ಪರ್ಪಲ್ ಪ್ಯಾಂಟ್ಸೂಟ್ನಲ್ಲಿ ಪಡ್ಡೆ ಹೈದರ ನಿದ್ರೆಗೆಡಿಸುತ್ತಿದ್ದಾರೆ ’ಶೇರ್ಷಾ’ ಬೆಡಗಿ ಕಿಯಾರಾ ಅಡ್ವಾಣಿ!
ಹೊಸ ಶೈಲಿಯ ಸೂಟ್ ಅಂತ ನಾವು ಹೇಳಿರುವುದಕ್ಕೆ ಕಾರಣವಿದೆ ಮಾರಾಯ್ರೇ. ಬ್ಲೇಜರ್ ನ ಸ್ಲೀವ್ಸ್ ನೋಡಿದರೆ ನಿಮಗೆ ಗೊತ್ತಾಗಿಬಿಡುತ್ತದೆ. ಉಬ್ಬಿದಂಥ (ಪಫ್ಡ್) ತೋಳಿನ ಬ್ಲೇಜರ್ ಇದಕ್ಕೆ ಮೊದಲು ನೀವು ನೋಡಿದ್ದೀರಾ? ಸ್ಟ್ರೇಟ್-ಫಿಟ್ ಪ್ಯಾಂಟ್ ಅವರ ಆಕಾರಕ್ಕೆ ಹೇಳಿ ಮಾಡಿಸಿದಂತಿದೆ.
ಬಾಲಿವುಡ್ನಲ್ಲಿ ಕಿಯಾರಾ ಅಡ್ವಾಣಿ ಸಖತ್ತಾಗಿ ಮಿಂಚುತ್ತಿದ್ದಾರೆ. ಈ ಬಿನ್ನಾಣಗಿತ್ತಿ ನಟಿ ಪ್ರತಿಭಾವಂತೆ ಮತ್ತು ಸೌಂದರ್ಯದಲ್ಲಿ ಯಾವುದೇ ಬಾಲಿವುಡ್ಗಿಂತ ಕಮ್ಮಯಿಲ್ಲ. ಅವರ ಮಟ್ಟಸವಾದ ಅಂಗಸೌಷ್ಠವ ಪಡ್ಡೆಗಳ ನಿದ್ರೆ ಹಾರಿಸಿರುವುದಂತೂ ನಿಜ ಮಾರಾಯ್ರೇ. ನಿಜಜೀವನದಲ್ಲೂ ಸೊಗಸಾದ ಉಡುಪುಗಳನ್ನು ಧರಿಸುವುದರಿಂದ ಕಿಯಾರಾಗೆ ಸ್ಟೈಲಿಶ್ ನಟಿ ಅಂತಲೂ ಹೆಸರು. ನೀವೊಮ್ಮೆ ಅವರ ಇನ್ಸ್ಟಾಗ್ರಾಮ್ಗೆ ಎಡತಾಕಿದರೆ, ಅವರಲ್ಲಿರುವ ಉಡುಪುಗಳ ಸಂಗ್ರಹ ಕಂಡು ದಂಗಾಗುತ್ತೀರಿ. ಇಂಡಿಯನ್, ವೆಸ್ಟರ್ನ್, ಸಾಂಪ್ರದಾಯಿಕ ಮತ್ತು ಮಾಡ್ ಉಡುಪುಗಳ ಭಂಡಾರವನ್ನೇ ಅವರು ತೋರಿಸುತ್ತಾರೆ. ಈ ವಿಡಿಯೋನಲ್ಲಿ ಅವರು ಧರಿಸಿರುವ ಟಿ ಸ್ಕಾಫ್ ಬ್ರ್ಯಾಂಡಿನ ನೇರಳೆ ಬಣ್ಣದ ಹೊಸ ಶೈಲಿಯ ಸೂಟ್ ಧರಿಸಿದ್ದು ನೋಡುಗರ ಎದೆಗೆ ಕಿಚ್ಚು ಹಚ್ಚುತ್ತಾರೆ. ಈ ಇಮೇಜುಗಳನ್ನು ಸಹ ಕಿಯಾರಾ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹೊಸ ಶೈಲಿಯ ಸೂಟ್ ಅಂತ ನಾವು ಹೇಳಿರುವುದಕ್ಕೆ ಕಾರಣವಿದೆ ಮಾರಾಯ್ರೇ. ಬ್ಲೇಜರ್ ನ ಸ್ಲೀವ್ಸ್ ನೋಡಿದರೆ ನಿಮಗೆ ಗೊತ್ತಾಗಿಬಿಡುತ್ತದೆ. ಉಬ್ಬಿದಂಥ (ಪಫ್ಡ್) ತೋಳಿನ ಬ್ಲೇಜರ್ ಇದಕ್ಕೆ ಮೊದಲು ನೀವು ನೋಡಿದ್ದೀರಾ? ಸ್ಟ್ರೇಟ್-ಫಿಟ್ ಪ್ಯಾಂಟ್ ಅವರ ಆಕಾರಕ್ಕೆ ಹೇಳಿ ಮಾಡಿಸಿದಂತಿದೆ.
ಮೈಮೇಲೆ ಹೆಚ್ಚಿನ ಆಭರಣಗಳನ್ನು ಧರಿಸುವ ಗೋಜಿಗೆ ಅವರು ಹೋಗಿಲ್ಲ, ಕೈಯಲಿ ಮಾತ್ರ ಒಂದಷ್ಟು ಉಂಗುರಗಳಿವೆ. ತಮ್ಮ ಅಪೀಯರನ್ಸ್ ಅನ್ನು ಅವರು ಕೂದಲನ್ನು ಕಟ್ಟದೆ ಹೆಗಲ ಮೇಲೆ ಹೊಯ್ದಾಡಲು ಬಿಟ್ಟ್ಟು ಕ್ರಿಶ್ಚಿಯನ್ ಲೌಬೊಟಿನ್ ಪಾದರಕ್ಷೆಗಳೊಂದಿಗೆ ಪೂರ್ತಿಗೊಳಿಸುತ್ತಾರೆ.
ಅಂದಹಾಗೆ, ಅವರ ಈ ಸೂಟಿನ ಬೆಲೆ ರೂ. 47,000
ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಕಿಯಾರಾ ನಾಯಕಿ ನಟಿಯಾಗಿ ನಟಿಸಿದ ‘ಶೆರ್ಷಾ’ ಚಿತ್ರ ಭಾರಿ ಯಶ ಕಂಡಿದೆ ಹಾಗೂ ಚಿತ್ರದಲ್ಲಿ ಅವರಿಬ್ಬರ ನಡುವಿನ ಕೆಮಿಸ್ಟ್ರಿ ಜನರ ಗಮನ ಸೆಳೆದಿದೆ. ಆನ್-ಸ್ಕ್ರೀನ್ ರೋಮಾನ್ಸ್ ಅನ್ನು ಅವರು ಆಫ್-ಸ್ಕ್ರೀನಲ್ಲೂ ಮುಂದುವರಿಸಿದ್ದಾರೆ. ತಮ್ಮ ರಿಲೇಷನ್ಶಿಪ್ ಅನ್ನು ಅವರು ಮುಂದಿನ ವರ್ಷ ಅಧಿಕೃತವಾಗಿ ಬಹಿರಂಗಡಿಸಲಿದ್ದಾರೆ ಎಂಬ ವದಂತಿ ಇದೆ.
ಇದನ್ನೂ ಓದಿ: ವಿಜಯಪುರ: ಕೃಷಿ ಚಟುವಟಿಕೆಗೆ ಮಹೀಂದ್ರಾ ಕೆಯುವಿ100 ಕಾರ್ ಬಳಸಿದ ರೈತ; ವಿಡಿಯೋ ನೋಡಿ