ಉತ್ತರ ಕನ್ನಡ: ಅನಾಮಧೇಯ ದಂಪತಿಯಿಂದ ಅಂಗಡಿಗೆ ವಾಮಾಚಾರ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ (Haliyala)ದಲ್ಲಿ ರಾತ್ರಿ ಸ್ಕೋಟರ್ನಲ್ಲಿ ಬಂದ ಅನಾಮಧೇಯ ದಂಪತಿ ಅಂಗಡಿಯೊಂದಕ್ಕೆ ವಾಮಾಚಾರ ಮಾಡಿದ ಘಟನೆ ನಡೆದಿದೆ. ಜೊತೆಗೆ ಮಳಿಗೆ ಮುಂದೆ ಮಂತ್ರಿಸಿದ ನಿಂಬೆಹಣ್ಣನ್ನು ಎಸೆದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಆಧರಿಸಿದ ಅಂಗಡಿ ಮಾಲೀಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಉತ್ತರ ಕನ್ನಡ, ಫೆ.01: ಅನಾಮಧೇಯ ದಂಪತಿಯಿಂದ ಅಂಗಡಿಗೆ ವಾಮಾಚಾರಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ (Haliyala)ದಲ್ಲಿ ನಡೆದಿದೆ. ಈ ಹಿನ್ನಲೆ ಅಂಗಡಿ ಮಾಲೀಕ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದಾರೆ. ಹಳಿಯಾಳ ನಗರದ ಕುಂಬಾಗಲ್ಲಿಯ ಬಸವರಾಜ್ ಎಂಬುವವರ ಅಂಗಡಿಗೆ ರಾತ್ರಿ ವೇಳೆ ಸ್ಕೂಟಿಯಲ್ಲಿ ಬಂದ ಅನಾಮದೇಯ ದಂಪತಿ, ನಿಂಬೆ ಹಣ್ಣಿಗೆ ಮೊಳೆ ಹೊಡೆದು ಕೆಂಪುದಾರ ಸುತ್ತಿ ಎಸೆದು ಹೋಗಿದ್ದಾರೆ. ಮಳಿಗೆ ಮುಂದೆ ಮಂತ್ರಿಸಿದ ನಿಂಬೆಹಣ್ಣನ್ನು ಎಸೆದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನ ಆಧರಸಿ ಅಂಗಡಿ ಮಾಲೀಕ ಹಳಿಯಾಳ ಠಾಣೆಗೆ ದೂರು ನೀಡಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಚೇಂಬರ್‌ನಲ್ಲಿ ವಾಮಾಚಾರ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಾಚೀನ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ರಮಾ ಗುಂಡೂರಾವ್ ಅವರು ರಜೆ ಮೇಲೆ ತೆರಳಿದ್ದರು. ಶುಕ್ರವಾರ ವಾಪಸ್ ಆಗಮಿಸಿದಾಗ ಚೇಂಬರ್‌ನ ಕೀಲಿ ತೆಗೆದಾಗ ವಾಮಾಚಾರ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕುಲಪತಿಗೆ ದೂರು ನೀಡಲಾಗಿತ್ತು. ಇದೀಗ ಹಳಿಯಾಳದಲ್ಲಿ ಇಂತಹ ಘಟನೆ ಬೆಳಕಿಗೆ ಬಂದಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ