ಬಹಳ ಡಿಫರೆಂಟ್ ಆಗಿ ನಡೆಯಲಿದೆ ಹರ್ಷಿಕಾ-ಭುವನ್ ಮದುವೆ; ಪೂರ್ತಿ ಮಾಹಿತಿ ನೀಡಿದ ಜೋಡಿ
‘ಕೊಡವ ಶೈಲಿಯ ಮದುವೆಯನ್ನು ನೋಡಲು ಎಲ್ಲ ಸ್ನೇಹಿತರು ಬರಬೇಕು. ನಮ್ಮ ಸಂಪ್ರದಾಯದಲ್ಲಿ ರಿಸೆಪ್ಷನ್ ಎಂಬುದು ಇಲ್ಲ. ಎರಡು ದಿನಗಳ ಕಾಲ ಮದುವೆ ನಡೆಯುತ್ತದೆ. ಹೆಚ್ಚು ಆಡಂಬರ ಇರುವುದಿಲ್ಲ’ ಎಂದು ಹರ್ಷಿಕಾ ಪೂಣಚ್ಚ ಹೇಳಿದ್ದಾರೆ.
ಕೊಡಗಿನ ಅಮ್ಮತ್ತಿ ಕೊಡವ ಸಮಾಜದಲ್ಲಿ ಆಗಸ್ಟ್ 23 ಹಾಗೂ 24ರಂದು ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ (Bhuvan Ponnanna) ಅವರ ಮದುವೆ ನಡೆಯಲಿದೆ. ಇಬ್ಬರೂ ಕೊಡಗಿನವರು. ಹಾಗಾಗಿ ಕೊಡವ (Kodava Community) ಸಂಪ್ರದಾಯದ ರೀತಿಯಲ್ಲಿ ಈ ವಿವಾಹ ನೆರವೇರಲಿದೆ. ಎಷ್ಟು ದಿನ ಮದುವೆ ನಡೆಯಲಿದೆ? ಯಾವೆಲ್ಲ ರೀತಿಯ ಶಾಸ್ತ್ರಗಳು ಇರಲಿವೆ ಎಂಬುದನ್ನು ಭುವನ್ ಮತ್ತು ಹರ್ಷಿಕಾ ಪೂಣಚ್ಚ ವಿವರಿಸಿದ್ದಾರೆ. ಆ ವಿಡಿಯೋ ಇಲ್ಲಿದೆ. ‘ನಮ್ಮ ಮದುವೆ ಕೊಡಗಿನಲ್ಲೇ ಆಗಬೇಕು ಎಂಬುದು ನನ್ನ ಆಸೆಯಾಗಿತ್ತು. ಅದು ಈಗ ನೆರವೇರುತ್ತಿದೆ. ಕೊಡವ ಶೈಲಿಯ ಮದುವೆಯನ್ನು ನೋಡಲು ಎಲ್ಲ ಸ್ನೇಹಿತರು ಬರಬೇಕು. ನಮ್ಮ ಸಂಪ್ರದಾಯದಲ್ಲಿ ರಿಸೆಪ್ಷನ್ ಎಂಬುದು ಇಲ್ಲ. ಎರಡು ದಿನಗಳ ಕಾಲ ಮದುವೆ ನಡೆಯುತ್ತದೆ. ಹೆಚ್ಚು ಆಡಂಬರ ಇರುವುದಿಲ್ಲ’ ಎಂದು ಹರ್ಷಿಕಾ ಪೂಣಚ್ಚ (Harshika Poonacha) ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos