ಕಲಬುರಗಿಯಲ್ಲಿ ಟಿವಿ9 ನೆಟ್ವರ್ಕ್ ಆಯೋಜಿಸುತ್ತಿರುವ 2-ದಿನದ ಎಜುಕೇಶನ್ ಎಕ್ಸ್ಪೋ ಇಂದಿನಿಂದ
ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಕಲಬುರಗಿಯಲ್ಲಿ ಟಿವಿ9 ನೆಟ್ವರ್ಕ್ ಸತತ ಮೂರನೇ ವರ್ಷ ಎಜುಕೇಶನ್ ಸಮ್ಮಿಟ್ ಆಯೋಜಿಸುತ್ತಿದೆ. ಪ್ರತಿಸಲದಂತೆ ಈ ವರ್ಷವೂ ನೂರಾರು ವಿದ್ಯಾರ್ಥಿಗಳು ಸಮ್ಮಿಟ್ಗೆ ಬರುತ್ತಿದ್ದಾರೆ. ಒಂದೇ ಸೂರಿನಡಿ ವಿದ್ಯಾರ್ಥಿಗಳಿಗೆ ವಿವಿಧ ಕೋರ್ಸ್ಗಳ ಬಗ್ಗೆ ವಿವರವಾದ ಮಾಹಿತಿ ಸಿಗುತ್ತಿದೆ. ಇಂದರಿಂದಾಗಿ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಕಾಲೇಜಿಂದ ಕಾಲೇಜಿಗೆ ಅಲೆಯುವುದು ತಪ್ಪುತ್ತದೆ.
ಕಲಬುರಗಿ, ಏಪ್ರಿಲ್ 12: ಮೊನ್ನೆಯಷ್ಟೇ ಬೆಂಗಳೂರು ಅರಮನೆ ಮೈದಾನದಲ್ಲಿ ಅತ್ಯಂತ ಯಶಸ್ವೀಯಾಗಿ ಎಜುಕೇಶನ್ ಸಮ್ಮಿಟ್ ನಡೆಸಿದ್ದ ಟಿವಿ9 ನೆಟ್ವರ್ಕ್ ಇಂದಿನಿಂದ ಕಲಬುರಗಿಯ ಡಾ ಬಸವರಾಜಪ್ಪ ಅಪ್ಪ ಮೆಮೋರಿಯಲ್ ಹಾಲ್ನಲ್ಲಿ (Dr Basavarajappa Appa Memorial Hall) ಎರಡು ದಿನಗಳ ಎಜುಕೇಶನ್ ಎಕ್ಸ್ಪೋ ನಡೆಸುತ್ತಿದೆ. ದೇಶದ ಹಲವಾರು ಭಾಗಗಳ ಹೆಸರಾಂತ ಮತ್ತು ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳು ಸಮ್ಮಿಟ್ ನಲ್ಲಿ ಭಾಗಿಯಾಗಿವೆ. ಕಲಬುರಗಿ ನಗರ ಮತ್ತು ಸುತ್ತಮುತ್ತಲಿನ ಉರುಗಳ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿ ತಮ್ಮ ಮುಂದಿನ ಶಿಕ್ಷಣ ಮತ್ತು ಭವಿಷ್ಯಕ್ಕಾಗಿ ಯಾವ ವ್ಯಾಸಂಗ, ಯಾವ ಶೈಕ್ಷಣಿಕ ಸಂಸ್ಥೆ ಉತ್ತಮ ಅನ್ನುವ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ