ಹಿರಿಯೂರಲ್ಲಿ ಆಲಿಕಲ್ಲು ಸಮೇತ ಜೋರು ಮಳೆ, ಕಾದ ಹೆಂಚಿನಂತಾಗಿದ್ದ ರಸ್ತೆಗಳು ತಂಪು-ತಂಪು

ಅರುಣ್​ ಕುಮಾರ್​ ಬೆಳ್ಳಿ

Updated on: Apr 11, 2025 | 8:01 PM

ಇವತ್ತು ಬೆಳಗ್ಗೆ ಮಂಗಳೂರಲ್ಲಿ ಜೋರು ಮಳೆ, ಅದಕ್ಕೂ ಮೊದಲು ಧಾರವಾಡದಲ್ಲಿ ಮಳೆರಾಯ ಸುರಿದಿದ್ದ. ಬೆಂಗಳೂರು ನಗರದಲ್ಲಿ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗುತ್ತಿದೆಯಾದರೂ ಕಳೆದ ವಾರದಂತೆ ಈ ವಾರ ಮಳೆಯಾಗಿಲ್ಲ. ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಈ ವಾರ ಮಳೆಯಾಗಿದೆ. ನಾವಿನ್ನೂ ಏಪ್ರಿಲ್ ತಿಂಗಳ ಫೂರ್ವಾರ್ಧದಲ್ಲಿದ್ದೇವೆ. ಇನ್ನೂ ಎರಡು ತಿಂಗಳು ಬೇಸಿಗೆಯ ಧಗೆ.

ಚಿತ್ರದುರ್ಗ, ಏಪ್ರಿಲ್ 11: ಕಳೆದೊಂದು ವಾರದಿಂದ ಅಥವಾ ಅದಕ್ಕೂ ಸ್ವಲ್ಪ ಹೆಚ್ಚಿನ ಸಮಯದಿಂದ ರಾಜ್ಯದ ನಾನಾಭಾಗಗಳಲ್ಲಿ ಮಳೆಯಾಗುತ್ತಿದೆ ಮತ್ತು ಉರಿ ಬೇಸಿಗೆಯಲ್ಲಿ (hot summer) ಹೆಂಚಿನಂತೆ ಕಾಯುತ್ತಿರುವ ಭೂಮಿ ತಾತ್ಕಲಿಕವಾಗಿಯಾದರೂ ತಂಪಾಗುತ್ತಿದೆ ಮಾರಾಯ್ರೇ. ಚಿತ್ರದುರ್ಗ ಬಿಸಿಲು ಜಾಸ್ತಿಯಿರುವ ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಂದು. ಇಂದು ಮಧ್ಯಾಹ್ನ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ಆಲಿಕಲ್ಲು ಸಮೇತ ಜೋರು ಮಳೆ. ಗುಡುಗು, ಮಿಂಚನ್ನು ಸಹ ವಿಡಿಯೋದಲ್ಲಿ ಕೇಳಿಸಿಕೊಳ್ಳಬಹುದು ಮತ್ತು ನೋಡಬಹುದು. ದಿಢೀರ್ ಆಲಿಕಲ್ಲು ಸಮೇತ ಜೋರು ಮಳೆಯಿಂದ ರಸ್ತೆಗಳು ತಣ್ಣಗಾಗಿವೆ.

ಇದನ್ನೂ ಓದಿ: ಮಂಗಳೂರು: ಭಾರೀ ಮಳೆ, ಗಾಳಿಯಿಂದ ಮೆಸ್ಕಾಂಗೆ 33.4 ಕೋಟಿ ರೂ. ನಷ್ಟ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.