ಆರೋಗ್ಯದ ವಿಚಾರದಲ್ಲಿ ಆರಂಭದಲ್ಲೇ ನಿರ್ಲಕ್ಷ್ಯ ಮಾಡಿದ್ದ ಹರೀಶ್ ರಾಯ್

Updated on: Nov 07, 2025 | 7:28 PM

ನಟ ಹರೀಶ್ ರಾಯ್ ಅವರಿಗೆ ಕ್ಯಾನ್ಸರ್ ಇತ್ತು. ಆದರೆ ಅವರು ಆರಂಭದಲ್ಲಿ ಅದರ ಬಗ್ಗೆ ನಿರ್ಲಕ್ಷ್ಯ ಮಾಡಿದರು. ಗುರುವಾರ (ನವೆಂಬರ್ 6) ಅವರು ನಿಧನರಾದರು. ಹುಟ್ಟೂರು ಉಡುಪಿಯಲ್ಲಿ ಅವರ ಅಂತ್ಯಕ್ರಿಯೆ ಮಾಡಲಾಗಿದೆ. ಆ ಬಳಿಕ ಸಹೋದರಿ ವಿದ್ಯಾ ರಾಣಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಉಡುಪಿಯಲ್ಲಿ ನಟ ಹರೀಶ್ ರಾಯ್ ಅವರ ಅಂತ್ಯಕ್ರಿಯೆ (Harish Roy Funeral) ಮಾಡಲಾಗಿದೆ. ಕ್ಯಾನ್ಸರ್​ (Cancer) ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ನ.6ರಂದು ನಿಧನರಾದರು. ಅಂತ್ಯಕ್ರಿಯೆ ಮುಗಿದ ಬಳಿಕ ಹರೀಶ್ ರಾಯ್ ಅವರ ಸಹೋದರಿ ವಿದ್ಯಾ ರಾಣಿ ಮಾತನಾಡಿದ್ದಾರೆ. ‘ಆರೋಗ್ಯವನ್ನು ಅವರು ನಿರ್ಲಕ್ಷ್ಯ ಮಾಡಿದರು. ಕೆಜಿಎಫ್ ಸಿನಿಮಾ ಮಾಡುವಾಗಲೇ ಅವರಿಗೆ ಉಸಿರಾಡಲು ಕಷ್ಟ ಆಗುತ್ತಿತ್ತು. ಉಡುಪಿಯಲ್ಲೇ ಚಿಕಿತ್ಸೆ ಕೊಡಿಸೋಣ ಅಂತ ನಾವು ಹೇಳಿದ್ದೆವು. ಆರಾಮಾಗಿ ನೋಡೋಣ ಅಂತ ಅವರು ನಿರ್ಲಕ್ಷ್ಯ ಮಾಡಿದರು. ಅನಾರೋಗ್ಯದ ಬಗ್ಗೆ ಅವರು ಸೀಕ್​ರೆಟ್ ಮಾಡಿದರು. ಯಾರಿಗಾದರೂ ಏನಾದರೂ ಸಮಸ್ಯೆ ಇದ್ದರೆ ಮೊದಲೇ ತೋರಿಸಿ. ಹಾಗೆ ಬಿಡಬೇಡಿ. ಈಗ ನೋಡಿ ಅವರು ನಮ್ಮ ಜೊತೆ ಇಲ್ಲ’ ಎಂದು ವಿದ್ಯಾ ರಾಣಿ ಅವರು ಕಣ್ಣೀರು ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More