ಅವತ್ತು ಸಿದ್ದರಾಮಯ್ಯ ಹೇಳಿದ ಮಾತು ಕೇಳಿದ್ದರೆ ಸಿಎಂ ಇಬ್ರಾಹಿಂಗೆ ಈ ಸ್ಥಿತಿ ಬರುತ್ತಿರಲಿಲ್ಲ!

|

Updated on: Oct 04, 2023 | 2:33 PM

ಇಂದು ನಗರದಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಅವರು, ಕಾಂಗ್ರೆಸ್ ಗೆ ವಾಪಸ್ಸಾಗುವ ಬಗ್ಗೆ ಇಂಗಿತ ವ್ಯಕ್ತಪಡಿಸಿದರು. ಪಕ್ಷದ ಹೈಕಮಾಂಡ್ ನ ಕೆಲವರು ತಮ್ಮೊಂದಿಗೆ ಮಾತಾಡಿದ್ದಾರೆ ಆದರೆ ತಾವಿನ್ನೂ ರಾಜ್ಯದ ನಾಯಕರ ಜೊತೆ ಚರ್ಚೆ ಮಾಡಿಲ್ಲ ಅಂತ ಅವರು ಹೇಳಿದರು. ಕುಮಾರಸ್ವಾಮಿಯ ನಡೆಯಿಂದ ಅವರಲ್ಲಿ ವೈರಾಗ್ಯದ ಭಾವವೂ ಮೂಡಿದೆ. ರಾಜಕೀಯದಲ್ಲಿ ಮುಂದುವರಿಯಬೇಕೋ ಇಲ್ಲವೋ ಅಂತ ಗೊಂದಲವುಂಟಾಗಿದೆ ಅಂತ ಅವರು ಹೇಳುವುದನ್ನು ಕೇಳಬಹುದು.

ಬೆಂಗಳೂರು: ನಿಮಗೆ ನೆನಪಿರಬಹುದು. ಈಗಲೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಸಿಎಂ ಇಬ್ರಾಹಿಂ (CM Ibrahim) ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರುವಾಗ ವಿಧಾನ ಸೌಧದ ಮೊಗಸಾಲೆಯಲ್ಲಿ ಎದುರಾದ ಆಗಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah), ಹುಚ್ಚತನ ಮಾಡಬೇಡ, ಜೆಡಿಎಸ್ ನಿನ್ನನ್ನು ಸರಿಯಾಗಿ ನೋಡ್ಕೊಳ್ಳಲ್ಲ್ಲ, ದುಡುಕಿನ ನಿರ್ಧಾರ ಬೇಡ ಅಂತ ಹೇಳಿದ್ದರು. ಅದಕ್ಕೆ ಇಬ್ರಾಹಿಂ, ಏಯ್ ಹೋಗಯ್ಯ ನಿನ್ ಮಾತು ಕೇಳ್ಕೊಂಡಿದ್ರೆ ಉದ್ಧಾರವಾದಂತೆಯೇ ಅಂತ ಹೇಳಿ ಅವರ ಮಾತನ್ನು ಉಡಾಫೆ ಮಾಡಿದ್ದರು. ಅವರಿಬ್ಬರ ನಡುವೆ ರಾಜಕೀಯಕ್ಕೆ ಮೀರಿದ ಗೆಳೆತನವಿದೆ ಮತ್ತು ಹೋಗೋ ಬಾರೋ ಅಂತ ಮಾತಾಡುವಷ್ಟು ಸಲುಗೆಯಿದೆ. ಸಿದ್ದರಾಮಯ್ಯ ಮಾತು ಕೇಳಿದ್ರೆ ಚೆನ್ನಾಗಿತ್ತು ಅಂತ ಇಬ್ರಾಹಿಂ ಅವರಿಗೆ ಈಗ ಅನಿಸುತ್ತಿರಬಹುದು. ಪಕ್ಷದ ಅಧ್ಯಕ್ಷರಾಗಿದ್ದರೂ ಅವರನ್ನು ಕತ್ತಲೆಯಲಿಟ್ಟು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು ಇಬ್ರಾಹಿಂಗೆ ಅತೀವ ವೇದನೆಯಾಗಿದೆ. ಇಂದು ನಗರದಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಅವರು, ಕಾಂಗ್ರೆಸ್ ಗೆ ವಾಪಸ್ಸಾಗುವ ಬಗ್ಗೆ ಇಂಗಿತ ವ್ಯಕ್ತಪಡಿಸಿದರು. ಪಕ್ಷದ ಹೈಕಮಾಂಡ್ ನ ಕೆಲವರು ತಮ್ಮೊಂದಿಗೆ ಮಾತಾಡಿದ್ದಾರೆ ಆದರೆ ತಾವಿನ್ನೂ ರಾಜ್ಯದ ನಾಯಕರ ಜೊತೆ ಚರ್ಚೆ ಮಾಡಿಲ್ಲ ಅಂತ ಅವರು ಹೇಳಿದರು. ಕುಮಾರಸ್ವಾಮಿಯ ನಡೆಯಿಂದ ಅವರಲ್ಲಿ ವೈರಾಗ್ಯದ ಭಾವವೂ ಮೂಡಿದೆ. ರಾಜಕೀಯದಲ್ಲಿ ಮುಂದುವರಿಯಬೇಕೋ ಇಲ್ಲವೋ ಅಂತ ಗೊಂದಲವುಂಟಾಗಿದೆ ಅಂತ ಅವರು ಹೇಳುವುದನ್ನು ಕೇಳಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ