ಡಿಕೆ ಶಿವಕುಮಾರ್​ ಅಂಗೈಯಲ್ಲಿ ಹೇರ್​ಲೈನ್ ಫ್ರ್ಯಾಕ್ಟರ್; ಭಯಪಡುವ ಅಗತ್ಯವಿಲ್ಲ ಎಂದ ವೈದ್ಯರು

| Updated By: Digi Tech Desk

Updated on: Oct 08, 2022 | 12:27 PM

ಶನಿವಾರ ಬೆಳಗ್ಗೆ ಅವರು ತಮ್ಮ ಮನೆಯಲ್ಲಿ ಕೈಯೂರಿ ಮೇಲೇಳುವಾಗ ಬಲ ಅಂಗೈಯಲ್ಲಿ ಹೇರ್ ಲೈನ್ ಫ್ರ್ಯಾಕ್ಟರ್ ಉಂಟಾಗಿದೆ.

ಬೆಂಗಳೂರು: ನನಗೂ ವಯಸ್ಸಾಗುತ್ತಿದೆ, ಇನ್ನೆಷ್ಟು ವರ್ಷ ಸಕ್ರಿಯವಾಗಿ ರಾಜಕಾರಣದಲ್ಲಿರಬಲ್ಲೆ ಅಂತ ನಿನ್ನೆಯಷ್ಟೇ ಹೇಳಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ ಅವರಿಗೆ ನಿಜಕ್ಕೂ ನಿವೃತ್ತಿ ವಯಸ್ಸು ಆಗಿದೆ ಅಂತ ಕಾಣುತ್ತದೆ. ಶನಿವಾರ ಬೆಳಗ್ಗೆ ಅವರು ತಮ್ಮ ಮನೆಯಲ್ಲಿ ಕೈಯೂರಿ ಮೇಲೇಳುವಾಗ ಬಲ ಅಂಗೈಯಲ್ಲಿ ಹೇರ್ ಲೈನ್ ಫ್ರ್ಯಾಕ್ಟರ್ (hairline fracture) ಉಂಟಾಗಿದೆ. ಎಕ್ಸ್-ರೇ (X-Ray) ತೆಗೆಸಿ ಅದನ್ನು ದೃಢಪಡಿಸಿರುವ ವೈದ್ಯರು, ಆತಂಕ ಪಡುವ ಕಾರಣವಿಲ್ಲ ಅಂತ ಹೇಳಿದ್ದಾರೆ.

Published on: Oct 08, 2022 12:16 PM