ಸಿಎಂ ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದರೆ ಪೂರ್ತಿ 3.16 ಜಮೀನು ಅವರಿಗೆ ಸಿಗುತಿತ್ತು: ಎಎಸ್ ಪೊನ್ನಣ್ಣ, ಸಿಎಂ ಕಾನೂನು ಸಲಹೆಗಾರ

|

Updated on: Jul 04, 2024 | 5:49 PM

ಸಿಎಂ ಪತ್ನಿಗೆ 2019ರಲ್ಲಿ ಸೈಟು ಸಿಕ್ಕಿವೆ ಎಂದು ಹೇಳಿದ ಪೊನ್ನಣ್ಣ, 50:50ಅನುಪಾತದಲ್ಲಿ ಸೈಟು ಹಂಚುವ ನಿಯಮವನ್ನು ಪುನರ್ ಪರಿಶೀಲಿಸುವ ನಿರ್ಧಾರವನ್ನು ಮುಖ್ಯಮಂತ್ರಿ ತೆಗೆದುಕೊಂಡಿದ್ದಾರೆ ಎಂದರು. ಈ ನಿಯಮಾವಳಿ ಅಡಿ ಆಗಿರುವ ನಿವೇಶನಗಳ ಹಂಚಿಕೆಯ ಸಮಗ್ರ ತನಿಖೆ ನಡೆಸುವ ಬಗ್ಗೆ ಅವರು ಮಾತಾಡಿದ್ದಾರೆ ಎಂದು ವಕೀಲರೂ ಆಗಿರುವ ಶಾಸಕ ಪೊನ್ನಣ್ಣ ಹೇಳಿದರು.

ಬೆಂಗಳೂರು: ಕಾಂಗ್ರೆಸ್ ಶಾಸಕ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ ಇಂದು ನಗರದಲ್ಲಿ ಪತ್ರಿಕಾ ಗೋಷ್ಠಿಯೊಂದನ್ನು ನಡೆಸಿ ಮುಡಾ ಹಗರಣದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡಿದರು. ಒಂದೆರಡು ಪ್ರಶ್ನೆಗಳಿಗೆ ಅವರಿಂದ ಸೂಕ್ತ ಉತ್ತರ ಸಿಗಲಿಲ್ಲ. ಆ ವಿಚಾರ ಬೇರೆ, ಈಗ ಸೃಷ್ಟಿಯಾಗಿರುವ ವಿವಾದ ಬೇರೆ ಅಂತ ಅವರು ಹೇಳಿ ಪ್ರಶ್ನೆಯನ್ನು ತೇಲಿಸುವ ಪ್ರಯತ್ನ ಮಾಡಿದರು. ಮುಖ್ಯಮಂತ್ರಿಯವರ ಪತ್ನಿ ತಮ್ಮ 3.16 ಜಮೀನನ್ನು ಮುಡಾ ಸ್ವಾದೀನ ಮಾಡಿಕೊಂಡಿರುವುದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಿದ್ದರೆ ಪೂರ್ತಿ ಜಮೀನು ಅವರಿಗೆ ಸಿಗುತ್ತಿತ್ತೇನೋ? ಅದರೆ, ಹಾಗೆ ಮಾಡದೆ 15ವರ್ಷಗಳ ಹಿಂದೆ ಸ್ವಾಧೀನವಾದ ಜಮೀನು ಬದಲಿಗೆ ಸಿಕ್ಕ ಪರಿಹಾರವನ್ನು ಸ್ವೀಕರಿಸಿದ್ದು ಅವರಿಂದ ಅಪರಾಧವಾಗಿಬಿಟ್ಟಿದೆ ಎಂದು ಪೊನ್ನಣ್ಣ ಹೇಳಿದರು. ನಿಯಮಾವಳಿಯ ಆಧಾರದಲ್ಲಿ ಬೇರೆಯವರಿಗೂ ನಿವೇಶನಗಳು ಅಲಾಟ್ ಆಗಿವೆ, ಅವರಿಗೆಲ್ಲ ಸೈಟು ಸಿಗದೆ ಕೇವಲ ಮುಖ್ಯಮಂತ್ರಿಯವರ ಪತ್ನಿಗೆ ಮಾತ್ರ ಸಿಕ್ಕಿದ್ದರೆ ಅದು ನಿಶ್ಚಿತವಾಗಿಯೂ ವಿವಾದಾಸ್ಪದ ಅನಿಸುತಿತ್ತು ಎಂದು ಪೊನ್ನಣ್ಣ ಹೇಳಿದರು. ಮುಡಾ, ಸಿಎಂ ಪತ್ನಿಯವರ ಜಮೀನು ಸ್ವಾಧೀನ ಮಾಡಿಕೊಳ್ಳುವಾಗ ನೋಟೀಸ್ ನೀಡಿರಲಿಲ್ಲ, ಅವರಿಗಷ್ಟೇ ಅಲ್ಲ ಜಮೀನು ಕಳೆದುಕೊಂಡ ಬೇರೆಯವರಿಗೂ ಮುಡಾ ನೊಟೀಸ್ ಕೊಟ್ಟಿರಲಿಲ್ಲ ಎಂದು ಪೊನ್ನಣ್ಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    Virajpet Election 2023 Winner: ವಿರಾಜಪೇಟೆಯಲ್ಲಿ ಬಿಜೆಪಿಗೆ ಅನಿರೀಕ್ಷಿತ ಸೋಲು; ಗೆದ್ದುಬೀಗಿದ ಪೊನ್ನಣ್ಣ- ಹ್ಯಾಟ್ರಿಕ್ ಸರದಾರನಿಗೆ ಮುಖಭಂಗ

Published On - 3:43 pm, Thu, 4 July 24

Follow us on