H3N2 Scare: ಪಶ್ಚಿಮ ಬಂಗಾಳದಲ್ಲಿ ಹೆಚ್ಚುತ್ತಿರುವ ಹೆಚ್3ಎನ್2; ಆತಂಕ ಬೇಡ ಎನ್ನುತ್ತಾರೆ ಖ್ಯಾತ ಶ್ವಾಸಕೋಶ ತಜ್ಞ ಡಾ ಅರೂಪ್ ಹಾಲ್ದರ್
ಇನ್ಫ್ಲುಯೆಂಜ ಸೋಂಕನ್ನು ಪ್ಯಾರಾಸಿಟಮೋಲ್ ಮಾತ್ರೆ ದ್ರವಾಹಾರದಿಂದ ನಿಯಂತ್ರಿಸಬಹುದೆಂದು ಡಾ ಹಾಲ್ದರ್ ಹೇಳುತ್ತಾರೆ. ಇದರ ಚಿಕಿತ್ಸೆಗೆ ಆ್ಯಂಟಿಬಯೋಟಕ್ ಗಳ ಅವಶ್ಯಕತೆಯಿಲ್ಲ.
ಕೊಲ್ಕತ್ತಾ: ಅಪಾಯಕಾರಿ ಮತ್ತು ಮಾರಣಾಂತಿಕ ಅಡೆನೊವೈರಸ್ ಪಶ್ಚಿಮ ಬಂಗಾಳದಲ್ಲಿ (West Bengal) ಹಾಹಾಕಾರ ಸೃಷ್ಟಿಸಿದ್ದ್ದು ಕೊಲ್ಕತಾ ನಗರದಲ್ಲಿ ಸೋಂಕಿಗೊಳಗಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ಸಹ ದಿನೇದಿನೆ ಹೆಚ್ಚುತ್ತಿದೆ. ಸೋಂಕಿನ ಬಗ್ಗೆ ಜನರಲ್ಲಿ ಹೆಚ್ಚುತ್ತಿರುವ ಗಾಬರಿ ಮತ್ತು ಆತಂಕವನ್ನು ಗಮನದಲ್ಲಿಟ್ಟುಕೊಂಡು ನಗರದ ಖ್ಯಾತ ಶ್ವಾಸಕೋಶ ತಜ್ಞ ಡಾ ಅರೂಪ್ ಹಾಲ್ದರ್ (Dr Arup Haldar) ಹೇಳಿಕೆಯೊಂದರ ಮೂಲಕ ಸೋಂಕಿನ ವಿವರಣೆಯನ್ನು ನೀಡಿದ್ದಾರೆ. ಹೆಚ್3ಎನ್2 (H3N2) ಒಂದು ಇನ್ಫ್ಲುಯೆಂಜ ಆಗಿದ್ದು ಅದು ಹಲವಾರು ವರ್ಷಗಳಿಂದ ನಮ್ಮ ನಡುವೆಯಿದೆ. ಈ ವೈರಸ್ ಹಂದಿಜ್ವರಕ್ಕೆ ಕಾರಣವಾಗುವ ಹೆಚ್1ಎನ್1 ರೂಪಾಂತರಿಗಿಂತ ಕಡಿಮೆ ಅಪಾಯಕಾರಿ ಎಂದು ಅವರು ಹೇಳಿದ್ದಾರೆ.
‘ಇದು ಖಂಡಿತವಾಗಿಯೂ ಹಂದಿಜ್ವರ ಅಲ್ಲ, ಬದಲಿಗೆ ಇನ್ ಫ್ಲುಯೆಂಜ ವೈರಸ್ ನ ಒಂದು ರೂಪಾಂತರಿಯಾಗಿದೆ. ಶೀತವಾದಾಗ ಕಂಡುಬರುವಂಥ ರೋಗಲಕ್ಷಗಳನ್ನೇ ಇನ್ ಫ್ಲುಯೆಂಜ ಸೋಂಕಿತರಲ್ಲಿ ಕಾಣಬಹುದು. ಆದರೆ, ಬೇರೆ ಕಾಯಿಲೆಗಳಿಂದ ಬಳಲುತ್ತಿರುವರಲ್ಲಿ, ರೋಗ ನೀರೋಧಕ ಶಕ್ತಿ ಕ್ಷೀಣಗೊಂಡಿರುವವರಲ್ಲಿ ಮತ್ತು ವಯಸ್ಕರಲ್ಲಿ ಇನ್ ಫ್ಲುಯೆಂಜ ಸೋಂಕು ಫ್ಲೂ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ಸೃಷ್ಟಿಸಬಹುದು. ಚಳಿಗಾಲದಲ್ಲಿ ನಾನು ತಿಳಿಸಿದ ವರ್ಗದ ಜನರು ಫ್ಲೂ ಸಮಸ್ಯೆಯಿಂದ ನಮ್ಮಲ್ಲಿಗೆ ಬರುತ್ತಾರಾದರೂ ನಂತರದ ದಿನಗಳಲ್ಲಿ ಅವರಲ್ಲಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ತಲೆದೋರುತ್ತವೆ. ಈ ಸಮಸ್ಯೆ ಅಧಿಕಗೊಳ್ಳುತ್ತಾ ಸಾಗುವುದರಿಂದ ಎಲ್ಲರೂ ಇನ್ ಫ್ಲುಯೆಂಜ ಲಸಿಕೆ ಹಾಕಿಸಿಕೊಳ್ಳಬೇಕೆಂಬ ಸಲಹೆ ನಾವು ನೀಡುತ್ತೇವೆ,’ ಎಂದು ಡಾ ಅರೂಪ್ ಹಾಲ್ದರ್ ಹೇಳುತ್ತಾರೆ.
ಇದನ್ನೂ ಓದಿ: ಈ ದೇಶದಲ್ಲಿ ಬೆಳಗ್ಗೆ 5.30ಕ್ಕೆ ಶಾಲೆಗಳು ಆರಂಭವಾಗುತ್ತೆ, ಮಕ್ಕಳು 4 ಗಂಟೆಗೆ ಎದ್ದು ಕಣ್ಣುಜ್ಜುತ್ತಲೇ ಶಾಲೆಗೆ ಬರ್ತಾರೆ
ಋತುಗಳ ಬದಲಾವಣೆಯ ಸಮಯದಲ್ಲಿ ಕಾಣಿಸಿಕೊಳ್ಳುವ ಇನ್ ಫ್ಲುಯೆಂಜ ಮತ್ತು ಶ್ವಾಸಕೋಶ ಸಂಬಂಧಿ ರೋಗಗಳು ಒಂದೇ ತೆರನಾಗಿರುತ್ತವೆ. ಇನ್ ಫ್ಲುಯೆಂಜ ಸೋಂಕನ್ನು ಬಹಳ ಸುಲಭವಾಗಿ ಪತ್ತೆ ಮಾಡಬಹುದು.
‘ಇನ್ ಫ್ಲುಯೆಂಜಾ ವೈರಸ್ ಅನ್ನು ಪತ್ತೆ ಮಾಡುವ ವಿಧಾನಗಳು ನಮ್ಮಲ್ಲಿವೆ, ಹಾಗಾಗಿ ಇದನ್ನು ಬೇರೆ ವೈರಸ್ ಗಳಿಗಿಂತ ಸುಲಭವಾಗಿ ಗುರುತಿಸಬಹುದು. ಲ್ಯಾಬ್ ಟೆಸ್ಟ್ ಮಾಡಿಸುವುದು ದುಬಾರಿಯೇನೂ ಅಲ್ಲ. ನಾವು ಇಡೀ ವೈರಸ್ ಪ್ರೊಫೈಲ್ ಮಾಡಲು ಮುಂದಾದರೆ ಅದಕ್ಕೆ ಬಹಳ ಖರ್ಚಾಗುತ್ತದೆ. ನಮ್ಮಲ್ಲಿ ಇನ್ ಫ್ಲುಯೆಂಜಾ ಪರಿಣಿತರದ್ದೇ ಒಂದು ಪ್ರತ್ಯೇಕ ತಂಡವಿದ್ದು ಅವರು ಅದರ ಪತ್ತೆ ಹಚ್ಚುತ್ತಾರೆ. ಇನ್ ಫ್ಲುಯೆಂಜಾ ಬಳಲುತ್ತಿರುವವರಲ್ಲಿ ಅಡೆನೊ ಪತ್ತೆಯಾದರೆ ಅದಕ್ಕೆ ಚಿಕಿತ್ಸೆ ಇಲ್ಲ. ಅಡೆನೊಗೆ ಌಂಟಿ ವೈರಲ್ ಟ್ರೀಟ್ ಮೆಂಟ್ ಇಲ್ಲ. ಆದರೆ ಆದರೆ ಇನ್ ಫ್ಲುಯೆಂಜಾಗೆ ನಮ್ಮಲ್ಲಿ ಚಿಕಿತ್ಸೆ ಇದೆ, ಸೋಂಕಿತರನ್ನು ಸಾಧ್ಯವಾದಷ್ಟು ಬೇಗ ಆಸ್ಯತ್ರೆಗೆ ಕರೆತಂದು ಅಡ್ಮಿಟ್ ಮಾಡಿದರೆ, ರೋಗಿ ಶೀಘ್ರವಾಗಿ ಗುಣಮುಖನಾಗುತ್ತಾನೆ,’ ಎಂದು ಡಾ ಅರೂಪ್ ಹಾಲ್ದರ್ ಹೇಳುತ್ತಾರೆ.
ಇದನ್ನೂ ಓದಿ: ಅನಾನಸ್ ಹಣ್ಣು ತಿನ್ನುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂದು ತಿಳಿದಿದೆಯೇ?
ಇನ್ಫ್ಲುಯೆಂಜ ಸೋಂಕನ್ನು ಪ್ಯಾರಾಸಿಟಮೋಲ್ ಮಾತ್ರೆ ದ್ರವಾಹಾರದಿಂದ ನಿಯಂತ್ರಿಸಬಹುದೆಂದು ಡಾ ಹಾಲ್ದರ್ ಹೇಳುತ್ತಾರೆ. ಇದರ ಚಿಕಿತ್ಸೆಗೆ ಆ್ಯಂಟಿಬಯೋಟಕ್ ಗಳ ಅವಶ್ಯಕತೆಯಿಲ್ಲ.
ಋತುಗಳ ಬದಲಾವಣೆ ಸಮಯದಲ್ಲಿ ಈ ಸೋಂಕು ಪಸರಿಸುವುದು ಸಾಮಾನ್ಯವಾದರೂ ಬೇಸಿಗೆಯಲ್ಲಿ ಅದರ ಪೀಡೆ ಕಡಿಮೆಯಾಗುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ