ಜಪಾನ್ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿದ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ

ಭಾರತದ ಸಿನಿಮಾಗಳಿಗೆ ಜಪಾನ್​ನಲ್ಲಿ ಭರ್ಜರಿಗೆ ಬೇಡಿಕೆ ಇದೆ. ಭಾರತದ ಯಾವುದೇ ಸಿನಿಮಾ ರಿಲೀಸ್ ಆದರೂ ಜನರು ಮುಗಿಬಿದ್ದು ವೀಕ್ಷಿಸುತ್ತಾರೆ. ಮೊದಲ ವೀಕೆಂಡ್​ನಲ್ಲಿ ಈ ಚಿತ್ರ 95 ಲಕ್ಷ ರೂಪಾಯಿ ಗಳಿಕೆ ಮಾಡಿದೆ. ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರದ ಓಪನಿಂಗ್ ಕಲೆಕ್ಷನ್​ನ ಈ ಸಿನಿಮಾ ಹಿಂದಿಕ್ಕಿದೆ.

ಜಪಾನ್ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿದ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ
ಸಲಾರ್ ಪೋಸ್ಟರ್
Follow us
| Updated By: ರಾಜೇಶ್ ದುಗ್ಗುಮನೆ

Updated on: Jul 11, 2024 | 8:56 AM

ಪ್ರಶಾಂತ್ ನೀಲ್ ಅವರು ಸಿನಿಮಾನ ಅಚ್ಚುಕಟ್ಟಾಗಿ ತೆರೆಮೇಲೆ ತರಲು ಪ್ರಯತ್ನಿಸುತ್ತಾರೆ. ಕನ್ನಡದಲ್ಲಿ ರಿಲೀಸ್ ಆದ ‘ಉಗ್ರಂ’ ಚಿತ್ರವನ್ನು ತೆಲುಗಿಗೆ ‘ಸಲಾರ್’ ಹೆಸರಲ್ಲಿ ರಿಮೇಕ್ ಮಾಡಿದ್ದಾರೆ. ಸ್ವಲ್ಪ ಬೇರೆ ಫ್ಲೇವರ್ ಸೇರಿಸಿ ಅವರು ಕಥೆಯನ್ನು ಬದಲಿಸಿದ್ದಾರೆ. ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಸರಿ ಸುಮಾರು 600 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈಗ ಸಿನಿಮಾ ಜಪಾನ್​ನಲ್ಲಿ ರಿಲೀಸ್ ಆಗಿದೆ. ಈ ಚಿತ್ರವು ಮೊದಲ ವಾರ ಉತ್ತಮ ಕಲೆಕ್ಷನ್ ಮಾಡಿದೆ.

‘ಸಲಾರ್’ ಸಿನಿಮಾ ಭಾರತದಲ್ಲಿ ಕಳೆದ ವರ್ಷ ಡಿಸೆಂಬರ್ 22ರಂದು ಬಿಡುಗಡೆ ಆಯಿತು. ಈ ಚಿತ್ರವನ್ನು ಜನರು ಮೆಚ್ಚಿಕೊಂಡರು. ಕೆಲವರು ಸಿನಿಮಾದ ಬಗ್ಗೆ ಅಪಸ್ವರ ತೆಗೆದರು. ‘ಇದು ಉಗ್ರಂ ಚಿತ್ರದ ರಿಮೇಕ್’ ಎಂದು ಹೇಳಿದರು. ಇದು ಚಿತ್ರಕ್ಕೆ ಹಿನ್ನಡೆ ಆಯಿತು. ಜುಲೈ 5ರಂದು ಸಿನಿಮಾ ಜಪಾನ್​ನಲ್ಲಿ ಬಿಡುಗಡೆ ಆಗಿದೆ. ಅಲ್ಲಿನ ಜನರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

ಜಪಾನ್​ನಲ್ಲಿ ಭಾರತದ ಸಿನಿಮಾಗಳಿಗೆ ಭರ್ಜರಿಗೆ ಬೇಡಿಕೆ ಇದೆ. ಯಾವುದೇ ಭಾರತದ ಸಿನಿಮಾ ರಿಲೀಸ್ ಆದರೂ ಜನರು ಮುಗಿಬಿದ್ದು ವೀಕ್ಷಿಸುತ್ತಾರೆ. ಮೊದಲ ವೀಕೆಂಡ್​ನಲ್ಲಿ ಈ ಚಿತ್ರ 95 ಲಕ್ಷ ರೂಪಾಯಿ ಗಳಿಕೆ ಮಾಡಿದೆ. ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರದ ಓಪನಿಂಗ್ ಕಲೆಕ್ಷನ್​ನ ಈ ಸಿನಿಮಾ ಹಿಂದಿಕ್ಕಿದೆ. ಮೊದಲ ವಾರದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮೂರನೇ ಭಾರತೀಯ ಸಿನಿಮಾ ಇದಾಗಿದೆ.

ಜಪಾನ್​ನಲ್ಲಿ ಮೊದಲ ವಾರ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾ ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’ ಸಿನಿಮಾ (2.2 ಕೋಟಿ ರೂಪಾಯಿ) ಮೊದಲಿದೆ. ಆ ಬಳಿಕ ‘ಸಾಹೋ’ ಸಿನಿಮಾ (1.18 ಕೋಟಿ ರೂಪಾಯಿ) ಇದೆ.  ಈಗ ಮೂರನೇ ಸ್ಥಾನಕ್ಕೆ ‘ಸಲಾರ್’ ಸಿನಿಮಾ ಬಂದಿದೆ.

ಇದನ್ನೂ ಓದಿ: ಊಹಾಪೋಹಗಳಿಗೆ ತೆರೆ ‘ಸಲಾರ್ 2’ ಶೀಘ್ರ ಪ್ರಾರಂಭ, ಹಾಗಿದ್ದರೆ ಜೂ ಎನ್​ಟಿಆರ್ ಕತೆ?

‘ಸಲಾರ್’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಅಂದುಕೊಂಡ ಮಟ್ಟದ ಗಳಿಕೆ ಮಾಡಿಲ್ಲ. ಈಗ ಜಪಾನ್​ನಲ್ಲಿ ಕಲೆಕ್ಷನ್ ಹೆಚ್ಚುತ್ತಿರುವುದರಿಂದ ಸಿನಿಮಾದ ಒಟ್ಟಾರೆ ಗಳಿಕೆ ಹೆಚ್ಚಲಿದೆ. ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಿದರೆ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ಇನ್ನಷ್ಟೇ ಸೀಕ್ವೆಲ್ ಬರಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಈಡಿ ತನಿಖೆ ಸಿಎಂ, ಡಿಸಿಎಂರಲ್ಲಿ ಭಯ ಮತ್ತು ಆತಂಕ ಮೂಡಿಸಿದೆ: ವಿಜಯೇಂದ್ರ
ಈಡಿ ತನಿಖೆ ಸಿಎಂ, ಡಿಸಿಎಂರಲ್ಲಿ ಭಯ ಮತ್ತು ಆತಂಕ ಮೂಡಿಸಿದೆ: ವಿಜಯೇಂದ್ರ
ಕಾರವಾರ ಜಿಲ್ಲೆಯಲ್ಲಿ ಗುಡ್ಡ ಕುಸಿತದ ಮತ್ತೊಂದು ಪ್ರಕರಣ, ಪ್ರಾಣಾಪಾಯವಿಲ್ಲ
ಕಾರವಾರ ಜಿಲ್ಲೆಯಲ್ಲಿ ಗುಡ್ಡ ಕುಸಿತದ ಮತ್ತೊಂದು ಪ್ರಕರಣ, ಪ್ರಾಣಾಪಾಯವಿಲ್ಲ
ಸದನದ ಬಾವಿಗಿಳಿದು ಬಿಜೆಪಿ ಶಾಸಕರ ಪ್ರತಿಭಟನೆ, ಸಿದ್ದರಾಮಯ್ಯ ಅಸಹಾಯಕ
ಸದನದ ಬಾವಿಗಿಳಿದು ಬಿಜೆಪಿ ಶಾಸಕರ ಪ್ರತಿಭಟನೆ, ಸಿದ್ದರಾಮಯ್ಯ ಅಸಹಾಯಕ
ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಯಾವತ್ತೂ ಕಡಿಮೆಯಾಗಲ್ಲ: ಸಿದ್ದರಾಮಯ್ಯ
ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಯಾವತ್ತೂ ಕಡಿಮೆಯಾಗಲ್ಲ: ಸಿದ್ದರಾಮಯ್ಯ
ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ: ಮಾಗುಂಡಿ ಸೇತುವೆ ಮುಳುಗಡೆ, ಸಂಪರ್ಕ ಕಡಿತ
ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ: ಮಾಗುಂಡಿ ಸೇತುವೆ ಮುಳುಗಡೆ, ಸಂಪರ್ಕ ಕಡಿತ
ಭಾರೀ ಗಾಳಿಗೆ ಅಂಗಡಿಗಳ ಮೇಲೆ ಉರುಳಿ ಬಿದ್ದ ಮೊಬೈಲ್​ ಟವರ್; ತಪ್ಪಿದ ಅನಾಹುತ
ಭಾರೀ ಗಾಳಿಗೆ ಅಂಗಡಿಗಳ ಮೇಲೆ ಉರುಳಿ ಬಿದ್ದ ಮೊಬೈಲ್​ ಟವರ್; ತಪ್ಪಿದ ಅನಾಹುತ
ಪ್ರತಿ ವಿಷಯಕ್ಕೂ ಅಶ್ವಥ್ ನಾರಾಯಣ ಎದ್ದು ನಿಂತು ಮಾತಾಡೋದು ಸರಿಯಲ್ಲ: ಸಿಎಂ
ಪ್ರತಿ ವಿಷಯಕ್ಕೂ ಅಶ್ವಥ್ ನಾರಾಯಣ ಎದ್ದು ನಿಂತು ಮಾತಾಡೋದು ಸರಿಯಲ್ಲ: ಸಿಎಂ
ಅಶೋಕ್​ಗೆ ಸದನದಲ್ಲೇ ಮುಜುಗರವಾಗುವಂತೆ ಟಾಂಗ್ ಕೊಟ್ಟ ಯತ್ನಾಳ್
ಅಶೋಕ್​ಗೆ ಸದನದಲ್ಲೇ ಮುಜುಗರವಾಗುವಂತೆ ಟಾಂಗ್ ಕೊಟ್ಟ ಯತ್ನಾಳ್
ದರ್ಶನ್ ನೋಡಲು ಬಂದು ನಿರಾಶರಾಗಿ ತೆರಳಿದ ನಟ ಶ್ರೀಕಿ
ದರ್ಶನ್ ನೋಡಲು ಬಂದು ನಿರಾಶರಾಗಿ ತೆರಳಿದ ನಟ ಶ್ರೀಕಿ
ಉಡುಪಿಯಲ್ಲಿ ಮುಂದುವರೆದ ನಿರಂತರ ಮಳೆ: ಮತ್ತೊಂದು ಗುಡ್ಡ ಕುಸಿಯುವ ಭೀತಿ!
ಉಡುಪಿಯಲ್ಲಿ ಮುಂದುವರೆದ ನಿರಂತರ ಮಳೆ: ಮತ್ತೊಂದು ಗುಡ್ಡ ಕುಸಿಯುವ ಭೀತಿ!