Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರುನಿಂದ ವಿಜಯಪುರಕ್ಕೆ ಬಸ್ಸಲ್ಲಿ ಪ್ರಯಾಣಿಸಿ ಮತ್ತೊಮ್ಮೆ ಸರಳತೆ ಪ್ರದರ್ಶಿಸಿದ ಸಚಿವ ಕೃಷ್ಣ ಭೈರೇಗೌಡ

ಬೆಂಗಳೂರುನಿಂದ ವಿಜಯಪುರಕ್ಕೆ ಬಸ್ಸಲ್ಲಿ ಪ್ರಯಾಣಿಸಿ ಮತ್ತೊಮ್ಮೆ ಸರಳತೆ ಪ್ರದರ್ಶಿಸಿದ ಸಚಿವ ಕೃಷ್ಣ ಭೈರೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 12, 2025 | 3:06 PM

ಕೃಷ್ಣ ಭೈರೇಗೌಡರು ಬೆಂಗಳೂರು ನಗರದಲ್ಲಿ ಮೆಟ್ರೋ ರೈಲುಗಳಲ್ಲಿ ಒಂಟಿಯಾಗಿ ಸಂಚಾರ ಮಾಡುವ ವಿಡಿಯೋಗಳನ್ನು ನಾವು ಬಿತ್ತರಿಸಿದ್ದೇವೆ. ರಾಜ್ಯದೆಲ್ಲೆಡೆ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ ಮತ್ತು ಪ್ರದರ್ಶನಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಂದಾಯ ಸಚಿವ ತಮ್ಮ ಸರಳತೆ ಮತ್ತು ದಕ್ಷತೆಯಿಂದ ಡಿಫರೆಂಟ್ ಅನಿಸುತ್ತಾರೆ. ತಮ್ಮ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಅವರು ಗೌರವದಿಂದ ಮಾತಾಡುತ್ತಾರೆ, ಬೇರೆ ಮಿನಿಸ್ಟ್ರುಗಳ ಹಾಗೆ ಏಕವಚನದಲ್ಲಿ ಮಾತಾಡಲ್ಲ.

ವಿಜಯಪುರ, ಏಪ್ರಿಲ್ 12: ರಾಜ್ಯದ ಜನತೆ ಕಂದಾಯ ಸಚಿವ ಕೃಷ್ಣ ಬೈರೇಗೌಡರ ಸರಳತೆ, ದಕ್ಷತೆ ಮತ್ತು ಪಾರದರ್ಶಕತೆಯ ಬಗ್ಗೆ ಮಾತಾಡುತ್ತದೆ ಮತ್ತು ಏಪ್ರಿಲ್ 10ರಂದು ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆದ ರಾಷ್ಟ್ರೀಯ ಭೂಮಾಪನ ದಿನಾಚರಣೆಯ (National Survey Day) ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಕಿರಿಯ ಸಹೋದ್ಯೋಗಿಯ ಕಾರ್ಯವೈಖರಿಯನ್ನು ಮನಸಾರೆ ಕೊಂಡಾಡಿದ್ದರು. ಕೃಷ್ಣ ಭೈರೇಗೌಡ ಇಂದು ಬೆಳಗ್ಗೆ ಬೆಂಗಳೂರುನಿಂದ ವಿಜಯಪುರಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕಲ್ಯಾಣರಥ ಬಸ್ಸಲ್ಲಿ ಪ್ರಯಾಣಿಸಿ ತಮ್ಮ ಸರಳತೆಯ ಮತ್ತೊಂದು ನಿದರ್ಶನ ನೀಡಿದರು.

ಇದನ್ನೂ ಓದಿ:   ಹುಣಸೂರು ತಾಲ್ಲೂಕು ಕಚೇರಿಯಲ್ಲಿ ಅಧಿಕಾರಿಗಳು ಸಚಿವ ಕೃಷ್ಣ ಬೈರೇಗೌಡರ ಮುಂದೆ ಕೈಕಟ್ಟಿ ನಿಂತಿದ್ದು ಯಾಕೆ ಗೊತ್ತಾ?

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ