‘ಚಾನ್ಸ್ ಕೊಡಿ ಕೊಡಿ ಅಂತ ಕೇಳಿಕೊಂಡ್ರಲ್ಲ’; ಡಾರ್ಲಿಂಗ್ ಕೃಷ್ಣ ವಿರುದ್ಧ ಕಿಡಿಕಾರಿದ ಗುರು ದೇಶಪಾಂಡೆ
ಗುರು ದೇಶಪಾಂಡೆ ಅವರು ಈಗ ಡಾರ್ಲಿಂಗ್ ಕೃಷ್ಣ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ‘ಲವ್ ಮಾಕ್ಟೇಲ್ 3’ ಸಿನಿಮಾ ಗಮನ ಸೆಳೆದಿದೆ. ಈ ಚಿತ್ರದ ಕಥೆ ನಮ್ಮದು ಎಂದು ಗುರು ಹಾಗೂ ರಾಘವೇಂದ್ರ ನಾಯ್ಕೆ ಆರೋಪಿಸಿದ್ದಾರೆ. ಈ ಸುದ್ದಿಗೋಷ್ಠಿ ವಿಷಯ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಅವರು ಹೇಳಿದ್ದೇನು ಎಂಬುದರ ವಿವರ ಇಲ್ಲದೆ ನೋಡಿ.
ನಿರ್ದೇಶಕರಾದ ಗುರು ದೇಶಪಾಂಡೆ ಹಾಗೂ ರಾಘವೇಂದ್ರ ನಾಯ್ಕ್ ಅವರು ‘ಲವ್ ಮಾಕ್ಟೇಲ್ 3’ ಚಿತ್ರದ ಕಥೆ ನಮ್ಮದು ಎಂದು ಹೇಳಿದ್ದಾರೆ. ಆದರೆ, ಇದನ್ನು ಕೃಷ್ಣ ಅಲ್ಲಗಳೆದಿದ್ದಾರೆ. ಗುರು ದೇಶಪಾಂಡೆ ರಿಮೇಕ್ ಸಿನಿಮಾ ಮಾಡುವ ವ್ಯಕ್ತಿ ಎಂದು ಟೀಕಿಸಿದ್ದಾರೆ. ಇದಕ್ಕೆ ಗುರು ದೇಶಪಾಂಡೆ ತಿರುಗೇಟು ಕೊಟ್ಟಿದ್ದಾರೆ. ‘ಈ ಮೊದಲು ನಾನು ಸಿನಿಮಾ ಮಾಡುವಾಗ ಚಾನ್ಸ್ ಕೊಡಿ ಕೊಡಿ ಎಂದು ಕೇಳಿಕೊಂಡಿದ್ರಿ. ಆಗ ಗುರು ದೇಶಪಾಂಡೆ ರಿಮೇಕ್ ಸಿನಿಮಾ ಮಾಡ್ತಾರೆ ಅನ್ನೋದು ಗೊತ್ತಿರಲಿಲ್ಲವೇ? ಪದೇ ಪದೇ ಚಾನ್ಸ್ ಕೊಡಿ ಅಂತ ಕೇಳಿದ್ರಲ್ಲ’ ಎಂದು ತಿರುಗೇಟು ಕೊಟ್ಟಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Mar 26, 2026 10:49 AM
Loading...
Unable to load recommendations.
Follow Us
