ತೊಡೆಗೆ ಗಾಯವಾಗಿರದಿದ್ದರೆ ಟೊಕಿಯೋ ಒಲಂಪಿಕ್ಸ್​ನಲ್ಲಿ ಬಜರಂಗ್ ಪೂನಿಯಾ ಚಿನ್ನ ಗೆಲ್ಲುವುದನ್ನು ಯಾರೂ ತಡೆಯುತ್ತಿರಲಿಲ್ಲ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 08, 2021 | 12:31 AM

ಅವರು ಟ್ರೇಯೊಳಗಿಂದ ಪದಕವನ್ನು ಎತ್ತಿಕೊಂಡು, ತಮ್ಮ ಕೊರಳಿಗೆ ಹಾಕಿಕೊಂಡು ಎರಡೂ ಕೈಗಳನ್ನು ಮೇಲೆತ್ತಿದರು. ಆಮೇಲೆ ಪದಕವನ್ನು ಕೈಯಿಂದ ಮೇಲಕ್ಕೆತ್ತಿ ತದೇಕದೃಷ್ಟಿಯಿಂದ ಒಂದು ಬದಿಯನ್ನು ನೋಡಿ ನಂತರ ಅದನ್ನು ತಿರುಗಿಸಿ ಮತ್ತೊಂದು ಬದಿಯನ್ನು ಸಹ ನೋಡಿ ಅದನ್ನು ತಮ್ಮ ಹೊಟ್ಟೆಯ ಮೇಲೆ ನೇತಾಡಲು ಬಿಟ್ಟರು.

ಪದಕ ಯಾವುದಾದರಾಗಲಿ, 4 ವರ್ಷಗಳಿಗೊಮ್ಮೆ ನಡೆಯುವ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ವಿಶ್ವದ ಉತ್ಕೃಷ್ಟ ಸ್ಪರ್ಧಿಗಳೊಂದಿಗೆ ಸೆಣಸಿ ಅದನ್ನು ಪೋಡಿಯಂ ಮೇಲೆ ಪಡೆಯುವಾಗ ಅಥ್ಲೀಟ್ನೊಬ್ಬ ಅನುಭವಿಸುವ ಸಂತೋಷ, ಸಂತೃಪ್ತಿ ಮತ್ತು ಸಾರ್ಥಕ ಭಾವನೆ ಇದೆಯಲ್ಲ ಅದು ಅವನಿಗೆ ಬೇರೆಲ್ಲೂ ಸಿಗಲಾರದು. ಶನಿವಾರ ಭಾರತದ ಚಾಂಪಿಯನ್ ಕುಸ್ತಿಪಟು ಬಜರಂಗ್ ಪೂನಿಯಾ 65 ಕೆಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿಯ ಕಂಚಿನ ಪದಕಕ್ಕಾಗಿ ನಡೆಸಿದ ಸೆಣಸಿನಲ್ಲಿ ಕಜಕಸ್ತಾನ್ ದೇಶದ ದೌಲೆಟ್ ನಿಯಾಜ್ಬಿಕೋವ್ ಅವರನ್ನು ಸೋಲಿಸಿ ಪೋಡಿಯಂ ಮೇಲೆ ನಿಂತು ಪದಕ ಸ್ವೀಕರಿಸುವಾಗ ಮತ್ತು ನಂತರ ಅವರ ಮುಖದಲ್ಲಿ ವ್ಯಕ್ತವಾಗುತ್ತಿದ್ದ ಭಾವನೆಗಳನ್ನು ನೋಡಿದವರಿಗೆ, ಪದಕ ಗೆಲ್ಲುವ ಖುಷಿ ಏನು ಅನ್ನೋದು ಗೊತ್ತಾಗಿರುತ್ತದೆ.

ಅವರು ಟ್ರೇಯೊಳಗಿಂದ ಪದಕವನ್ನು ಎತ್ತಿಕೊಂಡು, ತಮ್ಮ ಕೊರಳಿಗೆ ಹಾಕಿಕೊಂಡು ಎರಡೂ ಕೈಗಳನ್ನು ಮೇಲೆತ್ತಿದರು. ಆಮೇಲೆ ಪದಕವನ್ನು ಕೈಯಿಂದ ಮೇಲಕ್ಕೆತ್ತಿ ತದೇಕದೃಷ್ಟಿಯಿಂದ ಒಂದು ಬದಿಯನ್ನು ನೋಡಿ ನಂತರ ಅದನ್ನು ತಿರುಗಿಸಿ ಮತ್ತೊಂದು ಬದಿಯನ್ನು ಸಹ ನೋಡಿ ಅದನ್ನು ತಮ್ಮ ಹೊಟ್ಟೆಯ ಮೇಲೆ ನೇತಾಡಲು ಬಿಟ್ಟರು.

ಅಸಲಿಗೆ 27 ವರ್ಷದ ಪೂನಿಯಾ ಅವರಿಂದ ಭಾರತ ಚಿನ್ನದ ಪದಕ ನಿರೀಕ್ಷಿಸಿತ್ತು. ಆದರೆ ಒಂದು ತಿಂಗಳ ಹಿಂದೆ ಬಲತೊಡೆಗೆ ಗಾಯವಾಗಿದ್ದರೂ ಅದನ್ನು ಲೆಕ್ಕಿಸದೆ ಅವರು ಅಖಾಡಾದಲ್ಲಿ ಸೆಣಸಿದರು. ಈ ಗಾಯದ ಸಮಸ್ಯೆ ಇಲ್ಲದೆ ಹೋಗಿದ್ದರೆ ಅವರನ್ನು ಚಿನ್ನ ಗೆಲ್ಲದಂತೆ ತಡೆಯುವುದು ಯಾವ ಪೈಲ್ವಾನನಿಗೂ ಸಾಧ್ಯವಾಗುತ್ತಿರಲಿಲ್ಲ. ಶನಿವಾರದ ಬೌಟ್ನಲ್ಲಿ ಅವರು ತೊಡೆಗೆ ಪಟ್ಟಿ ಸುತ್ತಿಕೊಳ್ಳದೆ ದೌಲೆಟ್ ಅವರನ್ನು ಅನಾಯಾಸವಾಗಿ ಸೋಲಿಸಿದರು. ಒಲಂಪಿಕ್ಸ್ನಲ್ಲಿ ಇದು ಅವರ ಮೊದಲ ಪದಕವಾಗಿದೆ.

ಹರಿಯಾಣದ ಈ ಪೈಲ್ವಾನನಿಗೆ ಈಗಿನ್ನೂ 27 ವರ್ಷ. 2024ರ ಒಲಂಪಿಕ್ಸ್ನಲ್ಲಿ ಅವರು ಚಿನ್ನದ ಪದಕ ಗೆಲ್ಲಲಿ ಎಂದು ಭಾರತೀಯರೆಲ್ಲ ಹಾರೈಸುತ್ತಿದ್ದಾರೆ.

ಇದನ್ನೂ ಓದಿ:  ರಸ್ತೆ ಮಧ್ಯೆ ಕೂತು ಸ್ನಾನ ಮಾಡಿದ ನಟ ಮಿಲಿಂದ್​ ಸೋಮನ್​; ವಿಡಿಯೋ ವೈರಲ್

Follow us on