ಹರೀಶ್ ರಾಯ್ ಅಂತಿಮ ದರ್ಶನ ಪಡೆದ ಯಶ್: ಎಲ್ಲೂ ಹೇಳಬೇಡ ಎಂದು ಪುತ್ರನಿಗೆ ಹಣ ಸಹಾಯ
ಕ್ಯಾನ್ಸರ್ನಿಂದ ಬಳಲುತ್ತಿದ್ದ ಸ್ಯಾಂಡಲ್ವುಡ್ ಖಳನಟ ಹರೀಶ್ ರಾಯ್ ಅವರು ಗುರುವಾರ ನಿಧನರಾಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಂತಿಮ ನಮನ ಸಲ್ಲಿಸಿದ್ದಾರೆ. ಈ ವೇಳೆ ಹರೀಶ್ ಅವರ ಮಕ್ಕಳಿಗೆ ಯಶ್ ಧೈರ್ಯ ತುಂಬಿದ್ದಾರೆ. ಕಿರಿಯ ಪುತ್ರನನ್ನು ಕರೆದು ಆರ್ಥಿಕ ನೆರವು ನೀಡಿದ್ದಾರೆ. ವಿಡಿಯೋ ನೋಡಿ.
ಕ್ಯಾನ್ಸರ್ನಿಂದ ಬಳಲುತ್ತಿದ್ದ ಸ್ಯಾಂಡಲ್ವುಡ್ ಖಳನಟ ಹರೀಶ್ ರಾಯ್ (Harish Roy) ಅವರು ಇಂದು ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗ ಹರೀಶ್ ರಾಯ್ ಅವರ ನಿಧನಕ್ಕೆ ಕಂಬನಿ ಮಿಡಿದಿದೆ. ನಟ ರಾಕಿಂಗ್ ಸ್ಟಾರ್ ಯಶ್, ಹರೀಶ್ ರಾಯ್ ಅವರ ಅಂತಿಮ ದರ್ಶನ ಪಡೆದು ಭಾವುಕರಾದರು. ಇನ್ನು ಇದೇ ವೇಳೆ ಯಶ್ ಅವರು ಹರೀಶ್ ರಾಯ್ ಮಕ್ಕಳಿಗೆ ಧೈರ್ಯ ತುಂಬಿದ್ದಾರೆ. ಕಿರಿಯ ಪುತ್ರ ರೋಷನ್ನನ್ನು ತಮ್ಮ ಕಾರಿನ ಒಳಗೆ ಕರೆಸಿ, ಮಾತನಾಡಿಸಿದ ಯಶ್, ಹಣ ಸಹಾಯ ಮಾಡಿದ್ದು, ಈ ಬಗ್ಗೆ ಎಲ್ಲೂ ಹೇಳಬೇಡ ಎಂದಿದ್ದಾರೆ ಎನ್ನಲಾಗಿದೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 06, 2025 07:32 PM
