ಹಿಂದೂಗಳ ಮೇಲಿನ ದಾಳಿಗೆ ತಕ್ಕ ಉತ್ತರ ಕೊಡಲು VHP, ಬಜರಂಗದಳ ಸಿದ್ಧ: RSS ಪ್ರಾಂತ ಸಹ ಕಾರ್ಯವಾಹ ಪ್ರಕಾಶ್ ಎಚ್ಚರಿಕೆ
ವಿಶ್ವ ಹಿಂದೂ ಪರಿಷತ್ನ 60 ನೇ ವರ್ಷಾಚರಣೆ ಹಿನ್ನೆಲೆ ಬುಧವಾರ ಶೌರ್ಯ ಯಾತ್ರೆಯ ಉಪರಥ ಯಾತ್ರೆಗೆ ಚಾಲನೆ ನೀಡಿ ಮಂಗಳೂರಿನಲ್ಲಿ ಮಾತನಾಡಿರುವ ಆರ್ಎಸ್ಎಸ್ ಪ್ರಾಂತ ಸಹ ಕಾರ್ಯವಾಹ ಪ್ರಕಾಶ್, ಹಿಂದೂಗಳ ಮೇಲಿನ ದಾಳಿಯನ್ನು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸಹಿಸುವುದಿಲ್ಲ. ದಾಳಿಗೆ ತಕ್ಕ ಉತ್ತರ ಕೊಡಲು VHP ಹಾಗೂ ಬಜರಂಗದಳ ಸಿದ್ಧವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಂಗಳೂರು, ಅಕ್ಟೋಬರ್ 04: ಹಿಂದೂಗಳ ಮೇಲಿನ ದಾಳಿಯನ್ನು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸಹಿಸುವುದಿಲ್ಲ. ದಾಳಿಗೆ ತಕ್ಕ ಉತ್ತರ ಕೊಡಲು VHP ಹಾಗೂ ಬಜರಂಗದಳ ಸಿದ್ಧವಿದೆ ಎಂದು ಆರ್ಎಸ್ಎಸ್ ಪ್ರಾಂತ ಸಹ ಕಾರ್ಯವಾಹ ಪ್ರಕಾಶ್ ಎಚ್ಚರಿಕೆ ನೀಡಿದ್ದಾರೆ. ವಿಶ್ವ ಹಿಂದೂ ಪರಿಷತ್ನ 60 ನೇ ವರ್ಷಾಚರಣೆ ಹಿನ್ನೆಲೆ ಬುಧವಾರ ಶೌರ್ಯ ಯಾತ್ರೆಯ ಉಪರಥ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇಂತಹ ದಾಳಿಯನ್ನು ವಿಶ್ವ ಹಿಂದೂ ಪರಿಷತ್ ಯಾವತ್ತೂ ಸಹಿಸಲ್ಲ. ಅವರಿಗೆ ತಕ್ಕ ಉತ್ತರ ಕೊಡಲು ಬಜರಂಗದಳ ಯುವಕರು ಸಿದ್ಧರಿದ್ದಾರೆ ಎಂದಿದ್ದಾರೆ.
ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸುತ್ತಾರೆ. ಮುಸ್ಲಿಮರ ಹಬ್ಬದ ಮೆರವಣೆಗೆಯಲ್ಲೂ ಹಿಂದೂಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಪರೋಕ್ಷವಾಗಿ ಶಿವಮೊಗ್ಗ ಗಲಾಟೆ ಪ್ರಸ್ತಾವಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಗಲಭೆಗಳು ನಡೆಯುತ್ತಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಕಾರಣ: ಪ್ರತಾಪ್ ಸಿಂಹ, ಸಂಸದ
ವಿಎಚ್ಪಿ ಮತ್ತು ಬಜರಂಗದಳದ ನೇತೃತ್ವದಲ್ಲಿ ಸನಾತನ ಧರ್ಮದ ರಕ್ಷಣೆ ಹಾಗೂ ಹಿಂದೂಗಳ ಜಾಗೃತಿಗೋಸ್ಕರ ಶೌರ್ಯ ಯಾತ್ರೆ ಮಾಡಲಾಗುತ್ತಿದೆ. ಗೋವುಗಳು, ದೇವಸ್ಥಾನಗಳು, ಶೃದ್ದಾ ಕೇಂದ್ರಗಳನ್ನು ಉಳಿಸಿ ಬೆಳೆಸಲು, ಲವ್ ಜಿಹಾದ್, ಮತಾಂತರ, ಗೋಹತ್ಯೆ ತಡೆದು ಹಿಂದೂ ಧರ್ಮದ ರಕ್ಷಣೆಗಾಗಿ ನಗರದ ಅಂಬೇಡ್ಕರ್ ವೃತ್ತದಿಂದ ಬೃಹತ್ ಶೋಭಾಯಾತ್ರೆ ಮಾಡಲಾಗುತ್ತಿದ್ದು, ಕದ್ರಿ ಮೈದಾನದಲ್ಲಿ ಅಕ್ಟೋಬರ್ 9 ರಂದು ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ.
ಸಂವಿಧಾನಕ್ಕೆ ಅಪಮಾನ ಮಾಡಲು ಸರ್ಕಾರವೇ ಅವಕಾಶ ಕೊಡ್ತಾ? ಸಿ.ಟಿ.ರವಿ ಪ್ರಶ್ನೆ
ಬೆಂಗಳೂರಿನಲ್ಲಿ ಬಿಜೆಪಿಯ ಮಾಜಿ ಶಾಸಕ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದು, ಕುವೆಂಪು ತವರಿನಲ್ಲೇ ಮತಾಂಧ ಶಕ್ತಿಗಳು ಮೆರೆಯಲು ಅವಕಾಶ ಮಾಡಿ ಕೊಟ್ಟಿದ್ದಾರೆ. ಖಡ್ಗ ಹಿಡಿಯಲು ಹೇಗೆ ಅವಕಾಶ ಕೊಟ್ರಿ ಅಂತಾ ಸರ್ಕಾರಕ್ಕೆ ಪ್ರಶ್ನೆ ಮಾಡಬೇಕಿದೆ. ಹಿಂದೂ ಸಮಾಜೋತ್ಸವ ಬ್ಯಾನರ್ ತೆಗೆಸಲು ಉಡುಪಿಯಲ್ಲಿ ಇಡೀ ಇಲಾಖೆ ಮುಂದೆ ನಿಲ್ಲುತ್ತದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ರವಿವಾರದ ಗಲಭೆ ಬಳಿಕ ಸಹಜ ಸ್ಥಿತಿಗೆ ಮರಳುತ್ತಿರುವ ಶಿವಮೊಗ್ಗದ ರಾಗಿಗುಡ್ಡ ಪ್ರದೇಶ; ಸೆಕ್ಷನ್ 144 ಮುಂದುವರಿಕೆ
ಔರಂಗಜೇಬ್ನ ಫೋಟೋ ಹಾಕಿ ಮೆರೆಸುವ ಉದ್ದೇಶವಾದ್ರು ಏನು? ಒಬ್ಬ ಮತಾಂಧ ಟಿಪ್ಪು ನಿಮಗೆ ಸಾಕಾಗುವುದಿಲ್ವಾ. ಕ್ರೂರಿ ಮತಾಂಧನನ್ನು ಪ್ರತಿಷ್ಠಾಪಿಸಿ ಯಾವ ಸಂದೇಶ ಕೊಡುತ್ತಿದ್ದೀರಿ? ಸಂವಿಧಾನಕ್ಕೆ ಅಪಮಾನ ಮಾಡಲು ಸರ್ಕಾರವೇ ಅವಕಾಶ ಕೊಡ್ತಾ? ಇನ್ಮುಂದೆ ಅಫ್ಜಲ್ ಗುರು, ಜಿನ್ನಾ, ಬಿನ್ ಲಾಡೆನ್, ಸದ್ದಾಂ ಹುಸೇನ್, ಹೀಗೆ ಅನೇಕರನ್ನು ವೈಭವೀಕರಿಸಿದರೆ ಆಶ್ಚರ್ಯ ಇಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.