ಹನುಮ ಜಯಂತಿ: ಹನುಮಾನ್ ತೇರು ಎಳೆದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

Edited By:

Updated on: Apr 12, 2025 | 5:07 PM

ಹನುಮ ಜಯಂತಿಯಂದು ಹನುಮನಿಗೆ ನಮನ ಸಲ್ಲಿಸಿದ ಪ್ರಲ್ಹಾದ್ ಜೋಶಿ: ಕರ್ನಾಟಕದ ವಿವಿಧೆಡೆಗಳಲ್ಲಿ ಇಂದು ಹನುಮ ಜಯಂತಿ ಆಚರಿಸಲಾಯಿತು. ಬೆಳಗಾವಿ ಜಿಲ್ಲೆಯ ಕುಲಗೋಡು ಗ್ರಾಮದಲ್ಲಿರುವ ಹನುಮಾನ್ ದೇವಸ್ಥಾನಕ್ಕೆ ತೆರಳಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪೂಜೆ ಸಲ್ಲಿಸಿದರು. ನಂತರ ರಥ ಎಳೆದು ಹನುಮನ ಸೇವೆ ಮಾಡಿದರು.

ಹುಬ್ಬಳ್ಳಿ, ಏಪ್ರಿಲ್ 12: ಇಂದು ಹನುಮ ಜಯಂತಿ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಮ್ಮ ಮನೆದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ, ರಥ ಎಳೆದು ಭಕ್ತಿ ಸಮರ್ಪಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಕುಲಗೋಡು ಗ್ರಾಮದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕುಟುಂಬ ಸಮೇತ ಹೋಗಿ, ವಿಶೇಷ ಪೂಜೆ ಸಲ್ಲಿಸಿ, ರಥ ಎಳೆದು ಭಕ್ತಿ ಸಮರ್ಪಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ