ಫಸ್ಟ್ ರ್ಯಾಂಕ್ ರಾಜು, ಜೇಮ್ಸ್ ಬಾಂಡ್ ರಾಜು ಆಗಿದ್ದು ಏಕೆ?

Updated on: Feb 01, 2025 | 10:09 PM

James Bond Raju: ಈ ಹಿಂದೆ ‘ಫಸ್ಟ್ ರ್ಯಾಂಕ್ ರಾಜು’ ಮತ್ತು ‘ರಾಜು ಕನ್ನಡ ಮೀಡಿಯಂ’ ಸಿನಿಮಾದಲ್ಲಿ ನಟಿಸಿದ್ದ ಗುರುನಂದನ್ ಇದೀಗ ‘ಜೇಮ್ಸ್ ಬಾಂಡ್ ರಾಜು’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ‘ಫಸ್ಟ್ ರ್ಯಾಂಕ್ ರಾಜು’ ಈಗ ‘ಜೇಮ್ಸ್ ಬಾಂಡ್ ರಾಜು’ ಆಗಿದ್ದು ಏಕೆ ಎಂದು ವಿವರಿಸಿದ್ದಾರೆ.

‘ಫಸ್ಟ್ ರ್ಯಾಂಕ್ ರಾಜು’ ಸಿನಿಮಾ ಮೂಲಕ ಗಮನ ಸೆಳೆದಿದ್ದ ನಟ ಗುರುನಂದನ್ ಇದೀಗ ‘ಜೇಮ್ಸ್ ಬಾಂಡ್ ರಾಜು’ ಆಗಿದ್ದಾರೆ. ಗುರುನಂದನ್ ನಟನೆಯ ‘ಜೇಮ್ಸ್ ಬಾಂಡ್ ರಾಜು’ ಶೀಘ್ರವೇ ಬಿಡುಗಡೆ ಆಗಲಿದ್ದು, ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಗುರುನಂದನ್, ‘ನಾನು ಹೊಸ ರೀತಿಯ ಕತೆ, ಪಾತ್ರಕ್ಕಾಗಿ ಹುಡುಕಾಡುತ್ತಿದ್ದಾಗ ಈ ಕತೆ ಸಿಕ್ಕಿತು. ಒಬ್ಬ ಸಾಮಾನ್ಯ ಯುವಕನ ಜೀವನದಲ್ಲಿ ನಡೆಯುವ ಹಲವು ತಿರುವುಗಳುಳ್ಳ ಈ ಕತೆ ಬಹಳ ಹಿಡಿಸಿ ಸಿನಿಮಾ ಮಾಡಿದೆವು. ರಾಜು ಪಾತ್ರವನ್ನು ಭಿನ್ನವಾಗಿ ಈ ಸಿನಿಮಾ ಮೂಲಕ ಪ್ರಸ್ತುತ ಪಡಿಸುತ್ತಿದ್ದೇವೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ