‘ಪ್ಯಾನ್ ಇಂಡಿಯಾ ಅಂದ್ರೆ ಹೀರೋಗಳ ಶೋಕಿ; ದಾಡಿ, ಬಾಡಿ ಬೆಳೆಯತ್ತೆ ಅಷ್ಟೇ’: ಹಂಸಲೇಖ ಗರಂ
ಕನ್ನಡದ ಹಲವು ನಟರು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ‘ಸ್ಯಾಂಡಲ್ವುಡ್ ಜೊತೆ ಬೇರೆ ಯಾವುದನ್ನೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಒಂಟಿಯಾಗಿ ಗಂಧದ ಮರ ಬೆಳೆಯಲ್ಲ. ಬೇರೆ ಮರಗಳು ಸುತ್ತಲು ಇದ್ದಾಗ ಮಾತ್ರ ಬೆಳೆಯುತ್ತೆ. ಎಲ್ಲರನ್ನೂ ಒಳಗೊಂಡು ಬೆಳೆಯುವುದು ಸ್ಯಾಂಡಲ್ವುಡ್. ಅದಕ್ಕೆ ಒಂದು ಪರಂಪರೆ ಇದೆ’ ಎಂದು ಹಂಸಲೇಖ ಹೇಳಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಜೋರಾಗಿದೆ. ಈ ಟ್ರೆಂಡ್ನಲ್ಲಿ ಕನ್ನಡದ ಸ್ಟಾರ್ ಹೀರೋಗಳು ಕೂಡ ಸಿಲುಕಿದ್ದಾರೆ. ಈ ಬಗ್ಗೆ ಸಂಗೀತ ನಿರ್ದೇಶಕ ಹಂಸಲೇಖ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ಗೌರಿ’ ಸಿನಿಮಾದ ಇವೆಂಟ್ನಲ್ಲಿ ಭಾಗಿ ಆಗಿದ್ದ ಅವರು ಕೊಂಚ ಗರಂ ಆಗಿಯೇ ಮಾತನಾಡಿದ್ದಾರೆ. ‘ಪ್ಯಾನ್ ಇಂಡಿಯಾ ಎಂಬ ಹುಚ್ಚು ಬಂದು ಕನ್ನಡದ ಸೂಪರ್ ಸ್ಟಾರ್ಗಳಿಗೆ ಕನ್ನಡದ ಬೇರುಗಳು ಕಟ್ ಆಗಿವೆ. ಕನ್ನಡದ ಜೊತೆ ಇದ್ದ ಕನೆಕ್ಷನ್ ಕಟ್ ಆಗಿದೆ. ಇವರೆಲ್ಲ ಭಾರತದಾದ್ಯಂತ ಖ್ಯಾತ ನಾಯಕರಾಗುತ್ತಾರೆ ಎಂಬುದು ಒಂದು ಭ್ರಮೆ. ದಕ್ಷಿಣದ ಸುಂದರವಾದ ನಾಯಕಿಯರು ಉತ್ತರ ಭಾರತಕ್ಕೆ ಹೋಗಿ 20 ವರ್ಷ ಬದುಕಬಹುದು ಅಷ್ಟೇ. ರಜನಿಕಾಂತ್, ಕಮಲ್ ಹಾಸನ್, ಮಮ್ಮುಟಿ, ಮೋಹನ್ ಲಾಲ್ ಬಾಂಬೆಗೆ ಹೋದರೆ 2 ವರ್ಷ ಇರೋಕೆ ಆಗಲ್ಲ. ನಮ್ಮ ಹೀರೋಗಳಿಗೆ ಪ್ಯಾನ್ ಇಂಡಿಯಾ ಎಂಬುದು ಸದ್ಯದ ಶೋಕಿ. ಒಂದು ಹನಿಮೂನ್ ಥರ. ಎಲ್ಲಿ ಸುತ್ತಿದ್ದರು ಕನ್ನಡಕ್ಕೆ ವಾಪಸ್ ಬರಲೇಬೇಕು. ಪ್ಯಾನ್ ಇಂಡಿಯಾ ಅಂತ ಹೋದರೆ ಸ್ವಲ್ಪ ವ್ಯಾಪಾರ ಆಗಬಹುದು. ನಟರ ದಾಡಿ, ಬಾಡಿ ಬೆಳೆಯುತ್ತೆ ಅಷ್ಟೇ. ಬೇರೆ ಏನೂ ಬೆಳೆಯಲ್ಲ’ ಎಂದು ಹಂಸಲೇಖ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.