ಕೆಆರ್ ಮಾರ್ಕೆಟ್ ಜಿಕೆವಿಕೆಗೆ ಶಿಫ್ಟ್ ಆಗುತ್ತಾ? ಎಲ್ಲಾ ಗೊಂದಲಗಳಿಗೆ ತೆರೆ
ಸಿಲಿಕಾನ್ ಸಿಟಿ ಬೆಂಗಳೂರಿನ ಬಹು ಬೇಡಿಕೆಯ ಕೆ ಆರ್ ಮಾರ್ಕೆಟ್ ನಿಂದ ಹೂವಿನ ಮಾರ್ಕೆಟ್ ಜಿಕೆವಿಕೆಗೆ ಶಿಫ್ಟ್ ಆಗಲಿದೆ . ಈಗಾಗಲೇ ಹೊಸ ಹೂವಿನ ಮಾರುಕಟ್ಟೆಗೆ ಸ್ಥಳ ಕೂಡ ನಿಗದಿಯಾಗಿದೆ. ನಗರದ ಹೆಬ್ಬಾಳ ಬಳಿ ಇರೋ ಜಿಕೆವಿಕೆ ಆವರಣಕ್ಕೆ ಹೂವಿನ ಮಾರ್ಕೆಟ್ ಶೀಘ್ರದಲ್ಲೇ ಸ್ಥಳಾಂತರವಾಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದ್ರೆ, ಜಿಕೆವಿಕೆಗೆ ಮಾರ್ಕೆಟ್ ಹಾಗೂ ಕೆಆರ್ ಮಾರ್ಕೆಟ್ ಗೂ ಸಂಬಂಧವೇ ಇಲ್ಲ ಎನ್ನುವ ಮಾಹಿತಿ ತಿಳಿದುಬಂದಿದೆ. ಈ ಬಗ್ಗೆ ಸ್ವತಃ ಸೌತ್ ಇಂಡಿಯಾ ಪ್ಲವರ್ ಆಸೋಸಿಯೇಷನ್ ಅಧ್ಯಕ್ಷ ಅರಂವಿಂದ್ ಪ್ರತಿಕ್ರಿಯಿಸಿದ್ದು , ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಬೆಂಗಳೂರು, (ಸೆಪ್ಟೆಂಬರ್ 04): ಸಿಲಿಕಾನ್ ಸಿಟಿ ಬೆಂಗಳೂರಿನ ಬಹು ಬೇಡಿಕೆಯ ಕೆ ಆರ್ ಮಾರ್ಕೆಟ್ ನಿಂದ ಹೂವಿನ ಮಾರ್ಕೆಟ್ ಜಿಕೆವಿಕೆಗೆ ಶಿಫ್ಟ್ ಆಗಲಿದೆ . ಈಗಾಗಲೇ ಹೊಸ ಹೂವಿನ ಮಾರುಕಟ್ಟೆಗೆ ಸ್ಥಳ ಕೂಡ ನಿಗದಿಯಾಗಿದೆ. ನಗರದ ಹೆಬ್ಬಾಳ ಬಳಿ ಇರೋ ಜಿಕೆವಿಕೆ ಆವರಣಕ್ಕೆ ಹೂವಿನ ಮಾರ್ಕೆಟ್ ಶೀಘ್ರದಲ್ಲೇ ಸ್ಥಳಾಂತರವಾಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದ್ರೆ, ಜಿಕೆವಿಕೆಗೆ ಮಾರ್ಕೆಟ್ ಹಾಗೂ ಕೆಆರ್ ಮಾರ್ಕೆಟ್ ಗೂ ಸಂಬಂಧವೇ ಇಲ್ಲ ಎನ್ನುವ ಮಾಹಿತಿ ತಿಳಿದುಬಂದಿದೆ. ಈ ಬಗ್ಗೆ ಸ್ವತಃ ಸೌತ್ ಇಂಡಿಯಾ ಪ್ಲವರ್ ಆಸೋಸಿಯೇಷನ್ ಅಧ್ಯಕ್ಷ ಅರಂವಿಂದ್ ಪ್ರತಿಕ್ರಿಯಿಸಿದ್ದು, ಕೆ ಆರ್ ಮಾರುಕಟ್ಟೆ ಹಾಗೂ ಜಿಕೆವಿಕೆಗೆ ಶಿಫ್ಟ್ ಆಗುತ್ತಿರುವ ಮಾರ್ಕೆಟ್‌ಗೂ ಸಂಬಂಧ ಇಲ್ಲ. ಇದರ ಬಗ್ಗೆ ಇದೀಗ ಆರೋಪ ಮಾಡಿದ್ದಾರೆ. ದೇಶ ವಿದೇಶಗಳಿಗೆ ಹೂವುಗಳು ರಫ್ತಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ನೀಡಬೇಕ್ಕೆಂದು ಇತ್ತು. ಹೀಗಾಗಿ ಕಟ್ಟಡ ನಿರ್ಮಾಣವಾಬೇಕು ಅಂತ ಕನಸು ಇತ್ತು. ನೂರು ಕೋಟಿ ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಲು ಸಿದ್ದತೆ ನಡೆದಿದೆ. ದಿನ ನಿತ್ಯದ ಹೂ ಮಾರುಕಟ್ಟೆ ಜಿಕೆವಿಕೆಗೆ ಶಿಫ್ಟ್ ಆಗುತ್ತಿಲ್ಲ. ಬದಲಿಗೆ ದೇಶ- ವಿದೇಶಕ್ಕೆ ರಫ್ತಾಗುವ ಡೆಕೋರೇಷನ್ ಫ್ಲವರ್ ಮಾರುಕಟ್ಟೆ ಮಾತ್ರ ಜಿಕೆವಿಕೆನಲ್ಲಿ ತೆರೆಯಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

