ಅನಂತ್​ ಅಂಬಾನಿ ಮದುವೆಗೆ ಕುಟುಂಬ ಸಮೇತ ಬಂದ ರಜನಿಕಾಂತ್​; ಸಿಕ್ಕಾಪಟ್ಟೆ ಜೋಶ್​

ಅನಂತ್​ ಅಂಬಾನಿ ಮದುವೆಗೆ ಕುಟುಂಬ ಸಮೇತ ಬಂದ ರಜನಿಕಾಂತ್​; ಸಿಕ್ಕಾಪಟ್ಟೆ ಜೋಶ್​

ಮದನ್​ ಕುಮಾರ್​
|

Updated on: Jul 12, 2024 | 8:34 PM

ಮುಂಬೈನಲ್ಲಿ ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಅವರು ಮದುವೆ ಆಗುತ್ತಿದ್ದಾರೆ. ಮುಕೇಶ್​ ಅಂಬಾನಿ ಕುಟುಂಬದ ಈ ಅದ್ದೂರಿ ಸಮಾರಂಭಕ್ಕೆ ಗಣ್ಯಾತಿಗಣ್ಯರು ಹಾಜರಿ ಹಾಕಿದ್ದಾರೆ. ‘ಸೂಪರ್​ ಸ್ಟಾರ್​’ ರಜನಿಕಾಂತ್​ ಅವರು ಕೂಡ ಪತ್ನಿ ಲತಾ, ಮಗಳು ಸೌಂದರ್ಯಾ ಜೊತೆ ಬಂದು ಈ ಮದುವೆಯಲ್ಲಿ ಭಾಗಿಯಾಗಿದ್ದಾರೆ. ರಜನಿಕಾಂತ್​ ಎಂಟ್ರಿ ನೀಡಿದ ವಿಡಿಯೋ ಇಲ್ಲಿದೆ..

ಉದ್ಯಮಿ ಮುಕೇಶ್​ ಅಂಬಾನಿ ಪುತ್ರ ಅನಂತ್​ ಅಂಬಾನಿ ಮದುವೆ ಸಮಾರಂಭ ಅದ್ದೂರಿಯಾಗಿ ನಡೆಯುತ್ತಿದೆ. ಮುಂಬೈನಲ್ಲಿ ನಡೆಯುತ್ತಿರುವ ಈ ವಿವಾಹಕ್ಕೆ ದೇಶ-ವಿದೇಶದ ಅನೇಕ ಸೆಲೆಬ್ರಿಟಿಗಳು ಸಾಕ್ಷಿ ಆಗುತ್ತಿದ್ದಾರೆ. ಸಿನಿಮಾ ರಂಗದ ಅನೇಕ ಗಣ್ಯರನ್ನು ಆಹ್ವಾನಿಸಲಾಗಿದೆ. ನಟ ರಜನಿಕಾಂತ್​ ಅವರು ಕುಟುಂಬ ಸಮೇತರಾಗಿ ಈ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ. ರಜನಿಕಾಂತ್ ಇದ್ದಲ್ಲಿ ಒಂದು ಜೋಶ್​ ಇದ್ದೇ ಇರುತ್ತದೆ. ಮದುವೆಗೆ ಬಂದ ಅವರು ಪಾಪರಾಜಿಗಳ ಕ್ಯಾಮೆರಾಗೆ ಪೋಸ್​ ನೀಡಿದರು. ರಜನಿಕಾಂತ್ ಎಂಟ್ರಿ ನೀಡುತ್ತಿದ್ದಂತೆಯೇ ಎಲ್ಲರಲ್ಲೂ ಉತ್ಸಾಹ ಹೆಚ್ಚಿತು. ಮೊದಲು ಕುಟುಂಬದವರ ಜೊತೆ ಪೋಸ್​ ನೀಡಿದ ರಜನಿಕಾಂತ್​ ಅವರು ನಂತರ ಸಿಂಗಲ್ ಆಗಿ ಪೋಸ್​ ಕೊಟ್ಟು ಪಾಪರಾಜಿಗಳ ಇಷ್ಟದಂತೆ ನಡೆದುಕೊಂಡರು. ಈ ಮದುವೆಗೆ ವಿಶ್ವ ಪ್ರಸಿದ್ಧ ಸೆಲೆಬ್ರಿಟಿಗಳೆಲ್ಲ ಆಗಮಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.