ನನ್ನ ಹೆಂಡ್ತಿ ರೆಡ್ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ ಸರ್: ಕಣ್ಣೀರಿಟ್ಟ ಪತಿ
ಜಿಮ್ ಟ್ರೈನರ್‌ನನ್ನು ಪ್ರೀತಿಸಿ ಮದುವೆಯಾಗಿ ಈಗ ಗಂಡನ ಸ್ನೇಹಿತನ ಜೊತೆ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜಿಮ್ ಟ್ರೈನರ್ ನಿತೇಶ್ ಮತ್ತು ನವೀನ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಸ್ನೇಹಿತರಾಗಿದ್ದರು. ನಿತೇಶ್ ಯುವತಿಯೊಬ್ಬರನ್ನು ಪ್ರೀತಿಸಿ ಮದುವೆಯಾದ ಬಳಿಕ, ಸ್ನೇಹಿತ ನವೀನ್ ಅವರ ಮನೆಯಲ್ಲೇ ಬಾಡಿಗೆಗೆ ವಾಸವಿದ್ದರು. ಈ ವೇಳೆ ನವೀನ್ ತನ್ನ ಪತ್ನಿ ಮೇಲೆ ಕಣ್ಣು ಹಾಕಿರುವುದು ನಿತೇಶ್ ಗಮನಕ್ಕೆ ಬಂದಿತ್ತು.
ಬೆಂಗಳೂರು, (ಏಪ್ರಿಲ್ 22): ಜಿಮ್ ಟ್ರೈನರ್‌ನನ್ನು ಪ್ರೀತಿಸಿ ಮದುವೆಯಾಗಿ ಈಗ ಗಂಡನ ಸ್ನೇಹಿತನ ಜೊತೆ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಜಿಮ್ ಟ್ರೈನರ್ ನಿತೇಶ್ ಮತ್ತು ನವೀನ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಸ್ನೇಹಿತರಾಗಿದ್ದರು. ನಿತೇಶ್ ಯುವತಿಯೊಬ್ಬರನ್ನು ಪ್ರೀತಿಸಿ ಮದುವೆಯಾದ ಬಳಿಕ, ಸ್ನೇಹಿತ ನವೀನ್ ಅವರ ಮನೆಯಲ್ಲೇ ಬಾಡಿಗೆಗೆ ವಾಸವಿದ್ದರು. ಈ ವೇಳೆ ನವೀನ್ ತನ್ನ ಪತ್ನಿ ಮೇಲೆ ಕಣ್ಣು ಹಾಕಿರುವುದು ನಿತೇಶ್ ಗಮನಕ್ಕೆ ಬಂದಿತ್ತು. ನವೀನ್‌ನ ನಂಬರ್ ಅನ್ನು ಹುಡುಗಿಯ ಹೆಸರಿನಲ್ಲಿ ಸೇವ್ ಮಾಡಿಕೊಂಡು ಪತ್ನಿ ಚಾಟಿಂಗ್ ಮಾಡುತ್ತಿದ್ದಳು. ಈ ಬಗ್ಗೆ ಹಲವು ಬಾರಿ ಬುದ್ಧಿ ಮಾತು ಹೇಳಿದ್ದ ನಿತೇಶ್, ನಂತರ ಬನಶಂಕರಿಯ ಬೇರೊಂದು ಮನೆಗೆ ಶಿಫ್ಟ್ ಆಗಿದ್ದರು. ಆದ್ರೆ, ಇದೀಗ ನಿತೇಶ್ ಹೆಂಡತಿ ಸ್ನೇಹಿತ ನವೀನ್ ಜೊತೆ ಓಡಿ ಹೋಗಿದ್ದಾಳೆ. ಇದರಿಂದ ಪತಿ ನಿತೇಶ್ ಕಂಗಾಲಾಗಿದ್ದು, ಇತ್ತ ಅಣ್ಣನ ತರ ಅಂದಿದ್ಲು, ಈಗ ಅಣ್ಣನ ಜೊತೆಯೇ ಓಡಿ ಹೋಗಿದ್ದಾಳೆಂದು ಅಳಲು ತೋಡಿಕೊಂಡಿದ್ದಾರೆ.

