ಪುನೀತ್ ಹೇಳಿದ್ದ ಕಿವಿಮಾತನ್ನು ನೆನಪಿಸಿಕೊಂಡ ನಟ ಹರೀಶ್ ರಾಜ್
ಪುನೀತ್ ಅವರನ್ನು ಬೆಂಗಳೂರಿನ ಕಂಠೀರವ ಸ್ಟುಡಿಯೋದ ಆವರಣದಲ್ಲಿ ಮಣ್ಣು ಮಾಡಲಾಗಿದೆ. ಇಂದು (ನವೆಂಬರ್ 4) ಪುನೀತ್ ಸಮಾಧಿ ಜಾಗಕ್ಕೆ ಅವರು ಭೇಟಿ ಮಾಡಿದರು.
ಪುನೀತ್ ರಾಜ್ಕುಮಾರ್ ಅವರು ಎಲ್ಲರ ಜತೆ ಬೆರೆಯುತ್ತಿದ್ದರು. ಎಲ್ಲರಿಗೂ ಅವರು ಸರಿಯಾದ ಆದ್ಯತೆ ಕೊಡುತ್ತಿದ್ದರು. ಎಲ್ಲರನ್ನೂ ಪುನೀತ್ ರಾಜ್ಕುಮಾರ್ ಒಂದೇ ರೀತಿ ನೋಡುತ್ತಿದ್ದರು. ಅವರನ್ನು ಕಳೆದುಕೊಂಡು ಎಲ್ಲರೂ ನೋವು ಅನುಭವಿಸುವಂತಾಗಿದೆ. ಈಗ ನಟ ಹರೀಶ್ ರಾಜ್ ಅವರು ಪುನೀತ್ ಅವರನ್ನು ನೆನಪು ಮಾಡಿಕೊಳ್ಳುವ ಕೆಲಸ ಮಾಡಿದ್ದಾರೆ.
ಪುನೀತ್ ಅವರನ್ನು ಬೆಂಗಳೂರಿನ ಕಂಠೀರವ ಸ್ಟುಡಿಯೋದ ಆವರಣದಲ್ಲಿ ಮಣ್ಣು ಮಾಡಲಾಗಿದೆ. ಇಂದು (ನವೆಂಬರ್ 4) ಪುನೀತ್ ಸಮಾಧಿ ಜಾಗಕ್ಕೆ ಅವರು ಭೇಟಿ ಮಾಡಿದರು. ಈ ವೇಳೆ ನಮನ ಸಲ್ಲಿಸಿ ಹರೀಶ್ ರಾಜ್ ಮಾತನಾಡಿದರು. ಜತೆಗೆ ಹಳೆಯ ಘಟನೆಯನ್ನು ಅವರು ನೆನಪಿಸಿಕೊಂಡರು. ಪುನೀತ್ ಜತೆ ಶೂಟಿಂಗ್ನಲ್ಲಿ 15 ದಿನ ಒಟ್ಟಾಗಿ ಕಳೆದಿದ್ದರು ಹರೀಶ್ ರಾಜ್. ಆ ದಿನವನ್ನು ನೆನಪು ಮಾಡಿಕೊಂಡಿದ್ದಾರೆ ಅವರು.
ಇದನ್ನೂ ಓದಿ: ವಿಶೇಷ ಹಾಡಿನ ಮೂಲಕ ಪುನೀತ್ಗೆ ನಮನ ಸಲ್ಲಿಸಿದ ಯುವತಿ
ಎದೆ ತುಂಬಿ ಹಾಡುವೆನು ವೇದಿಕೆ ಮೇಲೆ ಪುನೀತ್ಗೆ ಸ್ವರ ನಮನ; ಗುರು ಕಿರಣ್ ಹೇಳಿದ್ದೇನು?