ಕೆಜಿಎಫ್​ ನಗರಸಭೆ ಅಧಿಕಾರಿಗಳಿಂದ ಸ್ವೀಟ್​ ಅಂಗಡಿಗಳ ಮೇಲೆ ದಾಳಿ; ಕ್ಯಾನ್ಸರ್​ ಕಾರಕ ಕಲರ್ ಬಳಸಿ ತಯಾರು ಮಾಡಿದ್ದ ಸಿಹಿ ತಿಂಡಿಗಳು ವಶಕ್ಕೆ

ಗೋಬಿ ಮಂಜೂರಿ, ಕಬಾಬ್‌ ಆಯ್ತು, ಈಗ ಸ್ವೀಟ್​ ಅಂಗಡಿಗಳ ಮೇಲೆ ದಾಳಿ ಮಾಡಿದ ಕೆಜಿಎಫ್​ ನಗರಸಭೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ವೇಳೆ ಕ್ಯಾನ್ಸರ್​ ಕಾರಕ ಕಲರ್ ಬಳಸಿ ತಯಾರು ಮಾಡಿದ್ದ ಸ್ವೀಟ್​ ಹಾಗೂ ತಿಂಡಿಗಳನ್ನು ವಶಕ್ಕೆ ಪಡೆಯಲಾಯಿತು. ಜೊತೆಗೆ ಆಹಾರ ಸುರಕ್ಷತೆ ನಿಯಮ ಪಾಲಿಸದೆ ಸ್ವೀಟ್​ ತಯಾರು ಮಾಡುತ್ತಿದ್ದ ಅಂಗಡಿಗಳಿಗೆ ನೋಟೀಸ್​ ನೀಡಿ ದಂಡ ವಿಧಿಸಲಾಗಿದೆ.

ಕೆಜಿಎಫ್​ ನಗರಸಭೆ ಅಧಿಕಾರಿಗಳಿಂದ ಸ್ವೀಟ್​ ಅಂಗಡಿಗಳ ಮೇಲೆ ದಾಳಿ; ಕ್ಯಾನ್ಸರ್​ ಕಾರಕ ಕಲರ್ ಬಳಸಿ ತಯಾರು ಮಾಡಿದ್ದ ಸಿಹಿ ತಿಂಡಿಗಳು ವಶಕ್ಕೆ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 04, 2024 | 3:48 PM

ಕೋಲಾರ, ಜು.04: ಕೆಜಿಎಫ್​ ನಗರಸಭೆ ಅಧಿಕಾರಿಗಳ ಕಾರ್ಯಾಚರಣೆ ಮುಂದುವರೆದಿದ್ದು, ಇಂದು(ಗುರುವಾರ) ಕೆಜಿಎಫ್​ ನಗರಸಭೆ ವ್ಯಾಪ್ತಿಯಲ್ಲಿ ಸ್ವೀಟ್​​ ಅಂಗಡಿಗಳ ಮೇಲೆ ನಗರಸಭೆ ಪೌರಾಯುಕ್ತ ಪವನ್​ ಕುಮಾರ್​ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈ ವೇಳೆ ಕ್ಯಾನ್ಸರ್​ ಕಾರಕ ಕಲರ್ ಬಳಸಿ ತಯಾರು ಮಾಡಿದ್ದ ಸ್ವೀಟ್​ ಹಾಗೂ ತಿಂಡಿಗಳನ್ನು ವಶಕ್ಕೆ ಪಡೆಯಲಾಯಿತು. ಜೊತೆಗೆ ಆಹಾರ ಸುರಕ್ಷತೆ ನಿಯಮ ಪಾಲಿಸದೆ ಸ್ವೀಟ್​ ತಯಾರು ಮಾಡುತ್ತಿದ್ದ ಅಂಗಡಿಗಳಿಗೆ ನೋಟೀಸ್​ ನೀಡಿ ದಂಡ ವಿಧಿಸಲಾಗಿದೆ. ಇನ್ನು ಅಧಿಕಾರಿಗಳು, ಕಲರ್ ಬಳಸಿ ತಯಾರು ಮಾಡಿದ್ದ ಸ್ವೀಟ್​ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದು ಕಸದ ಲಾರಿಗೆ ತುಂಬಿಸಿದ್ದಾರೆ.

ಇತ್ತೀಚೆಗಷ್ಟೇ ಕೋಲಾರದ ಕೆಜಿಎಫ್ ನಗರಸಭೆ ಅಧಿಕಾರಿಗಳು ಗೋಬಿ ಮಂಜೂರಿ, ಕಬಾಬ್‌ ಸೆಂಟರ್​ಗಳ ಮೇಲೆ‌ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅವುಗಳಲ್ಲಿ ಬಳಸಲಾಗುತ್ತಿದ್ದ ಬಣ್ಣದ ಐಟಂಗಳನ್ನು ಬ್ಯಾನ್ ಮಾಡಿದ್ದರು. ಜೊತೆಗೆ ಕಲರ್‌‌ ಬಳಸುವ ಎಲ್ಲಾ ಗೋಬಿ ಮಂಚೂರಿ, ಕಬಾಬ್ ಸೆಂಟರ್​ಗಳಿಗೆ ಭೇಟಿ ನೀಡಿ ಸರ್ಕಾರದ ಆದೇಶದಂತೆ ನಿಷೇಧಿತ ಕಲರ್ ಬಳಸದಂತೆ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇಂದು ಸ್ವೀಟ್​​ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಹಾವೇರಿ: ವರದಾ ನದಿ ಉಕ್ಕಿ ಸೇತುವೆ ಮುಳುಗಡೆ, ಹರಿಯುವ ನದಿಯಲ್ಲೇ ವಾಹನ ಚಾಲನೆ
ಹಾವೇರಿ: ವರದಾ ನದಿ ಉಕ್ಕಿ ಸೇತುವೆ ಮುಳುಗಡೆ, ಹರಿಯುವ ನದಿಯಲ್ಲೇ ವಾಹನ ಚಾಲನೆ
ಕುಮಾರಸ್ವಾಮಿ ಸಿನಿಮಾ ಶೈಲಿಯಲ್ಲಿ ಮಾತಾಡುತ್ತಾರೆ, ಗಾಂಭೀರ್ಯತೆ ಇಲ್ಲ:ಡಿಕೆಶಿ
ಕುಮಾರಸ್ವಾಮಿ ಸಿನಿಮಾ ಶೈಲಿಯಲ್ಲಿ ಮಾತಾಡುತ್ತಾರೆ, ಗಾಂಭೀರ್ಯತೆ ಇಲ್ಲ:ಡಿಕೆಶಿ
ಕಳಸಾ-ಹೊರನಾಡು ನಡುವಿನ ಹೆಬ್ಬಾರೆ ಸೇತುವೆ ಜಲಾವೃತ,ಭದ್ರೆಯಲ್ಲಿ ಹೆಚ್ಚು ನೀರು
ಕಳಸಾ-ಹೊರನಾಡು ನಡುವಿನ ಹೆಬ್ಬಾರೆ ಸೇತುವೆ ಜಲಾವೃತ,ಭದ್ರೆಯಲ್ಲಿ ಹೆಚ್ಚು ನೀರು
ದಕ್ಷಿಣ ಕರ್ನಾಟಕ 7 ಜಿಲ್ಲೆಗಳಲ್ಲಿ ನಿಲ್ಲದ ಮಳೆ ಅಬ್ಬರ, ಜನಜೀವನ ಅಸ್ತವ್ಯಸ್ತ
ದಕ್ಷಿಣ ಕರ್ನಾಟಕ 7 ಜಿಲ್ಲೆಗಳಲ್ಲಿ ನಿಲ್ಲದ ಮಳೆ ಅಬ್ಬರ, ಜನಜೀವನ ಅಸ್ತವ್ಯಸ್ತ
Legislative Session Live: ವಿಧಾನಸಭೆ ಅಧಿವೇಶನ; ಮಧ್ಯಾಹ್ನದ ಕಲಾಪ ಆರಂಭ
Legislative Session Live: ವಿಧಾನಸಭೆ ಅಧಿವೇಶನ; ಮಧ್ಯಾಹ್ನದ ಕಲಾಪ ಆರಂಭ
ವಿದ್ಯುತ್​​ ತಂತಿ ತಗುಲಿ ಹೆಬ್ಬಾವು ಸಾವು, ಆತ್ಮಹತ್ಯೆ ಎಂದ ನೆಟ್ಟಿಗರು
ವಿದ್ಯುತ್​​ ತಂತಿ ತಗುಲಿ ಹೆಬ್ಬಾವು ಸಾವು, ಆತ್ಮಹತ್ಯೆ ಎಂದ ನೆಟ್ಟಿಗರು
ಕೊಪ್ಪಳ; ತಾವೇ ಬೆಳೆದ ಬೆಳೆಯನ್ನು ಕಿತ್ತು ಹಾಕಿದ ರೈತರು
ಕೊಪ್ಪಳ; ತಾವೇ ಬೆಳೆದ ಬೆಳೆಯನ್ನು ಕಿತ್ತು ಹಾಕಿದ ರೈತರು
ದರ್ಶನ್ ಬಗ್ಗೆ ಮಾತನಾಡಿದ ಹ್ಯಾಂಡ್ಸಮ್ ಹೀರೋ ಧ್ಯಾನ್
ದರ್ಶನ್ ಬಗ್ಗೆ ಮಾತನಾಡಿದ ಹ್ಯಾಂಡ್ಸಮ್ ಹೀರೋ ಧ್ಯಾನ್
ಶನಿದೇವರ ಫೋಟೋ ಮನೆಯಲ್ಲಿ ಹಾಕಬಹದಾ? ತಿಳಿಯಲು ಈ ವಿಡಿಯೋ ನೋಡಿ
ಶನಿದೇವರ ಫೋಟೋ ಮನೆಯಲ್ಲಿ ಹಾಕಬಹದಾ? ತಿಳಿಯಲು ಈ ವಿಡಿಯೋ ನೋಡಿ
Nithya Bhavishya: ಮಂಗಳವಾರದ 12 ರಾಶಿಗಳ ಫಲಾಫಲ ತಿಳಿಯಲು ವಿಡಿಯೋ ನೋಡಿ
Nithya Bhavishya: ಮಂಗಳವಾರದ 12 ರಾಶಿಗಳ ಫಲಾಫಲ ತಿಳಿಯಲು ವಿಡಿಯೋ ನೋಡಿ