AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಲ್ಕಿ’ ಬಳಿಕ ‘ಇಂಡಿಯನ್ 2’ ಸಿನಿಮಾಗೂ ಹೆಚ್ಚಿತು ಟಿಕೆಟ್ ಬೆಲೆ; ಬಿಗ್ ಬಜೆಟ್ ಚಿತ್ರಗಳಿಂದ ಪ್ರೇಕ್ಷಕನ ಜೇಬಿಗೆ ಕತ್ತರಿ

‘ಇಂಡಿಯನ್ 2’ ಚಿತ್ರದಲ್ಲಿ ಕಮಲ್ ಹಾಸನ್, ಸಿದ್ದಾರ್ಥ್​, ಕಾಜಲ್ ಅಗರ್​ವಾಲ್ ನಟಿಸಿದ್ದಾರೆ. ಎಸ್​. ಶಂಕರ್ ಅವರು ಸಿನಿಮಾ ನಿರ್ದೇಶನ ಮಾಡಿದ್ದು, ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಈ ಚಿತ್ರದ ಬಜೆಟ್ ದೊಡ್ಡದಿದೆ. ಹೀಗಾಗಿ, ಸಿನಿಮಾದ ಟಿಕೆಟ್ ಬೆಲೆಯನ್ನು ನಿರ್ಮಾಪಕರು ಹೆಚ್ಚಿಸಿದ್ದಾರೆ.

‘ಕಲ್ಕಿ’ ಬಳಿಕ ‘ಇಂಡಿಯನ್ 2’ ಸಿನಿಮಾಗೂ ಹೆಚ್ಚಿತು ಟಿಕೆಟ್ ಬೆಲೆ; ಬಿಗ್ ಬಜೆಟ್ ಚಿತ್ರಗಳಿಂದ ಪ್ರೇಕ್ಷಕನ ಜೇಬಿಗೆ ಕತ್ತರಿ
ಕಮಲ್ ಹಾಸನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jul 11, 2024 | 8:05 AM

Share

‘ಇಂಡಿಯನ್ 2’ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಇದೆ. 1996ರಲ್ಲಿ ರಿಲೀಸ್ ಆದ ‘ಇಂಡಿಯನ್’ ಸಿನಿಮಾದ ಸೀಕ್ವೆಲ್ ಇದು. ಸುಮಾರು 28 ವರ್ಷಗಳ ಬಳಿಕ ಚಿತ್ರಕ್ಕೆ ಸೀಕ್ವೆಲ್ ಬಂದಿದೆ ಅನ್ನೋದು ವಿಶೇಷ. ಕಮಲ್ ಹಾಸನ್ ಅವರು ‘ಇಂಡಿಯನ್ 2’ ಚಿತ್ರದಲ್ಲಿ ಭಿನ್ನ ಗೆಟಪ್​ಗಳನ್ನು ತಾಳಿದ್ದಾರೆ. ಈಗ ಈ ಚಿತ್ರಕ್ಕೆ ಟಿಕೆಟ್ ಬೆಲೆ ಹೆಚ್ಚಿಸಲು ನಿರ್ಮಾಪಕರು ಆಲೋಚಿಸಿದ್ದಾರೆ. ಕರ್ನಾಟಕ, ತೆಲಂಗಾಣ, ತಮಿಳು ನಾಡಿನಲ್ಲಿ ಸಿನಿಮಾದ ಟಿಕೆಟ್ ಬೆಲೆ ಹೆಚ್ಚಿಸಲಾಗಿದೆ.

ಈ ಮೊದಲು ‘ಕಲ್ಕಿ 2898 ಎಡಿ’ ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾದ ಬಜೆಟ್ 600 ಕೋಟಿ ರೂಪಾಯಿ. ಈ ಕಾರಣದಿಂದಲೇ ಹೆಚ್ಚಿನ ಗಳಿಕೆಯ ಅವಶ್ಯಕತೆ ಇರುವುದರಿಂದ ನಿರ್ಮಾಪಕರು ಟಿಕೆಟ್​ ರೇಟ್​ನ ಬಹುವಾಗಿ ಹೆಚ್ಚಿಸಿದ್ದರು. ಈ ಚಿತ್ರದ 3ಡಿ ಅವತರಣಿಕೆಗೆ ಬೆಂಗಳೂರಿನಲ್ಲಿ ಕನಿಷ್ಠ 500 ರೂಪಾಯಿ ನೀಡಬೇಕಿತ್ತು. ಈ ಕಾರಣದಿಂದಲೇ ಸಿನಿಮಾ 900 ಕೋಟಿ ರೂಪಾಯಿ ಲಾಭ ಮಾಡಿದೆ. ಈಗ ‘ಇಂಡಿಯನ್ 2’ ಕೂಡ ಇಷ್ಟೇ ದೊಡ್ಡ ಮೊತ್ತದ ಗಳಿಕೆ ಮಾಡಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

‘ಇಂಡಿಯನ್ 2’ ಸಿನಿಮಾದ ಟ್ರೇಲರ್ ನೋಡಿದ ಅನೇಕರಿಗೆ ಕಥೆಯಲ್ಲಿ ಹೊಸತನ ಕಂಡಿಲ್ಲ. ಸಮಾಜದ ಸಿಸ್ಟಮ್​ನ ಸರಿ ಮಾಡುವ ವ್ಯಕ್ತಿಯ ಕಥೆ ಅನ್ನೋದು ಗೊತ್ತಾಗಿದೆ. ಈ ರೀತಿಯ ಹಲವು ಸಿನಿಮಾಗಳು ಈಗಾಗಲೇ ರಿಲೀಸ್ ಆಗಿವೆ. ಕಮಲ್ ಹಾಸನ್ ಅವರು ವಿವಿಧ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಸಿನಿಮಾದಲ್ಲಿ ಕಮಲ್ ಹಾಸನ್ ಅವರ ಪಾತ್ರವೇ ಹೈಲೈಟ್ ಎನ್ನಲಾಗುತ್ತಿದೆ. ಈಗ ಸಿನಿಮಾಗೆ ಹೆಚ್ಚಿನ ಟಿಕೆಟ್ ಬೆಲೆ ಇಟ್ಟಿರುವುದರಿಂದ ಜನರು ಯಾವ ರೀತಿಯಲ್ಲಿ ಇದನ್ನು ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ತೆಲಂಗಾಣದಲ್ಲಿ ‘ಇಂಡಿಯನ್ 2’ ಚಿತ್ರಕ್ಕೆ ಮಲ್ಟಿಪ್ಲೆಕ್ಸ್​ನಲ್ಲಿ 75 ರೂಪಾಯಿ ಹಾಗೂ ಏಕ ಪರದೆ ಥಿಯೇಟರ್​ನಲ್ಲೊ 50 ರೂಪಾಯಿ ಹೆಚ್ಚಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಬೆಂಗಳೂರಿನಲ್ಲಂತೂ ಹೇಳುವವರಿಲ್ಲ, ಕೇಳುವವರೂ ಇಲ್ಲ ಎನ್ನಲಾಗುತ್ತಿದೆ. ಪಿವಿಆರ್​ಗಳಲ್ಲಿ 250-700 ರೂಪಾಯಿವರೆಗೂ ಟಿಕೆಟ್ ದರ ನಿಗದಿ ಮಾಡಲಾಗಿದೆ.

ಬಿಗ್ ಬಜೆಟ್ ಸಿನಿಮಾಗಳನ್ನು ಮಾಡಿಕೊಂಡು ಪ್ರತಿಬಾರಿ ಆ ಹೊರೆಯನ್ನು ಪ್ರೇಕ್ಷಕರೆ ಮೇಲೆ ಹಾಕೋದು ಎಷ್ಟು ಸರಿ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳಿದ್ದಾರೆ. ಈಗಾಗಲೇ ‘ಕಲ್ಕಿ 2898 ಎಡಿ’ ಸಿನಿಮಾ ನೋಡಿ ಪ್ರೇಕ್ಷಕರು ಹಣ ಖರ್ಚು ಮಾಡಿದ್ದಾರೆ. ಈಗ ಮತ್ತೆ ‘ಇಂಡಿಯನ್ 2’ಗೆ ಹಣ ಖರ್ಚು ಮಾಡಬೇಕು ಎಂದರೆ ಎಲ್ಲರೂ ರೆಡಿ ಇರುವುದಿಲ್ಲ. ಇದು ಸೀಕ್ವೆಲ್ ಎನ್ನುವ ಕಾರಣಕ್ಕೆ ಅನೇಕರಿಗೆ ಈ ಸಿನಿಮಾ ಬಗ್ಗೆ ಅಷ್ಟಾಗಿ ಆಸಕ್ತಿ ಇಲ್ಲ. ಈ ಚಿತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ಇಂಡಿಯನ್ 2’ ಬಜೆಟ್​ ಮಿತಿಮೀರಲು ಕಾರಣವೇನು? ಕಮಲ್ ಹಾಸನ್ ಕೊಟ್ಟರು ಉತ್ತರ

‘ಇಂಡಿಯನ್ 2’ ಚಿತ್ರದಲ್ಲಿ ಕಮಲ್ ಹಾಸನ್, ಸಿದ್ದಾರ್ಥ್​, ಕಾಜಲ್ ಅಗರ್​ವಾಲ್ ನಟಿಸಿದ್ದಾರೆ. ಎಸ್​. ಶಂಕರ್ ಅವರು ಸಿನಿಮಾ ನಿರ್ದೇಶನ ಮಾಡಿದ್ದು, ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.