ಅನಂತ್ ಅಂಬಾನಿ ವಿವಾಹದಲ್ಲಿ ರಜನಿಕಾಂತ್ ಮಸ್ತ್ ಡ್ಯಾನ್ಸ್; ಯುವಕರೂ ನಾಚಬೇಕು
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರು ಇಂದು (ಜುಲೈ 12) ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಭಾರಿ ಅದ್ದೂರಿಯಾಗಿ ನಡೆಯುತ್ತಿರುವ ಈ ಮದುವೆಯಲ್ಲಿ ನಟ ರಜನಿಕಾಂತ್ ಅವರು ಸಖತ್ ಎಂಜಾಯ್ ಮಾಡಿದ್ದಾರೆ. ಬಾಲಿವುಡ್ ನಟರ ಜೊತೆ ಸೇರಿಕೊಂಡು ರಜನಿಕಾಂತ್ ಅವರು ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದು, ಆ ವಿಡಿಯೋ ವೈರಲ್ ಆಗಿದೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯನ್ನು ಇಡೀ ವಿಶ್ವವೇ ನೋಡುತ್ತಿದೆ. ಅದಕ್ಕೆ ಕಾರಣ ಆಗಿರುವುದು ಸ್ಟಾರ್ಗಳ ಹಾಜರಿ. ಹೌದು, ಜಗತ್ತಿನ ಅತಿ ಜನಪ್ರಿಯ ಸೆಲೆಬ್ರಿಟಿಗಳೆಲ್ಲ ಈ ವಿವಾಹ ಸಮಾರಂಭಕ್ಕೆ ಅತಿಥಿಗಳಾಗಿ ಬಂದಿದ್ದಾರೆ. ನಟ ರಜನಿಕಾಂತ್ ಅವರು ಕುಟುಂಬ ಸಮೇತರಾಗಿ ಅನಂತ್ ಅಂಬಾನಿಯ ವಿವಾಹದಲ್ಲಿ ಪಾಲ್ಗೊಂಡಿದ್ದಾರೆ. ಅಷ್ಟೇ ಅಲ್ಲದೇ, ಅವರು ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ರಜನಿಕಾಂತ್ ಅವರ ಡ್ಯಾನ್ಸ್ ಮತ್ತು ಉತ್ಸಾಹ ನೋಡಿ ಯುವಕರೂ ನಾಚುವಂತಿದೆ.
ಮುಕೇಶ್ ಅಂಬಾನಿ ಅವರು ಪುತ್ರನ ಮದುವೆಗೆ ಗಣ್ಯಾತಿಗಣ್ಯರನ್ನು ಆಹ್ವಾನಿಸಿದ್ದಾರೆ. ಮುಂಬೈನಲ್ಲಿ ಬಹಳ ಅದ್ದೂರಿಯಾಗಿ ಇಂದು (ಜುಲೈ 12) ಮದುವೆ ನಡೆಯುತ್ತಿದೆ. ಹಾಲಿವುಡ್ ಸೆಲೆಬ್ರಿಟಿಗಳು, ಬಾಲಿವುಡ್ ತಾರೆಯರು, ದಕ್ಷಿಣ ಭಾರತದ ಸಿನಿಮಾ ಮಂದಿ ಸೇರಿದಂತೆ ನೂರಾರು ಗಣ್ಯರು ಮದುವೆಗೆ ಸಾಕ್ಷಿ ಆಗಿದ್ದಾರೆ. ಬಂದಿರುವ ಅತಿಥಿಗಳ ಜೊತೆ ಅಂಬಾನಿ ಕುಟುಂಬದವರು ಖುಷಿಯಿಂದ ಬೆರೆತಿದ್ದಾರೆ.
ಇದನ್ನೂ ಓದಿ: ಅನಂತ್ ಅಂಬಾನಿ ಮದುವೆಗೆ ಕುಟುಂಬ ಸಮೇತ ಬಂದ ರಜನಿಕಾಂತ್; ಸಿಕ್ಕಾಪಟ್ಟೆ ಜೋಶ್
ರಜನಿಕಾಂತ್ ಅವರಿಗೆ ಈಗ 73 ವರ್ಷ ವಯಸ್ಸು! ಈ ಪ್ರಾಯದಲ್ಲೂ ಅವರ ಎನರ್ಜಿ ಕಡಿಮೆ ಆಗಿಲ್ಲ. ಭಾರಿ ಉತ್ಸಾಹದಲ್ಲಿ ಅವರು ಮದುವೆಗೆ ಬಂದಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳಾದ ರಣವೀರ್ ಸಿಂಗ್, ಅನಿಲ್ ಕಪೂರ್ ಮುಂತಾದವರ ಜೊತೆ ರಜನಿಕಾಂತ್ ಅವರು ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಈ ಸೂಪರ್ ಸ್ಟಾರ್ಗಳ ಜೊತೆ ಅನಂತ್ ಅಂಬಾನಿ ಕೂಡ ಹೆಜ್ಜೆ ಹಾಕಿದ್ದಾರೆ. ಅವರ ಮದುವೆಯಲ್ಲಿ ತಾರಾ ಮೆರುಗು ತುಂಬಿದೆ.
View this post on Instagram
‘ತಲೈವಾ’ ರಜನಿಕಾಂತ್ ಜೊತೆ ಅವರ ಪತ್ನಿ ಲತಾ, ಮಗಳು ಸೌಂದರ್ಯಾ ಕೂಡ ಅನಂತ್ ಅಂಬಾನಿಯ ಮದುವೆಗೆ ಬಂದಿದ್ದಾರೆ. ಇನ್ನು, ಬಾಲಿವುಡ್ ಸೆಲೆಬ್ರಿಟಿಗಳಾದ ಸಲ್ಮಾನ್ ಖಾನ್, ಶಾರುಖ್ ಖಾನ್, ಗೌರಿ ಖಾನ್, ಆರ್ಯನ್ ಖಾನ್, ಸುಹಾನಾ ಖಾನ್, ವಿಕ್ಕಿ ಕೌಶಲ್, ಕತ್ರಿನಾ ಕೈಫ್, ಸಂಜಯ್ ದತ್, ಜೆನಿಲಿಯಾ ದೇಶಮುಖ್, ರಿತೇಶ್ ದೇಶಮುಖ್, ಸಿದ್ದಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ, ಆಲಿಯಾ ಭಟ್, ರಣಬೀರ್ ಕಪೂರ್ ಸೇರಿದಂತೆ ಅನೇಕರು ಬಂದು ಅಂಬಾನಿ ಫ್ಯಾಮಿಲಿಯ ಖುಷಿಯಲ್ಲಿ ಭಾಗಿಯಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.