‘ಏನಿಲ್ಲ.. ಹಾಡಿಗೆ ಸಿಕ್ಕಿತ್ತು ಭರ್ಜರಿ ಮೊತ್ತ’; ಗುರುಕಿರಣ್ ನೀಡಿದರು ಮಾಹಿತಿ

Updated on: Feb 06, 2024 | 8:13 AM

ಗುರುಕಿರಣ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ‘ಏನಿಲ್ಲ.. ಏನಿಲ್ಲ..’ ಹಾಡಿಗೆ 25 ವರ್ಷಗಳು ತುಂಬಿವೆ. ಈ ಸಂದರ್ಭದಲ್ಲಿ ಸಾಂಗ್ ಮತ್ತೆ ವೈರಲ್ ಆಗುತ್ತಿರುವುದು ಗುರುಕಿರಣ್ ಅವರ ಖುಷಿ ಹೆಚ್ಚಿಸಿದೆ. ‘ಉಪೇಂದ್ರ’ ಸಿನಿಮಾದ ಈ ಹಾಡಿನ ಬಗ್ಗೆ ಗುರುಕಿರಣ್ ಮಾಹಿತಿ ಹಂಚಿಕೊಂಡಿದ್ದಾರೆ.

‘ಏನಿಲ್ಲ ಏನಿಲ್ಲ’ ಹಾಡು ಟ್ರೆಂಡ್ ಸೃಷ್ಟಿ ಮಾಡಿದೆ. ಯಾವುದೇ ಸೋಶಿಯಲ್ ಮೀಡಿಯಾ ಪ್ಲಾಟ್​ಫಾರ್ಮ್ ಓಪನ್ ಮಾಡಿದರೂ ಇದೇ ಹಾಡು ಕೇಳುತ್ತದೆ. ಗುರುಕಿರಣ್ (Gurukiran) ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಈ ಹಾಡಿಗೆ 25 ವರ್ಷಗಳು ತುಂಬಿವೆ. ಈ ಸಂದರ್ಭದಲ್ಲೇ ಸಾಂಗ್ ಮತ್ತೆ ವೈರಲ್ ಆಗುತ್ತಿರುವುದು ಗುರುಕಿರಣ್ ಅವರ ಖುಷಿ ಹೆಚ್ಚಿಸಿದೆ. ‘ಉಪೇಂದ್ರ’ ಸಿನಿಮಾದ ಈ ಹಾಡಿನ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಅಂದಿನ ಕಾಲದಲ್ಲಿ ದಾಖಲೆ ಮೊತ್ತಕ್ಕೆ ಈ ಹಾಡು ಮಾರಾಟ ಆಗಿತ್ತು. ಈ ಹಾಡನ್ನು ಅಂದು ಜನರು ಕೇಳಿ ಸುಮ್ಮನಾಗಿದ್ದರು. ಈಗ ಮತ್ತೆ ಹಾಡು ಟ್ರೆಂಡ್ ಆಗುತ್ತಿದೆ. ಹಾಡಿಗೆ ಅಂದು ಏನು ಪ್ರಾಮುಖ್ಯತೆ ಸಿಗಬೇಕಿತ್ತು ಅದು ಈಗ ಸಿಗುತ್ತಿದೆ’ ಎಂದು ಸಂತೋಷ ಹೊರ ಹಾಕಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More