ಈ ದೇಶದಲ್ಲಿ ಬೆಳಗ್ಗೆ 5.30ಕ್ಕೆ ಶಾಲೆಗಳು ಆರಂಭವಾಗುತ್ತೆ, ಮಕ್ಕಳು 4 ಗಂಟೆಗೆ ಎದ್ದು ಕಣ್ಣುಜ್ಜುತ್ತಲೇ ಶಾಲೆಗೆ ಬರ್ತಾರೆ

ಸಾಮಾನ್ಯವಾಗಿ ಎಲ್ಲಾ ದೇಶಗಳಲ್ಲಿ ಶಾಲೆಗಳು ಬೆಳಗ್ಗೆ 8-9 ಗಂಟೆಯ ಅವಧಿಯಲ್ಲಿ ಆರಂಭವಾಗುತ್ತವೆ. ಆದರೆ ಇಂಡೋನೇಷ್ಯಾದ ಈ ಪ್ರದೇಶದ ಶಾಲೆಯಲ್ಲಿ ಬೆಳಗ್ಗೆ  5.30ಕ್ಕೆ ತರಗತಿಗಳು ಆರಂಭವಾಗುತ್ತವೆ.

ಈ ದೇಶದಲ್ಲಿ ಬೆಳಗ್ಗೆ 5.30ಕ್ಕೆ ಶಾಲೆಗಳು ಆರಂಭವಾಗುತ್ತೆ, ಮಕ್ಕಳು 4 ಗಂಟೆಗೆ ಎದ್ದು ಕಣ್ಣುಜ್ಜುತ್ತಲೇ ಶಾಲೆಗೆ ಬರ್ತಾರೆ
ವಿದ್ಯಾರ್ಥಿಗಳುImage Credit source: NDTV
Follow us
ನಯನಾ ರಾಜೀವ್
|

Updated on:Mar 15, 2023 | 12:32 PM

ಸಾಮಾನ್ಯವಾಗಿ ಎಲ್ಲಾ ದೇಶಗಳಲ್ಲಿ ಶಾಲೆಗಳು ಬೆಳಗ್ಗೆ 8-9 ಗಂಟೆಯ ಅವಧಿಯಲ್ಲಿ ಆರಂಭವಾಗುತ್ತವೆ. ಆದರೆ ಇಂಡೋನೇಷ್ಯಾದ ಈ ಪ್ರದೇಶದ ಶಾಲೆಯಲ್ಲಿ ಬೆಳಗ್ಗೆ  5.30ಕ್ಕೆ ತರಗತಿಗಳು ಆರಂಭವಾಗುತ್ತವೆ. ಮಕ್ಕಳು 4 ಗಂಟೆಗೆ ಎದ್ದು ತಯಾರಾಗಿ ಕಣ್ಣುಜ್ಜುತ್ತಲೇ ಶಾಲೆಗೆ ಹೋಗುತ್ತಾರೆ. ಬೆಳಗ್ಗೆ 5 ಗಂಟೆ ಸುಮಾರಿಗೆ ಆ ಕತ್ತಲಲ್ಲಿ ಮಕ್ಕಳು ರಸ್ತೆಯಲ್ಲಿ ಆಟೋ, ಟ್ಯಾಕ್ಸಿ, ಶಾಲಾ ಬಸ್​ಗಳಿಗಾಗಿ ಕಾಯುತ್ತಾ ನಿಂತಿರುತ್ತಾರೆ. ಈ ಕುರಿತು ಪೋಷಕರಿಂದ ಆಕ್ಷೇಪವೂ ಕೇಳಿಬಂದಿದೆ.

ಶಿಕ್ಷಕರು ಹೇಳುವುದೇನು? ಮಕ್ಕಳು ಬೆಳಗ್ಗೆ ಬೇಗ ಏಳುವುದಿಲ್ಲ, ಮಕ್ಕಳಲ್ಲಿ ಸೋಮಾರಿತನ ಹೆಚ್ಚಾಗಿರುವುದರಿಂದ ಓದಿನ ಮೇಲೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಮಕ್ಕಳು ಬೇಗ ಎದ್ದರೆ ತುಂಬಾ ಲವಲವಿಕೆಯಿಂದಿರುತ್ತಾರೆ, ಹಾಗಾಗಿ ಈ ನಿಯಮ ಜಾರಿಗೆ ತರಲಾಗಿದೆ ಎಂದು ಹೇಳಿದ್ದಾರೆ.

ಪೋಷಕರ ವಾದವೇನು? ಮಕ್ಕಳನ್ನು ಅಷ್ಟು ಬೆಳಗ್ಗೆ ಏಳಿಸಲು ಸಾಧ್ಯವಿಲ್ಲ, ಎದ್ದರೂ ನಿದ್ದೆ ಮಂಪರಿನಲ್ಲಿಯೇ ಇರುತ್ತಾರೆ, ವಾಹನಗಳ ವ್ಯವಸ್ಥೆಯೂ ಕಷ್ಟ, ಮಧ್ಯಾಹ್ನ ಮನೆಗೆ ಬಂದ ತಕ್ಷಣ ಮಲಗಿಬಿಡುತ್ತಾರೆ, ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ, ಮಕ್ಕಳಿಗೆ ಮೊದಲು ಸರಿಯಾದ ನಿದ್ರೆ ಬೇಕು ಎಂದಿದ್ದಾರೆ.

ಸಾಮಾನ್ಯವಾಗಿ ಇಂಡೋನೇಷ್ಯಾದಲ್ಲಿ ಬೆಳಗ್ಗೆ 7-8 ಗಂಟೆಗೆ ಶಾಲೆಗಳು ತೆರೆಯುತ್ತವೆ. ಮಕ್ಕಳಿಗೆ ರಾತ್ರಿ ಇಂದ ಬೆಳಗ್ಗೆ ವರೆಗೆ ಕನಿಷ್ಠ 8 ತಾಸಾದರೂ ನಿದ್ರೆ ಬೇಕು, ಇಲ್ಲವಾದರೆ ಆರೋಗ್ಯ ಹಾಳಾಗುತ್ತದೆ. ಇಂಡೋನೇಷ್ಯಾದ ಕುಪಂಗ್​ನಲ್ಲಿ ಈ ನಿಯಮ ಜಾರಿಯಲ್ಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:32 pm, Wed, 15 March 23

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ