ಬಿಆರ್ ಪಾಟೀಲ್ ಅವರೊಂದಿಗೆ ಮಾತಾಡಿದ್ದೇನೆ, ಪಕ್ಷದ ಅಧ್ಯಕ್ಷನಾಗಿ ವಿಷಯ ತಿಳಿದುಕೊಳ್ಳಬೇಕಿತ್ತು: ಶಿವಕುಮಾರ್

Updated on: Jun 26, 2025 | 1:41 PM

ಬಿಜೆಪಿ ನಾಯಕರು ಎಮರ್ಜೆನ್ಸಿ ವಿರುದ್ಧ ಸಲ್ಲಿಸಿರುವ ದೂರಿನ ಬಗ್ಗೆ ಮಾತಾಡಿದ ಶಿವಕುಮಾರ್, ಅದೊಂದು ಮುಗಿದು ಹೋದ ಅಧ್ಯಾಯ, ಬಿಜೆಪಿ ನಾಯಕರು ಪ್ರಚಾರಕ್ಕಾಗಿ ಕೆದಕುತ್ತಿದ್ದಾರೆ, ತುರ್ತು ಪರಿಸ್ಥಿತಿ ನಂತರ ಜನ ಇಂದಿರಾಗಾಂಧಿಯವರಿಗೆ ಮ್ಯಾಂಡೇಟ್ ನೀಡಿದ್ದರು, ಅದರೆ 1980 ರಲ್ಲಿ ಅವರ ಜನತಾ ಪರಿವಾರವನ್ನು ಸೋಲಿಸಿ ಪುನಃ ಅಧಿಕಾರಕ್ಕೆ ಬಂದರು ಮತ್ತು ದೇಶಕ್ಕಾಗಿ ತಮ್ಮ ಪ್ರಾಣವನ್ನು ಬಲಿಕೊಟ್ಟರು ಎಂದು ಹೇಳಿದರು.

ಬೆಂಗಳೂರು, ಜೂನ್ 26: ಆಳಂದ್ ಶಾಸಕ ಬಿಅರ್ ಪಾಟೀಲ್ (BR Patil) ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಪಕ್ಷದ ಅಧ್ಯಕ್ಷನಾಗಿ ವಾಸ್ತವಾಂಶ ತಿಳಿದುಕೊಳ್ಳುವ ಅವಶ್ಯಕತೆಯಿತ್ತು, ಪಾಟೀಲ್ ಎಲ್ಲ ಮಾಹಿತಿಯನ್ನು ನೀಡಿದ್ದಾರೆ, ಅವರು ನೀಡಿರುವ ವಿವರಗಳನ್ನು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುತ್ತೇನೆ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರೊಂದಿಗೂ ಮಾತಾಡುತ್ತೇನೆ ಎಂದು ಹೇಳಿದರು. ಇನ್ನೆರಡು ದಿನಗಳಲ್ಲಿ ಪಕ್ಷದ ವರಿಷ್ಠರು ಬೆಂಗಳೂರಿಗೆ ಬರಲಿದ್ದಾರೆ ಮತ್ತು ಎಲ್ಲ ಶಾಸಕ ಹಾಗೂ ಮಂತ್ರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಇದನ್ನೂ ಓದಿ:  ಕಾವೇರಿ ಆರತಿ ವೇದಿಕೆಯ ಪ್ರಾಜೆಕ್ಟ್ ಪ್ಲಾನ್ ವೀಕ್ಷಿಸಿದ ಡಿಕೆ ಶಿವಕುಮಾರ್: ರೈತರ ಮನವೊಲಿಸಲು ಸಭೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ