮುಖಂಡರು ಹೇಳಿದ್ದಾಗ್ಯೂ ಅವರನ್ನು ಕಣಕ್ಕಿಳಿಸಲಾಗಿತ್ತು. ಅವರ ವಿರುದ್ಧ ದಾಖಲಾಗಿರುವ ದೂರುಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತನಿಖೆಗಾಗಿ ಒಂದು ವಿಶೇಷ ತನಿಖಾ ತಂಡವನ್ನು ರಚಿಸಿದೆ. ಅದು ಗೊತ್ತಾಗುತ್ತಿದ್ದಂತೆ ಪ್ರಜ್ವಲ್ ರಾತ್ರೋರಾತ್ರಿ ಜರ್ಮನಿಗೆ ಹೋಗಿರುವರೆಂದು ತಿಳಿದುಬಂದಿದೆ. ತಮ್ಮ ಪತ್ರದಲ್ಲಿ ಕಂದ್ಕೂರ್, ಪ್ರಜ್ವಲ್ ನಿಂದ ಪಕ್ಷದ ವರ್ಚಸ್ಸಿಗೆ ಕಳಂಕವುಂಟಾಗಿದೆ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಓದಿ: ಹಾಸನ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಆಸ್ತಿ ಮೌಲ್ಯ ನಾಲ್ಕು ಪಟ್ಟು ಹೆಚ್ಚಳ; ಎಷ್ಟು ಗೊತ್ತಾ?