ಮುಹೂರ್ತ ಕೇಳಿ ಹೊಸ ಸಿನಿಮಾ ಆರಂಭಿಸಲಿದ್ದಾರೆ ರಾಜಮೌಳಿ

‘ಆರ್​ಆರ್​ಆರ್’ ಸಿನಿಮಾ ಗೆಲುವಿನ ಬಳಿಕ ರಾಜಮೌಳಿ ಅವರ ಸಂಪೂರ್ಣ ಗಮನ ‘SSMB29’ ಕಡೆ ಇದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರಕ್ಕೆ ಮಹೇಶ್ ಬಾಬು ಹೀರೋ. ಹೊಸ ಸಿನಿಮಾ ಆರಂಭಕ್ಕೆ ರಾಜಮೌಳಿ ಜ್ಯೋತಿಷ್ಯದ ಮೊರೆ ಹೋಗಿದ್ದಾರೆ.

ಮುಹೂರ್ತ ಕೇಳಿ ಹೊಸ ಸಿನಿಮಾ ಆರಂಭಿಸಲಿದ್ದಾರೆ ರಾಜಮೌಳಿ
ಹೊಸ ಸಿನಿಮಾ ಆರಂಭಕ್ಕೆ ಜ್ಯೋತಿಷ್ಯದ ಮೊರೆ ಹೋದ ರಾಜಮೌಳಿ
Follow us
ರಾಜೇಶ್ ದುಗ್ಗುಮನೆ
|

Updated on: Jul 11, 2024 | 6:58 AM

ನಿರ್ದೇಶಕ ರಾಜಮೌಳಿ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು. ಅವರ ಜೊತೆ ಸಿನಿಮಾ ಮಾಡಬೇಕು ಎಂದು ಅನೇಕ ಸ್ಟಾರ್​ಗಳು ಕಾದು ಕುಳಿತಿರುತ್ತಾರೆ. ಆದರೆ, ಎಲ್ಲರಿಗೂ ಅವರ ಜೊತೆ ಕೆಲಸ ಮಾಡೋ ಅವಕಾಶ ಸಿಗುವುದಿಲ್ಲ. ಈ ರೀತಿ ಅವಕಾಶ ಸಿಕ್ಕ ಮೇಲೆ ಕೆಲವು ವರ್ಷ ಅವರು ಬೇರೆ ಯಾವುದೇ ಸಿನಿಮಾನೂ ಒಪ್ಪಿಕೊಳ್ಳುವಂತಿಲ್ಲ. ಈಗ ಮಹೇಶ್ ಬಾಬು ಅವರ ಜೊತೆಗಿನ ಹೊಸ ಸಿನಿಮಾದ ತಯಾರಿಯಲ್ಲಿ ರಾಜಮೌಳಿ ಇದ್ದಾರೆ. ಹೊಸ ಸಿನಿಮಾ ಮುಹೂರ್ತಕ್ಕೆ ರಾಜಮೌಳಿ ಅವರು ಜ್ಯೋತಿಷ್ಯದ ಮೊರೆ ಹೋಗಿದ್ದಾರೆ.

ಸದ್ಯ ಆಷಾಢ ಮಾಸ ನಡೆಯುತ್ತಿದೆ. ಜೂನ್ 23ರಿಂದ ಜುಲೈ 21ರವರೆಗೆ ಆಷಾಢ ಮಾಸ ಇರುತ್ತದೆ. ಈ ಸಮಯದಲ್ಲಿ ಒಳ್ಳೆಯ ಕೆಲಸ ಮಾಡಲು ಯಾರೂ ಆಸಕ್ತಿ ತೋರಿಸುವುದಿಲ್ಲ. ಈ ಕಾರಣದಿಂದಲೇ ರಾಜಮೌಳಿ ಅವರು ಹೊಸ ಸಿನಿಮಾ ಮುಹೂರ್ತವನ್ನು ಈ ಸಮಯದಲ್ಲಿ ಮಾಡದೆ ಇರಲು ನಿರ್ಧರಿಸಿದ್ದಾರೆ.

ರಾಜಮೌಳಿ ಅವರು ಈ ರೀತಿಯ ವಿಚಾರಗಳನ್ನು ಹೆಚ್ಚು ನಂಬುತ್ತಾರಂತೆ. ಹೀಗಾಗಲೇ ಸಿನಿಮಾನ ಆಷಾಢದಲ್ಲಿ ಪ್ರಾರಂಭಿಸೋದು ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ರಾಜಮೌಳಿ ಅವರು ಆಗಾಗ ದೇವಸ್ಥಾನಗಳಿಗೂ ಭೇಟಿ ನೀಡುತ್ತಾ ಇರುತ್ತಾರೆ. ಅವರು ಹೆಚ್ಚೆಚ್ಚು ಪೂಜೆ ಪುನಸ್ಕಾರಗಳನ್ನು ಮಾಡಿಸುತ್ತಾರೆ.

ರಾಜಮೌಳಿ ಹಾಗೂ ಮಹೇಶ್ ಬಾಬು ಚಿತ್ರಕ್ಕೆ ‘SSMB29’ ಎನ್ನುವ ಶೀರ್ಷಿಕೆ ಇಡಲಾಗಿದೆ. ರಾಜಮೌಳಿ ಅವರು ನಿರ್ದೇಶನಗಳ ಮೂಲಕ ತಮ್ಮ ಪವರ್​ನ ತೋರಿಸಿದ್ದಾರೆ. ಅದೇ ರೀತಿ ಮಹೇಶ್ ಬಾಬು ಅವರು ಹಲವುಸೂಪರ್ ಹಿಟ್ ಚಿತ್ರಗಳನ್ನು ನೀಡಿ ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಇವರು ಸಿನಿಮಾ ಮಾಡುತ್ತಿದ್ದಾರೆ ಎಂದಾಗ ಸಹಜವಾಗಿಯೇ ಕುತೂಹಲ ಸೃಷ್ಟಿ ಆಗಿದೆ.

ಇದನ್ನೂ ಓದಿ: ಆಸ್ಕರ್​ ಅಕಾಡೆಮಿಯ ಸದಸ್ಯತ್ವ ಪಡೆಯಲು ರಾಜಮೌಳಿಗೆ ಆಹ್ವಾನ; ಸಿಗೋ ಸವಲತ್ತುಗಳೇನು?

ರಾಜಮೌಳಿ ಚಿತ್ರಕ್ಕಾಗಿ ಮಹೇಶ್ ಬಾಬು ಅವರು ಬಾಡಿ ಬಿಲ್ಡ್ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ವಿದೇಶಕ್ಕೆ ತೆರಳಿ ಅವರು ವಿಶೇಷ ಫೈಟ್​ಗಳನ್ನು ಕಲಿತು ಬಂದಿದ್ದಾರೆ ಎಂದು ಹೇಳಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು