AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆರೆಬೇಟೆ’ ಸಿನಿಮಾದ ರೊಮ್ಯಾಂಟಿಕ್ ಹಾಡು ರಿಲೀಸ್ ಮಾಡಿದ ಉಪೇಂದ್ರ

‘ಮಲೆನಾಡ ಗೊಂಬೆ..' ಎಂಬ ಸಾಹಿತ್ಯದೊಂದಿಗೆ ‘ಕೆರೆಬೇಟೆ' ಚಿತ್ರದ ಮೊದಲ ಹಾಡು ಮೂಡಿ ಬಂದಿದೆ. ಈ ಹಾಡನ್ನು ಉಪೇಂದ್ರ ಅವರು ಇಷ್ಟಪಟ್ಟು ರಿಲೀಸ್ ಮಾಡಿದ್ದಾರೆ. ಹಾಡಿನ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಹೆಸರಿಗೆ ತಕ್ಕಂತೆ ಮಲೆನಾಡು ಭಾಗದಲ್ಲೇ ಸಿನಿಮಾ ಹಾಡಿನ ಚಿತ್ರೀಕರಣ ಮಾಡಲಾಗಿದೆ.

‘ಕೆರೆಬೇಟೆ’ ಸಿನಿಮಾದ ರೊಮ್ಯಾಂಟಿಕ್ ಹಾಡು ರಿಲೀಸ್ ಮಾಡಿದ ಉಪೇಂದ್ರ
ಕೆರೆಬೇಟೆ ತಂಡ
ರಾಜೇಶ್ ದುಗ್ಗುಮನೆ
|

Updated on: Feb 03, 2024 | 2:35 PM

Share

ಶೀರ್ಷಿಕೆ ಕಾರಣದಿಂದಲೇ ‘ಕೆರೆಬೇಟೆ’ ಸಿನಿಮಾ (Kerebete Movie) ಗಮನ ಸೆಳೆಯುತ್ತಿದೆ. ಈ ಚಿತ್ರಕ್ಕೆ ಸ್ಯಾಂಡಲ್​ವುಡ್​ನ ಅನೇಕ ಸೆಲೆಬ್ರಿಟಿಗಳ ಬೆಂಬಲ ಕೂಡ ಸಿಗುತ್ತಿದೆ. ಇದು ತಂಡದ ಬಲ ಹೆಚ್ಚಿಸಿದೆ. ಇತ್ತೀಚೆಗೆ ಸಿನಿಮಾದಿಂದ ಟೀಸರ್ ರಿಲೀಸ್ ಮಾಡಲಾಗಿತ್ತು. ಈಗ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಇದನ್ನು ಅನಾವರಣ ಮಾಡಿದ್ದು ನಟ ಉಪೇಂದ್ರ. ಅವರು ತಂಡಕ್ಕೆ ಶುಭ ಹಾರೈಸಿದ್ದಾರೆ.

‘ಮಲೆನಾಡ ಗೊಂಬೆ..’ ಎಂಬ ಸಾಹಿತ್ಯದೊಂದಿಗೆ ‘ಕೆರೆಬೇಟೆ’ ಚಿತ್ರದ ಮೊದಲ ಹಾಡು ಮೂಡಿ ಬಂದಿದೆ. ಈ ಹಾಡನ್ನು ಉಪೇಂದ್ರ ಅವರು ಇಷ್ಟಪಟ್ಟು ರಿಲೀಸ್ ಮಾಡಿದ್ದಾರೆ. ಹಾಡಿನ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಹೆಸರಿಗೆ ತಕ್ಕಂತೆ ಮಲೆನಾಡು ಭಾಗದಲ್ಲೇ ಸಿನಿಮಾ ಹಾಡಿನ ಚಿತ್ರೀಕರಣ ಮಾಡಲಾಗಿದೆ.

‘ಕೆರೆಬೇಟೆ’ ಚಿತ್ರಕ್ಕೆ ರಾಜ್ ಗುರು ನಿರ್ದೇಶನ ಮಾಡಿದ್ದಾರೆ. ನಾಯಕ ಗೌರಿಶಂಕರ್ ಹಾಗೂ ನಟಿ ಬಿಂದು ಶಿವರಾಮ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಚಿತ್ರದಲ್ಲಿ ಬರೋ ರೋಮ್ಯಾಂಟಿಕ್ ಹಾಡು ಇದು. ಈ ಹಾಡಿಗೆ ಸಾಹಿತ್ಯ ಬರೆದಿದ್ದು ಪ್ರಮೋದ್ ಮರವಂತೆ. ‘ಕಾಂತಾರ’ ಚಿತ್ರದ ‘ಸಿಂಗಾರ ಸಿರಿಯೇ…’ ಹಾಡನ್ನು ಇವರೇ ಬರೆದಿದ್ದರು. ಅವರ ಸಾಹಿತ್ಯದಲ್ಲಿ ಈಗ ‘ಮಲೆನಾಡ ಗೊಂಬೆ..’ ಹಾಡು ಮೂಡಿಬಂದಿದೆ. ಗಗನ್ ಬದೇರಿಯಾ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಈ ಹಾಡಿಗೆ ಐಶ್ವರ್ಯ ರಂಗರಾಜನ್ ಹಾಗೂ ಸಾಯಿ ವಿಘ್ನೇಶ್ ಧ್ವನಿ ಆಗಿದ್ದಾರೆ.

ಈ ಹಾಡನ್ನು ತಂಡ ಸಾಕಷ್ಟು ಕಷ್ಟಪಟ್ಟು ಶೂಟ್ ಮಾಡಿದೆಯಂತೆ. ಅತಿಯಾದ ಮಳೆಯಿಂದ ಅನೇಕ ಬಾರಿ ಶೂಟಿಂಗ್ ನಿಲ್ಲಿಸಲಾಗಿತ್ತು. ಜನರ ಸುಳಿವೇ ಇಲ್ಲದ ಜಾಗದಲ್ಲಿ ಹಾಡಿನ ಶೂಟಿಂಗ್ ಮಾಡಲಾಗಿತ್ತು. ನಾಲ್ಕು ದಿನಗಳ ಕಾಲ ಈ ಹಾಡಿನ ಚಿತ್ರೀಕರಣ ನಡೆದಿದೆ.

ಇದನ್ನೂ ಓದಿ: ವಿಶೇಷವಾಗಿ ಬಿಡುಗಡೆ ಆಯ್ತು ‘ಕೆರೆಬೇಟೆ’ ಟೀಸರ್​; ಸಾಥ್​ ನೀಡಿದ ಡಾಲಿ, ದಿನಕರ್​ ತೂಗುದೀಪ

‘ಕೆರೆಬೇಟೆ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಮಾರ್ಚ್ 15ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಮಲೆನಾಡಿನಲ್ಲಿರುವ ಮೀನು ಬೇಟೆಯ ಸಂಸ್ಕೃತಿ ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ಈ ಚಿತ್ರದ ಬಗ್ಗೆ ಜನರಲ್ಲಿ ನಿರೀಕ್ಷೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?