ಬೆಂಗಳೂರಿನ ರಸ್ತೆಗಳನ್ನು ಬೇಸಿಗೆಯಲ್ಲಿ ರಿಪೇರಿ ಮಾಡಿಸಿ ಚರಂಡಿಗಳನ್ನು ಸ್ವಚ್ಛಗೊಳಿಸಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ

|

Updated on: Oct 15, 2024 | 5:57 PM

ನಮ್ಮ ವರದಿಗಾರ ನಗರದ ರಾಚೇನಹಳ್ಳಿಯಲ್ಲಿ ಒಂದು ಕೈಯಲ್ಲಿ ಮೈಕ್ ಮತ್ತೊಂದರಲ್ಲಿ ಕೊಡೆ ಹಿಡಿದುಕೊಂಡು ಪಡುತ್ತಿರುವ ಅವಸ್ಥೆ ನೋಡಿ. ರಸ್ತೆಯಲ್ಲಿ ಅರ್ಧ ಟೈರ್ ಮುಳುಗುವಷ್ಟು ನೀರು ಹರಿಯುತ್ತಿದೆ. ಮುಂದೆ ರಸ್ತೆ ಸಂಪೂರ್ಣವಾಗಿ ಬ್ಲಾಕ್ ಆಗಿದೆಯಂತೆ. ಬೆಂಗಳೂರು ಹಿಂದೊಮ್ಮೆ ಪೆನ್ಷನರ್ಸ್ ಪ್ಯಾರಡೈಸ್ ಅನಿಸಿಕೊಂಡಿತ್ತು!

ಬೆಂಗಳೂರು: ನಗರದಲ್ಲಿ ಮಳೆಯಿಂದ ಉಂಟಾಗಿರುವ ಅವಾಂತರಗಳು ಒಂದೆರಡಲ್ಲ. ನಗರದ ರಸ್ತೆಗಳನ್ನು ಬೇಸಿಗೆ ಕಾಲದಲ್ಲಿ ದುರಸ್ತಿ ಮಾಡಿ ಮಾನ್ಸೂನ್ ಸೀಸನ್ ಗೆ ಯೋಗ್ಯವನ್ನಾಗಿ ಮಾಡಬೇಕಿತ್ತು. ಆದರೆ ಬೃಹತ್ ಬೆಂಗಳೂರು ನಗರ ಪಾಲಿಕೆಯಲ್ಲಿ ಅಧಿಕಾರಿಗಳೇ ದೊರೆಗಳು! ಪಾಲಿಕೆಯ ಆಯುಕ್ತ ತುಷಾರ್ ಗಿರಿನಾಥ್ ನೀಡುವ ಹೇಳಿಕೆ ಮತ್ತು ರಸ್ತೆಗಳ ಸ್ಥಿತಿಯ ನಡುವೆ ಯಾವುದೇ ಸಂಬಂಧವಿರಲ್ಲ. ರಸ್ತೆಗುಂಡಿಗಳನ್ನು ಮುಚ್ಚಲಾಗಿದೆ ಎನ್ನುತ್ತಾರೆ, ಪ್ರಾಯಶಃ ಅವರ ಮನೆ ಮುಂದಿನ ಭಾಗದಲ್ಲಿ ಮಾತ್ರ ಆ ಕೆಲಸ ಆಗಿರಬೇಕು. ಇನ್ನು ನಗರ ಉಸ್ತುವಾರಿ ಸಚಿವರಂತೂ ತಮ್ಮ ಮುಖ್ಯಮಂತ್ರಿಯನ್ನು ಉಳಿಸುವ ಕೆಲಸದಲ್ಲಿ ಬ್ಯೂಸಿ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Bengaluru Rain: ಬೆಂಗಳೂರು ಮಳೆ ನಿಂತರೂ ಅವಾಂತರ ನಿಂತಿಲ್ಲ, ಕರೆಯಂತಾದ ರಸ್ತೆಗಳು, ಹಲವೆಡೆ ಟ್ರಾಫಿಕ್

Follow us on