ಜೆಡಿಎಸ್‌ ಸೇರಲು ಕುಮಾರಸ್ವಾಮಿ ಮನೆಗೆ ನಾ ಹೋಗಿಲ್ಲ; ಅವರೇ ನಮ್ಮ ಮನೆಗೆ ಬಂದಿದ್ದರು, ಮೈತ್ರಿಗೆ ಈಗ ಯಾರೆಲ್ಲ ಒಪ್ಪುತ್ತಿಲ್ಲ ಗೊತ್ತಾ? ಸಿಎಂ ಇಬ್ರಾಹಿಂ ನೀಡಿದರು ವಿವರ

ಲೋಕಸಭಾ ಚುನಾವಣಾ ಮೈತ್ರಿ ಬಿಜೆಪಿಗೆ ಬೇಕಿತ್ತಾ? ಅಥವಾ ಜೆಡಿಎಸ್ ಗೆ ಬೇಕಿತ್ತಾ? ಜನತಾದಳದ ಸಿದ್ದಾಂತಕ್ಕೆ ಬಿಜೆಪಿಯವರು ಒಪ್ಪಿದ್ದಾರಾ? ಬಿಜೆಪಿ ಸಿದ್ದಾಂತಕ್ಕೆ ಜೆಡಿಎಸ್ ಒಪ್ಪಿದ್ಯಾ ಅನ್ನೊದು ಸಹ ಜನರಿಗೆ ತಿಳಿಯಬೇಕು. ಕುವೆಂಪು ಅವರ ವಿಚಾರವನ್ನ ಪಠ್ಯಪುಸ್ತಕದಿಂದ ತೆಗೆದಾಗ ಪಕ್ಷದ ವತಿಯಿಂದ ನಾವೆಲ್ಲ ಒಟ್ಟಾಗಿ ಖಂಡಿಸಿದ್ದೆವು. ಆದರೆ ಯಾವುದು ಕ್ಲಾರಿಟಿ ಇಲ್ಲಾ ಈಗ -CM Ibrahim

ಜೆಡಿಎಸ್‌ ಸೇರಲು ಕುಮಾರಸ್ವಾಮಿ ಮನೆಗೆ ನಾ ಹೋಗಿಲ್ಲ; ಅವರೇ ನಮ್ಮ ಮನೆಗೆ ಬಂದಿದ್ದರು, ಮೈತ್ರಿಗೆ ಈಗ ಯಾರೆಲ್ಲ ಒಪ್ಪುತ್ತಿಲ್ಲ ಗೊತ್ತಾ? ಸಿಎಂ ಇಬ್ರಾಹಿಂ ನೀಡಿದರು ವಿವರ
ಜೆಡಿಎಸ್‌ ಸೇರಲು ನಾನು ಯಾವತ್ತೂ ಕುಮಾರಸ್ವಾಮಿ ಮನೆಗೆ ಹೋಗಿಲ್ಲ; ಅವರೇ ಬಂದಿದ್ದರು! ಬಿಜೆಪಿ ಜೊತೆ ಮೈತ್ರಿಗೆ ಯಾರೆಲ್ಲ ಒಪ್ಪುತ್ತಿಲ್ಲ ಗೊತ್ತಾ?
Follow us
Sunil MH
| Updated By: ಸಾಧು ಶ್ರೀನಾಥ್​

Updated on:Oct 04, 2023 | 12:56 PM

ಬೆಂಗಳೂರು, ಅಕ್ಟೋಬರ್ 4: ಲೋಕಸಭೆ ಚುನಾವಣೆಗಾಗಿ ಬಿಜೆಪಿ ಮತ್ತು ಜೆಡಿಎಸ್​ ಮೈತ್ರಿ ( JDS BJP alliance) ಮಾಡಿಕೊಂಡಿರುವ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (JDS Karnataka president CM Ibrahim) ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಮೈತ್ರಿ ಬಗ್ಗೆ ಅಕ್ಟೋಬರ್​ 16 ರ ಮೇಲೆ ಹೇಳ್ತಿನಿ ಅಂತ ಹೇಳಿದ್ದೆ ಎಂದೇ ಮಾತಿಗಾರಂಭಿಸಿದ ಇಬ್ರಾಹಿಂ ಅವರು ಆಂತರಿಕವಾಗಿ ಜೆಡಿಎಸ್ ಪಕ್ಷದಲ್ಲಿ ಏನಾಗ್ತಿದೆ, ಬಿಜೆಪಿ-ಜೆಡಿಎಸ್​ ಮೈತ್ರಿ ವಿಚಾರ, ಪಕ್ಷದ ಮತ್ತೋರ್ವ ನಾಯಕ ಮಾಜಿನ ಸಿಎಂ ಕುಮಾರಸ್ವಾಮಿ ( hd Kumaraswamy ) ಅವರ ಇತ್ತೀಚಿನ ನಡಾವಳಿಗಳು ಸೇರಿದಂತೆ ನಾನಾ ವಿಷಯಗಳ ಬಗ್ಗೆ ಸಮಗ್ರವಾಗಿ ಮಾತನಾಡಿದ್ದಾರೆ.

ಈ ಮಧ್ಯೆ ಪಕ್ಷದಲ್ಲಿ ತಾವು ನಿರ್ವಹಿಸುತ್ತಿರುವ ಪಾತ್ರವೇನು? ತಮ್ಮ ಭವಿಷ್ಯವೇನು ಎಂಬೆಲ್ಲಾ ವಿಷಯಗಳನ್ನೂ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷದ ಕಾರ್ಯಕ್ರಮದಲ್ಲಿ ನಾನು ಭಾಗವಹಿಸ್ತಿಲ್ಲಾ ಅನ್ನೊದು ತಪ್ಪು. ಎಲ್ಲಾ ಜಿಲ್ಲೆಯವರು ನನ್ನ ಸಂಪರ್ಕದಲ್ಲಿ ಇದ್ದಾರೆ. ಹೈದ್ರಾಬಾದ್ ಕರ್ನಾಟಕ ಮತ್ತು ಬಾಂಬೆ ಕರ್ನಾಟಕ ಕಡೆ ಪ್ರವಾಸ ಹೋಗ್ತಿದ್ದೀನಿ ಎಂದು ಹೇಳಿದ್ದಾರೆ.

ಇನ್ನು ಲೋಕಸಭಾ ಚುನಾವಣಾ ಮೈತ್ರಿ ಬಿಜೆಪಿಗೆ ಬೇಕಿತ್ತಾ? ಅಥವಾ ಜೆಡಿಎಸ್ ಗೆ ಬೇಕಿತ್ತಾ? ಜನತಾದಳದ ಸಿದ್ದಾಂತಕ್ಕೆ ಬಿಜೆಪಿಯವರು ಒಪ್ಪಿದ್ದಾರಾ? ಬಿಜೆಪಿ ಸಿದ್ದಾಂತಕ್ಕೆ ಜೆಡಿಎಸ್ ಒಪ್ಪಿದ್ಯಾ ಅನ್ನೊದು ಸಹ ಜನರಿಗೆ ತಿಳಿಯಬೇಕು. ಕುವೆಂಪು ಅವರ ವಿಚಾರವನ್ನ ಪಠ್ಯಪುಸ್ತಕದಿಂದ ತೆಗೆದಾಗ ಪಕ್ಷದ ವತಿಯಿಂದ ನಾವೆಲ್ಲ ಒಟ್ಟಾಗಿ ಖಂಡಿಸಿದ್ದೆವು. ಆದರೆ ಯಾವುದು ಕ್ಲಾರಿಟಿ ಇಲ್ಲಾ ಈಗ. ಜಾತ್ಯಾತೀತ ಪದಗಳನ್ನು ತಗೆದುಹಾಕಿದ್ದಾರೆ ಸಂವಿಧಾನದಿಂದ. ಎನ್ ಆರ್ ಸಿ ಬಗ್ಗೆ ಚರ್ಚೆ ಮಾಡಿದ್ದಾರಾ..? ಅದೂ ಗೊತ್ತಿಲ್ಲಾ ಎಂದು ಮಾರ್ಮಿಕವಾಗಿ ಹೇಳಿದರು.

ಮುಸ್ಲಿಮರ ಮತ ಬರದಿದ್ದರೆ JDS ಶಾಸಕರ ಸಂಖ್ಯೆ 2ಕ್ಕೆ ಇಳಿಯುತ್ತಿತ್ತು! -ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ

ಅಕ್ಟೋಬರ್​​ 16ರಂದು ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಮಾಡ್ತೇನೆ. ರಾಷ್ಟ್ರೀಯ ಅಧ್ಯಕ್ಷ ಏನು ತೀರ್ಮಾನ ಮಾಡ್ತಾರೆಂದು ನೋಡಬೇಕಿದೆ. ಅ. 16ರಂದು ಅಭಿಪ್ರಾಯ ಪಡೆದು, ದೇವೇಗೌಡರ ಜತೆ ಮಾತಾಡ್ತೇನೆ. ಚುನಾವಣೆಯಲ್ಲಿ ಜೆಡಿಎಸ್​ಗೆ ಶೇ. 20ರಷ್ಟು ಮುಸ್ಲಿಂ ವೋಟ್​ ಬಂದಿದೆ. ಮುಸ್ಲಿಮರ ಮತ ಬರದಿದ್ದರೆ JDS ಶಾಸಕರ ಸಂಖ್ಯೆ 2ಕ್ಕೆ ಇಳಿಯುತ್ತಿತ್ತು. ಮೈತ್ರಿ ಲೋಕಸಭೆಗೆ ಮಾತ್ರನಾ, ಜಿ.ಪಂ, ತಾ.ಪಂ.ಗೂ ಮೈತ್ರಿ ಆಗುತ್ತಾ? JDS ತತ್ವ ವಿರೋಧ ಮಾಡಲ್ಲ ಅಂತಾ ಬಿಜೆಪಿಯವರು ಒಪ್ಪಿಕೊಳ್ತಾರಾ? ಎಂದೆಲ್ಲಾ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ತಮ್ಮಜ ದುಗುಡವನ್ನು ಹೊರಹಾಕಿದ್ದಾರೆ.

ರಾಷ್ಟ್ರದ ಮಟ್ಟದಲ್ಲಿ ಮೈತ್ರಿ ಮಾಡಿಕೊಳ್ಳೊದಕ್ಕೆ ನಮಗೆ ಶಕ್ತಿ‌ಇಲ್ಲಾ. ಕೇರಳದವರು ಆಗೊದೆ ಇಲ್ಲಾ ಅಂತ ಬಿಟ್ಟು ಹೋದ್ರು. ಹಾಗಾಗಿ ಈ ಮೈತ್ರಿ ಕರ್ನಾಟಕಕ್ಕೆ ಮಾತ್ರ ಸೀಮಿತ ಆಗಿದೆ. ಎಲ್ಲಾ ಬಿಟ್ಟು ಹೋದಾಗ ನಮಗೆ ಸಿಂಬಲ್ ಉಳಿಯುತ್ತಾ? ಎಲ್ಲಾ ರಾಜ್ಯಗಳ ಘಟಕದ ನಾಯಕರನ್ನ ಕರೆಯಬೇಕು. ಮಹಾರಾಷ್ಟ್ರದಲ್ಲೂ ನಮ್ಮ ಪಾರ್ಟಿ ಸ್ಟ್ರಾಂಗ್ ಇದೆ. ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಎಲ್ಲರನ್ನೂ ಕರೆದು ಅಭಿಪ್ರಾಯ ಪಡೆಯುವುದು ಸೂಕ್ತ ಎಂದು ಇಬ್ರಾಹಿಂ ಹೇಳಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಇನ್ನೂ ಏನೆಲ್ಲ ಹೇಳಿದರು? ಸಂಕ್ಷಿಪ್ತ ರೂಪದಲ್ಲಿ ಇಲ್ಲಿದೆ:

ಬಿಜೆಪಿ, ಜೆಡಿಎಸ್ ಜೊತೆ​ ಮೈತ್ರಿ ಮಾಡಿಕೊಳ್ಳುವ ಮುನ್ನಾ ದಿನಗಳಲ್ಲಿ ಜೆಡಿಎಸ್‌ ಅನ್ನು ನಿರ್ಮೂಲನ ಮಾಡುವ ನಿಟ್ಟಿನಲ್ಲಿಯೇ ಪ್ರಚಾರ ಮಾಡಿತ್ತು. ವಿಷಕಂಠನಾಗಿ ಪ್ರತಿದಿನ ನಾನು ವಿಷ ಕುಡಿಯುತ್ತಿದ್ದೇನೆ. ಬಿಜೆಪಿಯ ದುರಾಡಳಿತದಿಂದ ಕಾಂಗ್ರೆಸ್‌ ಪಕ್ಷ ಜಯಗಳಿಸಿದೆ. ಅದಕ್ಕೆ ಇನ್ನೊಂದು ಸಹಕಾರಿಯಾಗಿದ್ದು H.D. ಕುಮಾರಸ್ವಾಮಿ ಅವರ ಹಿಂದಿನ ವಿಡಿಯೋ ಒಂದು ವೈರಲ್‌ ಆಗಿದ್ದೂ ಬಿಜೆಪಿ ಪತನಕ್ಕೆ ಕಾರಣವಾಗಿತ್ತು. ಕಾಂಗ್ರೆಸ್‌ಗೆ ಮತ ಹಾಕಿ ಅನ್ನುವ ವಿಡಿಯೋ ಅದಾಗಿತ್ತು.

ಇನ್ನೂ ನಾಲ್ಕು ವರ್ಷ ಅವಧಿಯಿದ್ದ ವಿಧಾನಪರಿಷತ್ ಸದಸ್ಯ ಸ್ಥಾನವನ್ನು ಬಿಟ್ಟು JDSಗೆ ಬಂದಿದ್ದೇನೆ. ಪೋಸ್ಟರ್ ಮತ್ತು ಬ್ಯಾನರ್‌ನಲ್ಲಿ ಎಲ್ಲಾ ಜನರ ಹೃದಯದಲ್ಲಿದ್ದೇನೆ. ಜೆಡಿಎಸ್‌ ಸೇರಲು ನಾನು ಕುಮಾರಸ್ವಾಮಿ ಮನೆಗೆ ಹೋಗಿಲ್ಲ. ಕುಮಾರಸ್ವಾಮಿಯೇ ನಮ್ಮ ಮನೆ ಬಳಿ ಎಷ್ಟು ಬಾರಿ ಬಂದಿದ್ದರು ಗೊತ್ತಾ? ಇತ್ತೀಚೆಗೆ, ಕುಮಾರಸ್ವಾಮಿ ನನ್ನ ಬಳಿ ಯಾವ ವಿಚಾರವೂ ಪ್ರಸ್ತಾಪ ಮಾಡಿಲ್ಲ.

ಮೈತ್ರಿಗೆ ನಾವು ಒಪ್ಪುವುದಿಲ್ಲ ಎಂದು 11 ಶಾಸಕರು ಹೇಳಿದ್ದಾರೆ. ಶಾಸಕರೇ ನನ್ನ ಬಳಿ ಹೇಳಿದ್ದಾರೆ, ಆದ್ರೆ ಹೆಸರು ಪ್ರಸ್ತಾಪ ಮಾಡಲ್ಲ. ದೇವೆೇಗೌಡರು ಮತ್ತು ಕುಮಾರಸ್ವಾಮಿ ಮೇಲೆ ನನಗೆ ಗೌರವ ಇದೆ. ಅವರು ಏನು ಹೇಳ್ತಾರೆ ನೋಡಿ ಮುಂದಿನ ತೀರ್ಮಾನ ಕೈಗೊಳ್ತೇನೆ ಎಂದು ಬೆಂಗಳೂರಿನಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:39 pm, Wed, 4 October 23