Asia Cup 2025: ಏಕಾಂಗಿಯಾಗಿ ದುಬೈಗೆ ಹಾರಿದ ಹಾರ್ದಿಕ್ ಪಾಂಡ್ಯ; ವಿಡಿಯೋ
Asia Cup 2025: ಗುರುವಾರ ಹಾರ್ದಿಕ್ ಪಾಂಡ್ಯ ಮುಂಬೈ ವಿಮಾನ ನಿಲ್ದಾಣದಿಂದ ದುಬೈಗೆ ಪ್ರಯಾಣ ಬೆಳೆಸಿದರು. ಹಾರ್ದಿಕ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣ, ಅಲ್ಲಿದ್ದ ಛಾಯಾಗ್ರಾಹಕರು ಅವರನ್ನು ಸ್ವಾಗತಿಸಿ, ಫೋಟೋಗೆ ಪೋಸ್ ನೀಡುವಂತೆ ಕೇಳಿಕೊಂಡರು. ಪಾಂಡ್ಯ ನಿಲ್ಲಲಿಲ್ಲ ಆದರೆ ಅವರು ಹಿಂದೆ ತಿರುಗಿ ಫೋಟೋ ತೆಗೆದುಕೊಳ್ಳಲು ಅವಕಾಶ ನೀಡಿದರು.
2025 ರ ಏಷ್ಯಾಕಪ್ಗಾಗಿ ಟೀಂ ಇಂಡಿಯಾ ಸೆಪ್ಟೆಂಬರ್ 4 ರಂದು ದುಬೈಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ವರದಿಯಾಗಿತ್ತು. ಅದರಂತೆ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಇಂದು ಮುಂಬೈನಿಂದ ದುಬೈಗೆ ವಿಮಾನ ಹತ್ತಿದ್ದಾರೆ. ಸಾಮಾನ್ಯವಾಗಿ ಯಾವುದೇ ಪ್ರವಾಸಕ್ಕೂ ಟೀಂ ಇಂಡಿಯಾದ ಎಲ್ಲಾ ಆಟಗಾರರು ಮುಂಬೈನಲ್ಲಿ ಒಟ್ಟುಗೂಡುತ್ತಾರೆ, ಆ ನಂತರ ಅಲ್ಲಿಂದ ಪ್ರಯಾಣ ಬೆಳೆಸುತ್ತಾರೆ. ಆದರೆ ಈ ಬಾರಿ ಎಲ್ಲಾ ಆಟಗಾರರು ವಿಭಿನ್ನ ಸಮಯಗಳಲ್ಲಿ ತಮ್ಮ ತಮ್ಮ ನಗರಗಳಿಂದಲೇ ದುಬೈಗೆ ವಿಮಾನ ಹತ್ತಲಿದ್ದಾರೆ. ಆಟಗಾರರ ಲಾಜಿಸ್ಟಿಕ್ಸ್ ಮತ್ತು ಪ್ರಯಾಣದ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಹೀಗಾಗಿ ಹಾರ್ದಿಕ್ ತಂಡದೊಂದಿಗೆ ಹೋಗದೆ ಒಬ್ಬರೇ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಇದೀಗ ಅದರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ವಿಮಾನ ಹತ್ತಿದ ಹಾರ್ದಿಕ್
ಗುರುವಾರ ಹಾರ್ದಿಕ್ ಪಾಂಡ್ಯ ಮುಂಬೈ ವಿಮಾನ ನಿಲ್ದಾಣದಿಂದ ದುಬೈಗೆ ಪ್ರಯಾಣ ಬೆಳೆಸಿದರು. ಹಾರ್ದಿಕ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣ, ಅಲ್ಲಿದ್ದ ಛಾಯಾಗ್ರಾಹಕರು ಅವರನ್ನು ಸ್ವಾಗತಿಸಿ, ಫೋಟೋಗೆ ಪೋಸ್ ನೀಡುವಂತೆ ಕೇಳಿಕೊಂಡರು. ಪಾಂಡ್ಯ ನಿಲ್ಲಲಿಲ್ಲ ಆದರೆ ಅವರು ಹಿಂದೆ ತಿರುಗಿ ಫೋಟೋ ತೆಗೆದುಕೊಳ್ಳಲು ಅವಕಾಶ ನೀಡಿದರು.
ಏಷ್ಯಾಕಪ್‌ನಲ್ಲಿ ಪಾಂಡ್ಯ ವಿಫಲ
ಏಷ್ಯಾಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಪ್ರದರ್ಶನ ವಿಶೇಷವೇನಲ್ಲ. ಈ ಟೂರ್ನಮೆಂಟ್‌ನ ಟಿ20 ಸ್ವರೂಪದಲ್ಲಿ, ಪಾಂಡ್ಯ 16.6 ಸರಾಸರಿಯಲ್ಲಿ ಕೇವಲ 83 ರನ್‌ಗಳನ್ನು ಬಾರಿಸಿದ್ದು, ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಆದಾಗ್ಯೂ, ಪಾಂಡ್ಯ ಬೌಲಿಂಗ್‌ನಲ್ಲಿ ತಮ್ಮ ಶಕ್ತಿಯನ್ನು ತೋರಿಸಿದ್ದು, 11 ವಿಕೆಟ್‌ಗಳನ್ನು ಪಡೆದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ