ಅಂಬಾನಿ ಪುತ್ರನ ಮದುವೆಗೆ ಎಷ್ಟು ಚಂದ ರೆಡಿಯಾಗಿ ಬಂದ್ರು ನೋಡಿ ಜೆನಿಲಿಯಾ; ಸಾಥ್ ನೀಡಿದ ರಿತೇಶ್​

ಅಂಬಾನಿ ಪುತ್ರನ ಮದುವೆಗೆ ಎಷ್ಟು ಚಂದ ರೆಡಿಯಾಗಿ ಬಂದ್ರು ನೋಡಿ ಜೆನಿಲಿಯಾ; ಸಾಥ್ ನೀಡಿದ ರಿತೇಶ್​

ಮದನ್​ ಕುಮಾರ್​
|

Updated on: Jul 12, 2024 | 9:04 PM

ಅಂಬಾನಿ ಕುಟುಂಬದ ಮಹತ್ವದ ದಿನ ಇದು. ಮುಕೇಶ್​ ಅಂಬಾನಿ ಪುತ್ರ ಅನಂತ್​ ಅಂಬಾನಿ ಅವರು ಇಂದು (ಜು.12) ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಜೆನಿಲಿಯಾ ದೇಶಮುಖ್​ ಅವರು ಪತಿ ರಿತೇಶ್​ ದೇಶಮುಖ್​ ಜೊತೆ ಈ ಸಮಾರಂಭಕ್ಕೆ ಬಂದಿದ್ದಾರೆ. ಜೆನಿಲಿಯಾ ಅವರು ಸಿಂಗಾರ ಮಾಡಿಕೊಂಡ ಪರಿ ಕಂಡು ಅಭಿಮಾನಿಗಳು ವಾವ್​ ಎನ್ನುತ್ತಿದ್ದಾರೆ. ದಂಪತಿಯ ಈ ವಿಡಿಯೋ ವೈರಲ್​ ಆಗಿದೆ.

ದೇಶ-ವಿದೇಶದ ಹಲವಾರು ಸೆಲೆಬ್ರಿಟಿಗಳು ಇಂದು (ಜುಲೈ 12) ಮುಂಬೈನಲ್ಲಿ ಒಂದೆಡೆ ಸೇರಿದ್ದಾರೆ. ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ಅವರ ಮದುವೆಯನ್ನು ಕಣ್ತುಂಬಿಕೊಳ್ಳಲು ಇವರೆಲ್ಲ ಆಗಮಿಸಿದ್ದಾರೆ. ಸಿನಿಮಾ, ರಾಜಕೀಯ, ಕ್ರೀಡೆ, ಉದ್ಯಮ ಸೇರಿದಂತೆ ಹಲವಾರು ಕ್ಷೇತ್ರದ ಗಣ್ಯರನ್ನು ಈ ಮದುವೆಗೆ ಆಹ್ವಾನಿಸಲಾಗಿದೆ. ಬಾಲಿವುಡ್​ನ ಸ್ಟಾರ್​ ಕಪಲ್​ ಆದಂತಹ ಜೆನಿಲಿಯಾ ದೇಶಮುಖ್​ ಮತ್ತು ರಿತೇಶ್​ ದೇಶಮುಖ್​ ಅವರು ಮುಕೇಶ್​ ಅಂಬಾನಿ ಪುತ್ರನ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಜೆನಿಲಿಯಾ ಅವರು ಸೂಪರ್​ ಆಗಿ ಸಿಂಗಾರ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ರಿತೇಶ್​ ದೇಶಮುಖ್​ ಸಾಥ್​ ನೀಡಿದ್ದಾರೆ. ಈ ಸಮಾರಂಭಕ್ಕೆ ವರುಣ್​ ಧವನ್​, ಸಂಜಯ್​ ದತ್​ ಸೇರಿದಂತೆ ನೂರಾರು ಸೆಲೆಬ್ರಿಟಿಗಳು ಸಾಕ್ಷಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.