Video: ಕುಡಿದ ಮತ್ತಿನಲ್ಲಿ ಸ್ವಿಗ್ಗಿ ಡೆಲಿವರಿ ಏಜೆಂಟ್ ಮೇಲೆ ಕಾರು ಹತ್ತಿಸಿದ ವೈದ್ಯ

Updated on: Jan 20, 2026 | 7:39 AM

ಕುಡಿದ ಮತ್ತಿನಲ್ಲಿ ವೈದ್ಯನೊಬ್ಬ ಸ್ವಿಗ್ಗಿ ಡೆಲಿವರಿ ಏಜೆಂಟ್ ಮೇಲೆ ಕಾರು ಹತ್ತಿಸಿರುವ ವಿಡಿಯೋ ವೈರಲ್ ಆಗಿದೆ. ಗಾಯಗೊಂಡ ಡೆಲಿವರಿ ಏಜೆಂಟ್ ಟಿಂಕು ಪನ್ವಾರ್ ಅವರನ್ನು ಗುರುಗ್ರಾಮದ ಆಸ್ಪತ್ರೆಗೆ ದಾಖಲಿಸಲಾಗಿದೆ. ನವೀನ್ ಯಾದವ್ ಎಂದು ಗುರುತಿಸಲಾದ ಆಯುರ್ವೇದ ವೈದ್ಯ, ದೌಲತಾಬಾದ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಗುರುಗ್ರಾಮ, ಜನವರಿ 20: ಕುಡಿದ ಮತ್ತಿನಲ್ಲಿ ವೈದ್ಯನೊಬ್ಬ ಸ್ವಿಗ್ಗಿ ಡೆಲಿವರಿ ಏಜೆಂಟ್ ಮೇಲೆ ಕಾರು ಹತ್ತಿಸಿರುವ ವಿಡಿಯೋ ವೈರಲ್ ಆಗಿದೆ. ಗಾಯಗೊಂಡ ಡೆಲಿವರಿ ಏಜೆಂಟ್ ಟಿಂಕು ಪನ್ವಾರ್ ಅವರನ್ನು ಗುರುಗ್ರಾಮದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ನವೀನ್ ಯಾದವ್ , ಆಯುರ್ವೇದ ವೈದ್ಯ, ದೌಲತಾಬಾದ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಅವರ ಕಪ್ಪು ಬಣ್ಣದ ಸ್ಕಾರ್ಪಿಯೋವನ್ನು ಸಹ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸ್ವಿಗ್ಗಿ ಗೋದಾಮಿನ ಬಳಿಯ ಬೀದಿಯಲ್ಲಿ ವಿತರಣಾ ಏಜೆಂಟ್‌ಗಳು ನಿರಂತರವಾಗಿ ಇರುವುದನ್ನು ನೋಡಿ ಆರೋಪಿ ಕಿರಿಕಿರಿಗೊಂಡಿದ್ದ ಎನ್ನಲಾಗಿದೆ. ಈ ಕಾರಣಕ್ಕಾಗಿ, ಅವನು ತನ್ನ ಕಾರಿನಿಂದ ಡೆಲಿವರಿ ಏಜೆಂಟ್‌ಗೆ ಡಿಕ್ಕಿ ಹೊಡೆದಿದ್ದ, ಅವರು ಪ್ರತಿಭಟಿಸಿದಾಗ ಪದೇ ಪದೇ ಡೆಲಿವರಿ ಏಜೆಂಟ್​ಗಳ ಬೈಕ್​ಗೆ ಡಿಕ್ಕಿ ಹೊಡೆಸಿದ್ದಾನೆ. ನಂತರ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿಯ ವಿರುದ್ಧ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jan 20, 2026 07:38 AM