‘ಕಮಲ್ ಹಾಸನ್ ಸಿನಿಮಾ ಮುಳುಗಿದ ಹಡಗು’; ಮೊದಲ ದಿನವೇ ನೆಲಕಚ್ಚಿದ ‘ಇಂಡಿಯನ್ 2’ ಚಿತ್ರ

Indian 2 Twitter review: ಕಮಲ್ ಹಾಸನ್ ಅವರು ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಮಾಡಿದ ಪಾತ್ರ ಗಮನ ಸೆಳೆದಿತ್ತು. ಈ ಬೆನ್ನಲ್ಲೇ ಅವರ ನಟನೆಯ ‘ಇಂಡಿಯನ್ 2’ ಸಿನಿಮಾ ರಿಲೀಸ್ ಆಗಿದೆ. ಆದರೆ, ಈ ಚಿತ್ರ ಹೀನಾಯ ಸೋಲು ಕಾಣುವ ಸೂಚನೆ ಸಿಕ್ಕಿದೆ.

‘ಕಮಲ್ ಹಾಸನ್ ಸಿನಿಮಾ ಮುಳುಗಿದ ಹಡಗು’; ಮೊದಲ ದಿನವೇ ನೆಲಕಚ್ಚಿದ ‘ಇಂಡಿಯನ್ 2’ ಚಿತ್ರ
ಕಮಲ್ ಹಾಸನ್
Follow us
ರಾಜೇಶ್ ದುಗ್ಗುಮನೆ
|

Updated on: Jul 13, 2024 | 6:55 AM

1996ರಲ್ಲಿ ರಿಲೀಸ್ ಆದ ‘ಇಂಡಿಯನ್’ ಸಿನಿಮಾ ಭರ್ಜರಿ ಮೆಚ್ಚುಗೆ ಪಡೆದಿತ್ತು. ಈ ಚಿತ್ರಕ್ಕೆ 28 ವರ್ಷಗಳ ಬಳಿಕ ಸೀಕ್ವೆಲ್ ರಿಲೀಸ್ ಆಗಿದೆ. ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್ ಎಂದಾಗ ಸಹಜವಾಗಿಯೇ ನಿರೀಕ್ಷೆ ಹೆಚ್ಚಿರುತ್ತದೆ. ‘ಇಂಡಿಯನ್ 2’ ಸಿನಿಮಾ ಮೇಲೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಈ ನಿರೀಕ್ಷೆಗಳನ್ನು ಸಿನಿಮಾ ಹುಸಿ ಮಾಡಿದೆ. ಈ ಚಿತ್ರವನ್ನು ನೋಡಲು ಹೋದ ಫ್ಯಾನ್ಸ್​ಗೆ ಸಿಕ್ಕಿದ್ದು ಕೇವಲ ನಿರಾಸೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಶಂಕರ್ ಅವರು ಒಂದೊಳ್ಳೆಯ ಅವಕಾಶವನ್ನು ತಪ್ಪಿಸಿಕೊಂಡರು ಎಂದು ಅನೇಕರು ಮಾತನಾಡಿಕೊಂಡಿದ್ದಾರೆ.

ನಿರ್ದೇಶಕ ಎಸ್​. ಶಂಕರ್ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅದೇ ರೀತಿ ಕಮಲ್ ಹಾಸನ್​ಗೆ ಇರುವ ಬೇಡಿಕೆ ದೊಡ್ಡದು. ಇಬ್ಬರೂ ಒಂದಾಗುತ್ತಿದ್ದಾರೆ ಎಂದಾಗ ಸಹಜವಾಗಿಯೇ ನಿರೀಕ್ಷೆ ಹೆಚ್ಚಿರುತ್ತದೆ. ಆದರೆ, ಜನರ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೂಡಿ ಬಂದಿಲ್ಲ. ಈ ಬಗ್ಗೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಕೆಲವೊಮ್ಮೆ ಸಿನಿಮಾ ಉತ್ತಮವಾಗಿ ಇರದೇ ಇದ್ದರೂ ಹೀರೋಗಳ ಪಾತ್ರದಿಂದ ಸಿನಿಮಾ ಇಷ್ಟ ಆಗುತ್ತದೆ. ಆದರೆ, ‘ಇಂಡಿಯನ್ 2’ ಚಿತ್ರದಲ್ಲಿ ಕಮಲ್ ಹಾಸನ್ ವಿವಿಧ ಗೆಟಪ್​ನಲ್ಲಿ ಬರೋದಷ್ಟೇ ಹೊರತು ಮತ್ತಿನ್ನೇನೂ ಇಲ್ಲ ಎಂದು ಫ್ಯಾನ್ಸ್ ಮಾತನಾಡಿಕೊಂಡಿದ್ದಾರೆ. ಹೀಗಾಗಿ, ಅವರು ಕೂಡ ಸಿನಿಮಾನ ಉಳಿಸೋಕೆ ಸಾಧ್ಯವಿಲ್ಲ ಎಂಬುದು ಸಿನಿಪ್ರಿಯರ ಅಭಿಪ್ರಾಯ. ಅವರ ಸಿನಿಮಾಗೆ ಗಟ್ಟಿತನ ಇಲ್ಲ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.

ಇದನ್ನೂ ಓದಿ: ‘ಕಲ್ಕಿ’ ಬಳಿಕ ‘ಇಂಡಿಯನ್ 2’ ಸಿನಿಮಾಗೂ ಹೆಚ್ಚಿತು ಟಿಕೆಟ್ ಬೆಲೆ; ಬಿಗ್ ಬಜೆಟ್ ಚಿತ್ರಗಳಿಂದ ಪ್ರೇಕ್ಷಕನ ಜೇಬಿಗೆ ಕತ್ತರಿ

ಸಿನಿಮಾದ ಅವಧಿ 3 ಗಂಟೆ ಇದೆ. ಇದು ಕೂಡ ಪ್ರೇಕ್ಷಕನ ತಾಳ್ಮೆ ಪರೀಕ್ಷೆ ಮಾಡುತ್ತದೆ. ಏನಾದರೂ ವಿಚಾರ ಇಟ್ಟುಕೊಂಡು 3 ಗಂಟೆ ಸಿನಿಮಾ ತೋರಿಸಿದರೆ ಅದನ್ನು ವೀಕ್ಷಿಸಬಹುದು. ಆದರೆ, ಏನೂ ಇಲ್ಲದೆ ಸುಖಾ ಸುಮ್ಮನೆ ಎಳೆದಾಟ ಮಾಡಿದರೆ ಯಾರೂ ಕೂಡ ಸಿನಿಮಾನ ವೀಕ್ಷಿಸುವುದಿಲ್ಲ.

‘ಇಂಡಿಯನ್ 2’ ಸಿನಿಮಾಗೆ ಮೊದಲ ದಿನ ಕೇವಲ 26 ಕೋಟಿ ರೂಪಾಯಿ ಗಳಿಕೆ ಆಗಿದೆ. ಕಮಲ್ ಹಾಸನ್ ಅವರಂಥ ಸಿನಿಮಾಗೆ ಇದು ತುಂಬಾನೇ ಸಣ್ಣ ಮೊತ್ತ. ಹೀಗೆ ಮುಂದುವರಿದರೆ ಸಿನಿಮಾದ ನಿರ್ಮಾಪಕರು ನಷ್ಟ ಅನುಭವಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್