ಸ್ವಂತ ಸಾಮರ್ಥ್ಯದಲ್ಲಿ 180 ಸೀಟು ಗೆದ್ದುಕೊಡಬಲ್ಲರಾದರೆ ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಲಿ: ಬಸನಗೌಡ ಯತ್ನಾಳ್
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭ್ರಷ್ಟರನ್ನು ಬೀದಿಗೆ ತರುತ್ತೇನೆ ಅಂತ ಹೇಳಿದ್ದರು, ಅದರ ಫಲಶೃತಿಯಾಗಿಯೇ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೊದಲಾದವರೆಲ್ಲ ರೋಡಿಗೆ ಬಂದಿದ್ದಾರೆ ಎಂದು ಯತ್ನಾಳ್ ಹೇಳಿದರು.
ವಿಜಯಪುರ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರನ್ನು (BS Yediyurappa) ಲೇವಡಿ ಮಾಡುವುದು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಮುಂದುವರಿಸಿದ್ದಾರೆ. ವಿಜಯಪುರದಲ್ಲಿ (Vijayapura) ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಯಡಿಯೂರಪ್ಪ ರಾಜ್ಯಪ್ರವಾಸ ಮಾಡಿ 180 ಸೀಟು ಗೆದ್ದುಕೊಡುವುದಾದರೆ ಮಾಡಲಿ, ತನಗೇನೂ ಅಭ್ಯಂತರವಿಲ್ಲ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದ ಭಾರತ ಜೋಡೋ ಯಾತ್ರೆ ಬಗ್ಗೆ ಕೇಳಿದಾಗ ಯತ್ನಾಳ್, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭ್ರಷ್ಟರನ್ನು ಬೀದಿಗೆ ತರುತ್ತೇನೆ ಅಂತ ಹೇಳಿದ್ದರು, ಅದರ ಫಲಶೃತಿಯಾಗಿಯೇ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೊದಲಾದವರೆಲ್ಲ ರೋಡಿಗೆ ಬಂದಿದ್ದಾರೆ ಎಂದರು.
Latest Videos