ದರ್ಶನ್ ಹಾಗೂ ನಾನು ಒಂದೇ ಸಿನಿಮಾದಲ್ಲಿ ನಾಯಕರಾಗಿದ್ದೆವು: ಹರೀಶ್ ರಾಜ್
Harish Raj Movies: ನಟ ಹರೀಶ್ ರಾಜ್ ಕನ್ನಡದ ಪ್ರತಿಭಾವಂತ ನಟರಲ್ಲೊಬ್ಬರು. ತಾವು ಹಾಗೂ ದರ್ಶನ್ ಒಟ್ಟಿಗೆ ನಾಯಕರಾಗಿ ನಟಿಸಿದ್ದ ಸಿನಿಮಾ ನೆನಪು ಮಾಡಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ (Sandalwood) ಪ್ರತಿಭಾವಂತ ನಟರಲ್ಲಿ ಹರೀಶ್ ರಾಜ್ (Harish Raj) ಸಹ ಒಬ್ಬರು. ಧಾರಾವಾಹಿಯಿಂದ ನಟನೆ ಆರಂಭಿಸಿ ಹಲವಾರು ನೆನಪುಳಿಯುವ ಸಿನಿಮಾಗಳಲ್ಲಿ ಹರೀಶ್ ರಾಜ್ ನಟಿಸಿದ್ದಾರೆ. ಇತ್ತೀಚೆಗಷ್ಟೆ ನಟ ದರ್ಶನ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಸಂಭ್ರಮ ಆಚರಿಸಿಕೊಂಡರು. ಅಂದಹಾಗೆ ಹರೀಶ್ ರಾಜ್ ಚಿತ್ರರಂಗಕ್ಕೆ ಬಂದು 25ವರ್ಷಗಳಾಗಿವೆ. ಈ ಇಬ್ಬರು ನಟರ ಒಂದು ಸಾಮ್ಯತೆಯೆಂದರೆ ಈ ಇಬ್ಬರೂ ಸಹ ಒಂದೇ ಸಿನಿಮಾದಲ್ಲಿ ನಾಯಕ ನಟರಾಗಿದ್ದರು. 2003 ರಲ್ಲಿ ಬಿಡುಗಡೆ ಆದ ‘ನೀನಂದ್ರೆ ಇಷ್ಟ’ ಸಿನಿಮಾನಲ್ಲಿ ಹರೀಶ್ ರಾಜ್ ಹಾಗೂ ದರ್ಶನ್ ಇಬ್ಬರೂ ನಾಯಕ ನಟರು. ದರ್ಶನ್ ಆಗಷ್ಟೆ ‘ಮೆಜೆಸ್ಟಿಕ್’, ‘ಕರಿಯ’ ಸಿನಿಮಾಗಳನ್ನು ಮುಗಿಸಿದ್ದರು. 25 ವರ್ಷ ಪೂರೈಸಿರುವ ಖುಷಿಯಲ್ಲಿ ಹಳೆಯ ನೆನಪುಗಳನ್ನು ಹರೀಶ್ ರಾಜ್ ಮೆಲಕು ಹಾಕಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos