Nita Ambani Dance: ಮದುವೆ ದಿಬ್ಬಣದ ವೇಳೆ ಡೋಲು ವಾದ್ಯದ ಶಬ್ದಕ್ಕೆ ಡ್ಯಾನ್ಸ್ ಮಾಡಿದ ನೀತಾ ಅಂಬಾನಿ
Anant Ambani- Radhika Merchant Wedding: ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ವಿವಾಹ ಇಂದಿನಿಂದ 3 ದಿನಗಳವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮುಂಬೈನ ಆಂಟಿಲಿಯಾದಿಂದ ಮದುವೆ ದಿಬ್ಬಣ ಹೊರಡುವ ಮುನ್ನ ಡೋಲು ವಾದ್ಯದವರ ನಾದಕ್ಕೆ ನೀತಾ ಅಂಬಾನಿ ಹೆಜ್ಜೆ ಹಾಕಿರುವ ವಿಡಿಯೋ ವೈರಲ್ ಆಗಿದೆ.
ತಮ್ಮ ಕಿರಿಯ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ಮದುವೆ ಸಮಾರಂಭಕ್ಕೆ ತೆರಳಲು ಮುಂಬೈನ ಆಂಟಿಲಿಯಾದಿಂದ ಹೊರಟ ನೀತಾ ಅಂಬಾನಿ ತಮ್ಮ ಬಂಗಲೆಯೆದುರು ಡೋಲು ವಾದ್ಯದ ಶಬ್ದಕ್ಕೆ ಹೆಜ್ಜೆ ಹಾಕಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಮಹೋತ್ಸವವು ಅದ್ದೂರಿ ಬಾರಾತ್ ಮೆರವಣಿಗೆಯೊಂದಿಗೆ ಪ್ರಾರಂಭವಾಯಿತು. ತಮ್ಮ ವೈಭವಕ್ಕೆ ಹೆಸರುವಾಸಿಯಾದ ಅಂಬಾನಿ ಕುಟುಂಬವು ತಮ್ಮ ಐಕಾನಿಕ್ ಮುಂಬೈ ನಿವಾಸವಾದ ಆಂಟಿಲಿಯಾದಿಂದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ (BKC) ಜಿಯೋ ವರ್ಲ್ಡ್ ಸೆಂಟರ್‌ಗೆ ಮದುವೆಯ ಪ್ರಯಾಣವನ್ನು ಪ್ರಾರಂಭಿಸಿದರು.
ಈ ವೇಳೆ ರಿಲಯನ್ಸ್ ಫೌಂಡೇಶನ್‌ನ ಅಧ್ಯಕ್ಷೆ ನೀತಾ ಅಂಬಾನಿ ಡೋಲು ವಾದಕರೊಂದಿಗೆ ಪೂರ್ವಸಿದ್ಧತೆಯಿಲ್ಲದ ನೃತ್ಯ ಮಾಡುವ ಮೂಲಕ ಮದುವೆಯ ಉತ್ಸಾಹ ಮತ್ತು ಸಂಭ್ರಮವನ್ನು ಹೆಚ್ಚಿಸಿದ್ದಾರೆ. ಅಬು ಜಾನಿ ಸಂದೀಪ್ ಖೋಸ್ಲಾ ಅವರ ‘ರಂಗಾತ್’ ಘಾಗ್ರಾವನ್ನು ಧರಿಸಿರುವ ನೀತಾ ಅಂಬಾನಿ ತನ್ನ ಸೊಗಸಾದ ಉಡುಗೆಯಿಂದ ಎಲ್ಲರನ್ನೂ ಆಕರ್ಷಿಸಿದರು.
ಇನ್ನಷ್ಟು ವಿಡಿಯೋ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ